Palmistry: ಕೈ ರೇಖೆಯಲ್ಲಿನ ಈ ತ್ರಿಕೋನದ ಗುರುತು ಶುಭ ಚಿಹ್ನೆಗಳನ್ನು ನೀಡುತ್ತದೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಯ ರೇಖೆಗಳು ಅವನ ಸ್ವಭಾವ, ವೃತ್ತಿ, ಭವಿಷ್ಯ, ವೈವಾಹಿಕ ಜೀವನ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತವೆ. ಕೈಯಲ್ಲಿ ರೂಪುಗೊಂಡ ತ್ರಿಕೋನದ ಗುರುತು ಜೀವನದಲ್ಲಿ ಧನ ಲಾಭವಿದೆ ಎಂದು ಸೂಚಿಸುತ್ತದೆ.

Written by - Puttaraj K Alur | Last Updated : May 22, 2022, 06:32 AM IST
  • ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯ, ಸ್ವಭಾವ ಇತ್ಯಾದಿ ವ್ಯಕ್ತಿಯ ಕೈ ರೇಖೆಗಳಿಂದ ಹೇಳುತ್ತದೆ
  • ಅಂಗೈಯಲ್ಲಿನ ಕೆಲ ಗೆರೆಗಳು ಮಂಗಳಕರ ಕೆಲವು ಅಶುಭಕರವೆಂದೂ ಪರಿಗಣಿಸಲಾಗುತ್ತದೆ
  • ಈ ವಿಶೇಷ ಚಿಹ್ನೆಯಿಂದ ಒಬ್ಬ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಎಂದು ಹೇಳಲಾಗಿದೆ
Palmistry: ಕೈ ರೇಖೆಯಲ್ಲಿನ ಈ ತ್ರಿಕೋನದ ಗುರುತು ಶುಭ ಚಿಹ್ನೆಗಳನ್ನು ನೀಡುತ್ತದೆ title=
ಹಸ್ತಸಾಮುದ್ರಿಕ ಶಾಸ್ತ್ರ

ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯ, ಸ್ವಭಾವ ಇತ್ಯಾದಿಗಳನ್ನು ವ್ಯಕ್ತಿಯ ಕೈ ರೇಖೆಗಳಿಂದ ಹೇಳುತ್ತದೆ. ಯಾವುದೇ ವ್ಯಕ್ತಿಯ ಕೈಯಲ್ಲಿ ಇರುವ ರೇಖೆಗಳು ಮತ್ತು ಗುರುತುಗಳು ಆ ವ್ಯಕ್ತಿಯ ಜೀವನದ ಬಗ್ಗೆ ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ದೇಹದ ಭಾಗಗಳು, ಅಂಗಗಳ ರಚನೆ, ಅಂಗಗಳ ಗಾತ್ರ ಇತ್ಯಾದಿಗಳಿಂದ ಬಹಳಷ್ಟು ತಿಳಿಯಬಹುದು. ಅಂಗೈಯಲ್ಲಿನ ಕೆಲವು ಗೆರೆಗಳು ಮಂಗಳಕರವೆಂದೂ ಕೆಲವು ಅಶುಭಕರವೆಂದೂ ಪರಿಗಣಿಸಲಾಗುತ್ತದೆ.

ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯ ಅಂಗೈಯಲ್ಲಿ ಅದೃಷ್ಟ ರೇಖೆ, ತಲೆ ರೇಖೆ ಮತ್ತು ಬುಧ ರೇಖೆಯ ಸಂಯೋಜನೆಯಿಂದ ತ್ರಿಕೋನವು ರೂಪುಗೊಂಡರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ಈ ಗುರುತು ಇರುವವರು ಜೀವನದಲ್ಲಿ ಯಾವುದೇ ರೀತಿಯ ಕೊರತೆಯನ್ನು ಎದುರಿಸುವುದಿಲ್ಲವೆಂದು ನಂಬಲಾಗಿದೆ. ಅಲ್ಲದೆ ಇಂತವರು ಹಣ ಮಾಡುವ ಎಲ್ಲಾ ಸಾಧ್ಯತೆಗಳಿರುತ್ತದೆ. ಕೈಯಲ್ಲಿ ರೂಪುಗೊಂಡ ಈ ತ್ರಿಕೋನದ ಗುರುತಿನ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.

ಇದನ್ನೂ ಓದಿ: Best Mother: ಈ ರಾಶಿಯವರು ಅತ್ಯುತ್ತಮ ಅಮ್ಮಂದಿರಂತೆ!

ಕೈನ ಈ ಸ್ಥಾನದಲ್ಲಿ ತ್ರಿಕೋನದ ಗುರುತು ರೂಪುಗೊಳ್ಳುತ್ತದೆ

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೆಲವರ ಅಂಗೈಯಲ್ಲಿ ಹೃದಯ ರೇಖೆ ಮತ್ತು ತಲೆ ರೇಖೆಯ ನಡುವೆ ಶನಿ ಗ್ರಹದ ಮೂಲವಿದ್ದು, ಈ ಮೂಲದಲ್ಲಿ ವಿಧಿ ರೇಖೆ, ಶಿರೋರೇಖೆ ಮತ್ತು ಬುಧ ರೇಖೆಯ ಸಂಯೋಜನೆಯಿಂದ ರೂಪುಗೊಂಡ ತ್ರಿಕೋನವು ತುಂಬಾ ಶುಭಕರವಾಗಿದೆ. ಈ ಚಿಹ್ನೆಯು ಕೈಯಲ್ಲಿ ದೊಡ್ಡದಾಗಿರುತ್ತದೆ. ಇದರಿಂದ ವ್ಯಕ್ತಿಯು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಜನರಿಗೆ ಭೂಮಿ, ವಾಹನ, ಹಣ ಮತ್ತು ಆಸ್ತಿ ಇತ್ಯಾದಿ ಸೌಕರ್ಯಗಳ ಕೊರತೆಯಿರುವುದಿಲ್ಲ.
  • ತಮ್ಮ ಕೈಯಲ್ಲಿ ಈ ಗುರುತು ಹೊಂದಿರುವ ಜನರು ಬೌದ್ಧಿಕ ಸಾಮರ್ಥ್ಯ, ವ್ಯವಹಾರ ಕುಶಾಗ್ರಮತಿ, ಅದೃಷ್ಟ ಮತ್ತು ಧನಾತ್ಮಕ ಬೆಳವಣಿಗೆಯನ್ನು ಹೊಂದಿರುತ್ತಾರೆ. ಏಕೆಂದರೆ ಈ ತ್ರಿಕೋನವು ತಲೆ ರೇಖೆ, ಬುಧ ರೇಖೆ ಮತ್ತು ವಿಧಿ ರೇಖೆಯನ್ನು ಸೇರಿ ರೂಪುಗೊಂಡಿದೆ. ಈ ಚಿಹ್ನೆಯಿಂದ ಒಬ್ಬ ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಅದೇ ರೀತಿ ಅವನು ಉಳಿತಾಯದ ಗುಣವನ್ನು ಸಹ ಕಲಿಯುತ್ತಾನೆ. ಈ ಜನರು ತಮ್ಮ ಜೀವನವನ್ನು ಆರಾಮದಿಂದ ಕಳೆಯುತ್ತಾರೆ.

ಇದನ್ನೂ ಓದಿ: wheat flour lamps : ಮನೆಯಲ್ಲಿ ಹಿಟ್ಟಿನ ದೀಪಗಳನ್ನು ಏಕೆ ಹಚ್ಚುತ್ತಾರೆ? ಇಲ್ಲಿ ತಿಳಿಯಿರಿ ರಹಸ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News