ನವದೆಹಲಿ : ನಮ್ಮ ಸುತ್ತಮುತ್ತ ಹಲವಾರು ರೀತಿಯ ಜನರು ವಾಸಿಸುತ್ತಿರುತ್ತಾರೆ. ಇವುಗಳಲ್ಲಿ ಕೆಲವರೂ ನಿಮಗೆ ತುಂಬಾ ಹತ್ತಿರವಾಗಿದ್ದರೆ, ಕೆಲವರು ನಮ್ಮೊಂದಿಗೆ ಔಪಚಾರಿಕ ಸಂಬಂಧವನ್ನು ಮಾತ್ರ ಹೊಂದಿರುತ್ತಾರೆ. ಕೆಲವು ನಮ್ಮ ಸ್ನೇಹಿತರಾಗಿದ್ದರೆ, ಇನ್ನ ಕೆಲವರು ಶತ್ರುಗಳಾಗಿರುತ್ತಾರೆ.  ಆದರೆ ಕೆಲವರು ಮೇಲಿಂದ ಸ್ನೇಹಿತರಂತೆ ಕಂಡರೂ ಶತ್ರುಗಳಂತೆ ವರ್ತಿಸುತ್ತಾರೆ. ಅಂದರೆ, ನಿಮ್ಮ ಮುಂದೆ ಒಳ್ಳೆಯವರಂತೆ ವರ್ತಿಸಿ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಾರೆ.  ಜ್ಯೋತಿಷ್ಯದಲ್ಲಿ, ಸ್ನೇಹಿತರ ರೂಪದಲ್ಲಿ ಶತ್ರುಗಳಂತೆ ಇರುವಂತಹ  ಜನರ ಬಗ್ಗೆ ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಈ ಜನರಿಂದ ಸಾಧ್ಯವಾದಷ್ಟು ದೂರವಿರಿ :
ಮೇಷ ರಾಶಿ : ಮೇಷ ರಾಶಿಯ (Aries) ಜನರು ತಮ್ಮನ್ನು ನಿಮ್ಮ ಅತ್ಯಂತ ನಿಷ್ಠಾವಂತ ಮತ್ತು ಹಿತೈಷಿ ಸ್ನೇಹಿತ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ನಿಮಗೆ ಯಾವಾಗ ಬೇಕಾದರೂ ದ್ರೋಹ ಬಗೆಯಬಹುದು.  ಈ ಜನರು ಯಾವ ಸಮಯದಲ್ಲಿ ಬೇಕಾದರೂ ನಿಮಗೆ ಹಾನಿ ಉಂಟು ಮಾಡಬಹುದು. 


ಇದನ್ನೂ ಓದಿ : Mantra To Get Money: ಸಂಪತ್ತು ಪ್ರಾಪ್ತಿಗಾಗಿ ಈ ಪವರ್ ಫುಲ್ ಮಂತ್ರ ಜಪಿಸಿ


ಮಿಥುನ ರಾಶಿ : ಮಿಥುನ ರಾಶಿಯ (Gemini) ಜನರು ಶತ್ರು ಮತ್ತು ಮಿತ್ರನ ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸುವಲ್ಲಿ ನಿಪುಣರು. ಅವರು ನಿಮ್ಮ ಮುಂದೆ ಒಳ್ಳೆಯವರಾಗಿರುತ್ತಾರೆ. ಆದರೆ ಇತರರ ಮುಂದೆ ನಿಮ್ಮನ್ನು  ಕೆಟ್ಟವರನ್ನಾಗಿ ಬಿಂಬಿಸಲು ಯತ್ನಿಸುತ್ತಾರೆ. ನಿಮ್ಮನ್ನು ಕೆಟ್ಟವರೆಂದು ನಿರೂಪಿಸುವ ಒಂದು ನಿಮಿಷವನ್ನು ಅವರು ವ್ಯರ್ಥ ಮಾಡುವುದಿಲ್ಲ.   


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ (Scorpio) ಜನರು ತುಂಬಾ ನೀಚರು. ಅವರು ತಮ್ಮ ಸ್ವಂತ ಲಾಭಕ್ಕಾಗಿ ಯಾರಿಗೆ ಬೇಕಾದರೂ ಹಾನಿ ಉಂಟು ಮಾಡುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅವರು ಮಾಡುತ್ತಿರುವ ಕೆಲಸದ ಬಗ್ಗೆ ನಿಮಗೆ ತಿಳಿಯುವುದೇ ಇಲ್ಲ. ಅಲ್ಲದೆ ಈ ರಾಶಿಯವರಿಗೆ (Zodiac sign) ನಿಮ್ಮಿಂದ ಆಗಬೇಕಾದ ಕೆಲಸದ ಮುಗಿದ ತಕ್ಷಣ ನಿಮ್ಮಿಂದ ದೂರವಾಗಿ ಬಿಡುತ್ತಾರೆ. 


ಇದನ್ನೂ ಓದಿ: Guru Ast: ಗುರು ಅಸ್ತ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ


ತುಲಾ ರಾಶಿ: ತುಲಾ ರಾಶಿಯ (Libra) ಜನರು ಸಮತೋಲಿತ ಸ್ವಭಾವದವರಾಗಿರುತ್ತಾರೆ. ಆದರೆ ಈ ರಾಶಿಯವರು ಬಹಳ ಅವಕಾಶವಾದಿಗಳು. ತಮ್ಮ ಸ್ನೇಹಿತನಿಂದ ಅವಕಾಶವನ್ನು ಕಸಿದುಕೊಳ್ಳಬೇಕಾದರೂ ಹಿಂದೆ ಮುಂದೆ ನೋಡುವುದಿಲ್ಲ. 


ಮೀನ ರಾಶಿ : ಮೀನ ರಾಶಿಯ (pisces) ಜನರು ನಿಮಗೆ ಉತ್ತಮ ಸ್ನೇಹಿತರಂತೆ ತೋರುತ್ತಾರೆ. ಆದರೆ ಅವರು ಅವಕಾಶ ಸಿಕ್ಕ ತಕ್ಷಣ ನಿಮ್ಮನ್ನು ಮೋಸ ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ ನಿಮ್ಮ ಕೆಲಸ ಮುಗಿದ ನಂತರ ಬೇರೆಯವರನ್ನು ಹುಡುಕಿಕೊಂಡು ಹೊರಡುತ್ತೀರಿ. ಸುಳ್ಳು ಹೇಳುವುದನ್ನು ತಪ್ಪಿಸುವುದು ಅವರಿಗೆ ತುಂಬಾ ಸುಲಭ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.