ಪ್ರತಿದಿನ ಸ್ನಾನ ಮಾಡುವಾಗ ಜಾಗರೂಕರಾಗಿರಿ! ಇಲ್ಲದಿದ್ದರೆ ಚರ್ಮಕ್ಕೆ ಈ ಹಾನಿ ಸಂಭವಿಸಬಹುದು
Skin Care: ನೀವು ಪ್ರತಿದಿನ ಸ್ನಾನ ಮಾಡುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಅದು ನಿಮಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ವರದಿಯ ಪ್ರಕಾರ ಬಿಸಿ ನೀರಿನಿಂದ ಮುಖ ತೊಳೆದರೆ ಮುಖದ ಚರ್ಮ ಡ್ರೈ ಆಗುವ ಸಾಧ್ಯತೆ ಹೆಚ್ಚು.
ನವದೆಹಲಿ: ಪ್ರತಿದಿನ ಸ್ನಾನ (Bath) ಮಾಡುವವರು ಜಾಗರೂಕರಾಗಿರಿ. ಏಕೆಂದರೆ ಇದು ನಿಮಗೆ ಫ್ರೆಶ್ ಫೀಲ್ ನೀಡಿದರು ಸಹ ಅದು ನಿಮ್ಮ ಚರ್ಮದ (Skin Care) ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:Vastu Tips: ಅಪ್ಪಿತಪ್ಪಿಯೂ ಮಲಗುವ ಕೋಣೆಯಲ್ಲಿ ಇಂತಹ ಚಿತ್ರಗಳನ್ನು ಹಾಕಬೇಡಿ!
ಪ್ರತಿದಿನ ಸ್ನಾನ ಮಾಡುವವರಿಗೆ ತ್ವಚೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಜನರು ತ್ವಚೆಯನ್ನು ಕಾಂತಿಯುತವಾಗಿಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಪಡುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ಚರ್ಮದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಅನೇಕ ಜನರು ತ್ವಚೆಯನ್ನು ಸುಕ್ಕು ಮುಕ್ತವಾಗಿರಿಸಲು ಎಲ್ಲಾ ರೀತಿಯ ಲೋಷನ್ ಮತ್ತು ಔಷಧಿಗಳನ್ನು ಬಳಸುತ್ತಾರೆ.
ವರದಿಯ ಪ್ರಕಾರ, ಅನೇಕ ಜನರು ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ (Hot water) ಮಾಡುತ್ತಾರೆ. ಇದರಿಂದಾಗಿ ಮುಖಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಇದನ್ನೂ ಓದಿ:ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ
ಪ್ರತಿದಿನ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುವುದರಿಂದ ಅದು ತ್ವಚೆಗೆ ಹಾನಿಯುಂಟು ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕೆಂದು ಸಲಹೆ ನೀಡುತ್ತಾರೆ.
(ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಹಕ್ಕು ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.