ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಫೆಬ್ರವರಿಯಲ್ಲಿ ಒಟ್ಟು 4 ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಫೆಬ್ರವರಿ 4 ರಂದು, ಬುಧ ಗ್ರಹವು ಕುಂಭ ರಾಶಿಗೆ ಪ್ರವೇಶಿಸಿಯಾಗಿದೆ. ಫೆಬ್ರವರಿ 13 ರಂದು ಸೂರ್ಯ ದೇವರು ಕುಂಭ ರಾಶಿಗೆ (Aquarius) ಪ್ರವೇಶಿಸಲಿದ್ದಾನೆ. ಇದಾದ ನಂತರ, ಫೆಬ್ರವರಿ 19 ರಂದು, ಗುರು ಗ್ರಹ ಕೂಡಾ ಕುಂಭ ರಾಶಿಯಲ್ಲಿ ಅಸ್ತವಾಗಲಿದ್ದಾನೆ. ಫೆಬ್ರವರಿ 26 ರಂದು ಮಂಗಳ ಗ್ರಹವು (Jupiter) ಮಕರ ರಾಶಿಯಲ್ಲಿ ಗೋಚರಿಸಲಿದ್ದಾನೆ. ಇನ್ನು ಸಂಪತ್ತಿನ ಅಂಶವಾದ ಶುಕ್ರವು, ಫೆಬ್ರವರಿ 27 ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ನಾಲ್ಕು ಗ್ರಹಗಳ ರಾಶಿ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ನಾಲ್ಕು ಗ್ರಹಗಳ ರಾಶಿ ಬದಲಾವಣೆಯು, ನಾಲ್ಕು ರಾಶಿಗಳ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ನಾಲ್ಕು ರಾಶಿಯವರು ಈ ಸಂದರ್ಭದಲ್ಲಿ ಎಚ್ಚರದಿಂದ ಇರಬೇಕು.
ಮೇಷ ರಾಶಿ (Aries) :
ಪ್ರಸ್ತುತ, ಬುಧ ಮತ್ತು ಶನಿದೇವರು (Shani deva) ಮೇಷ ರಾಶಿಯ ಹತ್ತನೇ ಮನೆಯಲ್ಲಿದ್ದಾರೆ. ಈ ಕಾರಣದಿಂದಾಗಿ, ಕೆಲಸದ ಸ್ಥಳದಲ್ಲಿ ಅದ್ಭುತ ಯಶಸ್ಸು ಸಿಗುತ್ತದೆ. ವ್ಯಾಪಾರದಲ್ಲಿ ಹೊಸ ಪ್ರಗತಿಯನ್ನು ಸಾಧಿಸುವಿರಿ. ಆದರೂ, ಕುಟುಂಬ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಲಿದೆ. ಇದಲ್ಲದೆ, ಆರೋಗ್ಯದ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕು.
ಇದನ್ನೂ ಓದಿ : Astrology: ಈ 3 ರಾಶಿಯ ಹುಡುಗಿಯರು ಕೋಪಗೊಂಡರೆ ಅವರ ಮನವೊಲಿಸುವುದು ತುಂಬಾ ಕಷ್ಟ
ಸಿಂಹ (Leo) :
ಸಿಂಹ ರಾಶಿಯವರ (Leo) ಜಾತಕದಲ್ಲಿ ರಾಹು ಗ್ರಹದ ಉಪಸ್ಥಿತಿ ಇದೆ. ಇದರಿಂದಾಗಿ ಉದ್ಯೋಗ ಮತ್ತು ವ್ಯವಹಾರದ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಅಲ್ಲದೆ, ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಬಹುದು. ಆದರೂ ತಿಂಗಳ ಅಂತ್ಯದ ವೇಳೆಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು. ವೈವಾಹಿಕ ಜೀವನದಲ್ಲಿ (married life) ತೊಂದರೆಗಳನ್ನು ಎದುರಿಸಬೇಕಾಗಬಹುದು.
ಮಕರ (Capricorn) :
ಈ ತಿಂಗಳಲ್ಲಿ 4 ಗ್ರಹಗಳ ಸಂಕ್ರಮಣವು ಮಕರ ರಾಶಿಯವರಿಗೆ (Capricorn) ಸಮಸ್ಯೆಗಳನ್ನು ಉಂಟುಮಾಡಬಹುದು. ಗುರು ಮತ್ತು ಶನಿಯ ಸಂಯೋಗದಿಂದಾಗಿ ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಬೇಕು. ಇದಲ್ಲದೇ ವ್ಯಾಪಾರದಲ್ಲಿ ಹಣ ನಷ್ಟವಾಗುವ ಪರಿಸ್ಥಿತಿ ಎದುರಾಗಬಹುದು.
ಇದನ್ನೂ ಓದಿ : Propose by Zodiac: ವರ್ಷಪೂರ್ತಿ ಪ್ರೀತಿ ತುಂಬಿರಲು ಪ್ರೇಮಿಗಳ ದಿನ ಈ ರೀತಿ ಉಡುಗೊರೆ ನೀಡಿ
ಕುಂಭ ರಾಶಿ (Aquarius) :
ಕುಂಭ ರಾಶಿಯವರು ಚತುರ್ಗಾಹಿ ಯೋಗದಿಂದ (Chaturgahi yoga) ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜಾತಕದ ಏಳನೇ ಮನೆಯಲ್ಲಿ ಗುರು (Jupiter) ಇರುವ ಕಾರಣ, ವ್ಯವಹಾರದಲ್ಲಿ ಆರ್ಥಿಕ ಯಶಸ್ಸನ್ನು ಪಡೆಯಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು. ಗ್ರಹಗಳ ಸಂಕ್ರಮಣ ಸಮಯದಲ್ಲಿ ಜಾಗರೂಕರಾಗಿರಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.