Bay Leaf: ಅಡುಗೆ ಮನೆಯಲ್ಲಿ ಸಿಗೋ ಈ ಎಲೆಯಿಂದ ದೇಹದ ಬೊಜ್ಜು ಕರಗಿಸಲು ಸಾಧ್ಯ
ಕೆಲವು ಪಲಾವ್ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಯುವ ನೀರಿಗೆ ಹಾಕಿ. ಕೆಲವು ಸೆಕೆಂಡುಗಳ ಕಾಲ ಅದನ್ನು ಚೆನ್ನಾಗಿ ಬೇಯಿಸಿ. ನಂತರ ಆ ನೀರನ್ನು ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ಆರೋಗ್ಯಕ್ಕೆ ಉತ್ತಮವಂತೆ. ಜೊತೆಗೆ ದೇಹದ ಬೊಜ್ಜು ಕರಗುತ್ತದೆ.
ಪಲಾವ್ ಎಲೆ ಇಲ್ಲದಿದ್ದರೆ ರೈಸ್ ಬಾತ್ ಮಾಡೋದು ಕಷ್ಟ. ಈ ಎಲೆ ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು. ಇದನ್ನು ಸಾಮಾನ್ಯವಾಗಿ ಪಲಾವ್, ಸೂಪ್ ಅಥವಾ ಬಿರಿಯಾನಿಗಳಲ್ಲಿ ಬಳಸುತ್ತಾರೆ. ಇದು ಆಹಾರವನ್ನು ರುಚಿಕರ ಮತ್ತು ಪರಿಮಳಯುಕ್ತವಾಗಿಸುತ್ತದೆ. ಇನ್ನು ಪಲಾವ್ ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂದರೆ ನೀವು ನಂಬಲೇ ಬೇಕು. ಮುಖ್ಯವಾಗಿ ದೇಹದ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
ಇದನ್ನು ಓದಿ: Palmistry: ಕೈ ರೇಖೆಯಲ್ಲಿನ ಈ ತ್ರಿಕೋನದ ಗುರುತು ಶುಭ ಚಿಹ್ನೆಗಳನ್ನು ನೀಡುತ್ತದೆ
ಕೆಲವು ಪಲಾವ್ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಯುವ ನೀರಿಗೆ ಹಾಕಿ. ಕೆಲವು ಸೆಕೆಂಡುಗಳ ಕಾಲ ಅದನ್ನು ಚೆನ್ನಾಗಿ ಬೇಯಿಸಿ. ನಂತರ ಆ ನೀರನ್ನು ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ಆರೋಗ್ಯಕ್ಕೆ ಉತ್ತಮವಂತೆ. ಜೊತೆಗೆ ದೇಹದ ಬೊಜ್ಜು ಕರಗುತ್ತದೆ.
1. ಇದರಲ್ಲಿ ನಾರಿನಂಶ ಅಧಿಕವಾಗಿದೆ:
ಪಲಾವ್ ಎಲೆಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಈ ಮೂಲಕ ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದು ತೂಕ ನಿರ್ವಹಣೆಯಲ್ಲಿ ಅವಶ್ಯಕವಾಗಿದೆ. ಪಲಾವ್ ಎಲೆಯು ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ತಿನ್ನುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲು ಮಿತವಾಗಿ ಈ ಆಹಾರವನ್ನು ಸೇವಿಸುವುದು ಉತ್ತಮ.
2. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ:
ಪಲಾವ್ ಎಲೆಯಲ್ಲಿರುವ ಔಷಧೀಯ ಗುಣಗಳು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಸರಿಯಾದ ಜೀರ್ಣಕ್ರಿಯೆ ಅತ್ಯಗತ್ಯ. ಈ ಎಲೆಗಳು ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ತೂಕ ಹೆಚ್ಚಾಗುವುದನ್ನು ತಪ್ಪಿಸಿ ದೇಹವನ್ನು ಆರೋಗ್ಯಕರ ರೀತಿಯಲ್ಲಿಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶದಿಂದಾಗಿ ಕೊಬ್ಬು ಕರಗುತ್ತದೆ. ಇನ್ನು ಪಲಾವ್ ಎಲೆಗಳನ್ನು ಫ್ಯಾಟ್ ಬರ್ನರ್ ಎಂದೇ ಪರಿಗಣಿಸಲಾಗುತ್ತದೆ.
3. ಚಯಾಪಚಯ ಕ್ರಿಯೆಗೆ ಸಹಕಾರಿ:
ಪಲಾವ್ ಎಲೆಗಳು ದೇಹದ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ವೇಗವಾಗಿ ಆಗುತ್ತದೆ. ಹೀಗಾಗಿ ಕ್ಯಾಲೋರಿಗಳು ಕರಗಿ ದೇಹದ ತೂಕ ಬೇಗ ಕಡಿಮೆಯಾಗುತ್ತದೆ.
ಇದನ್ನು ಓದಿ: Astro Remedies: ನಿಮಗೆ ಬಹಳಷ್ಟು ಹಣ-ಸಮೃದ್ಧಿ-ಸಂತೋಷ ಬೇಕಿದ್ದರೆ ಪ್ರತಿದಿನ ಈ 5 ಕೆಲಸ ಮಾಡಿ
ಇತರ ಪ್ರಯೋಜನಗಳು:
ಪಲಾವ್ ಎಲೆಯು ವಿಟಮಿನ್ ಎ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿಯಂತಹ ಅಂಶಗಳನ್ನು ಒಳಗೊಂಡಿದೆ. ಈ ವಿಟಮಿನ್‌ಗಳು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪವಾವ್ ಎಲೆಯ ಚಹಾವು ಉಸಿರಾಟದ ಸಮಸ್ಯೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ಸಹ ಪ್ರಯೋಜನಕಾರಿಯಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.