Benefits Of Lighting Camphor: ಮನೆಯಲ್ಲಿ ದೇವರಿಗೆ ಪೂಜೆ ಮಾಡುವಾಗ ಕೆಲವು ವಿಷಯಗಳನ್ನು ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಒಂದು ಕರ್ಪೂರ. ಕರ್ಪೂರದ (Camphor) ಸುಗಂಧ ಮನೆಯಿಂದ ಋಣಾತ್ಮಕ  ಶಕ್ತಿಯನ್ನು (Negative Engery) ತೊಲಗಿಸಿ ಮತ್ತು ಧನಾತ್ಮಕ ಶಕ್ತಿಯನ್ನು (Positive Energy) ತುಂಬುವ ಸಾಮರ್ಥ್ಯವನ್ನು ಹೊಂದಿದೆ.. ಕರ್ಪೂರವು ಇಡೀ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಧರ್ಮದ ಹೊರತಾಗಿ, ಜ್ಯೋತಿಷ್ಯ (Astrology) ಮತ್ತು ವಾಸ್ತುಗಳಲ್ಲಿ (Vastu) ಕರ್ಪೂರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪೂಜೆಯಿಂದ ಹಿಡಿದು ಇದನ್ನು ಜ್ಯೋತಿಷ್ಯ ಪರಿಹಾರಗಳು ಮತ್ತು ಉಪಾಯಗಳಲ್ಲಿ ಬಳಸಲಾಗುತ್ತದೆ, ಇದು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ. ಸುಖ-ಸಂಪತ್ತು ಹಾಗೂ ಉತ್ತಮ ದಾಂಪತ್ಯ ಜೀವನ ನೀಡುವ ಈ ಕರ್ಪೂರದ ಕೆಲ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಕರ್ಪೂರ ಬಳಕೆಯ ಸರಳ ಮತ್ತು ಉಪಯುಕ್ತ ವಿಧಾನಗಳು (Camphor Remedies)
ಹಣಕಾಸಿನ ಮುಗ್ಗಟ್ಟು ದೂರ ಮಾಡುವ ಉಪಾಯ -
 ಕುಟುಂಬದ ಎಲ್ಲಾ ಸದಸ್ಯರು ತಮ್ಮ ರಾತ್ರಿ ಊಟವನ್ನು ಮುಗಿಸಿದ ಬಳಿಕ, ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಸಣ್ಣ ಬೆಳ್ಳಿಯ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಟ್ಟುಹಾಕಿ. ಒಂದು ತಿಂಗಳೊಳಗೆ, ನೀವು ಆರ್ಥಿಕ ಪರಿಸ್ಥಿತಿಯಲ್ಲಿನ ಬದಲಾವಣೆಯನ್ನು ನೀವು ಕಾಣಬಹುದು.


ಸುಖ ದಾಂಪತ್ಯ ಜೀವನದ ಉಪಾಯ - ಇದಕ್ಕಾಗಿ ನಿಮ್ಮ ಮಲಗುವ ಕೋಣೆಯನ್ನು ಸ್ವಚ್ಛಗೊಳಿಸಿ, ಕರ್ಪೂರವನ್ನು ಬೆಳಗಿ ಅದನ್ನು ಮಲಗುವ ಕೋಣೆಯ ಪ್ರತಿ ಮೂಲೆಯಲ್ಲೂ ತಿರುಗಿಸಿ. ಇದರಿಂದ ವಾತಾವರಣದಲ್ಲಿರುವ ಋಣಾತ್ಮಕತೆ ತೊಲಗುತ್ತದೆ.


ಸಂಗಾತಿಯ ಜೊತೆಗಿನ ಸಂಬಂಧ ಸುಧಾರಣೆ - ಒಂದು ವೇಳೆ ಯಾವುದೇ ಒಂದು ಕಾರಣದಿಂದ ಪತಿ-ಪತ್ನಿಯರ ನಡುವಿನ ಸಂಬಂಧ ದುರ್ಬಲಗೊಳ್ಳುತ್ತಿದ್ದರೆ, ರಾತ್ರಿ ಪತಿಯ ದಿಂಬಿನ ಕೆಳಗೆ ಪತ್ನಿ ಕರ್ಪೂರವನ್ನಿಟ್ಟು, ಬೆಳಗ್ಗೆ ಆಕೆ ಒಬ್ಬಳೇ ಅದನ್ನು ಸುಡಬೇಕು. ಇದರಿಂದ ಪತಿ-ಪತ್ನಿಯರ ನಡುವಿನ ವಿರಸ ಅಂತ್ಯವಾಗುತ್ತದೆ.


ಇದನ್ನೂ ಓದಿ-Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ


ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಉಪಾಯ - ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಶುದ್ಧ ತುಪ್ಪದಲ್ಲಿ ಕರ್ಪೂರವನ್ನು ಅದ್ದಿ, ಅದನ್ನು ಸುತ್ತು ಮನೆಯ ಮೂಲೆ-ಮೂಲೆಗೂ ಬೆಳಗಿ. ಇದಲ್ಲದೆ ನಿತ್ಯ ದೇವರ ಕೋಣೆಯಲ್ಲಿಯೂ ಕೂಡ ಕರ್ಪೂರ ಬೆಳಗಿ. ಇದರಿಂದ ಮನೆಯಲ್ಲಿನ ವಾಸ್ತುದೋಷ ನಿವಾರಣೆಯಾಗುತ್ತದೆ.


ಇದನ್ನೂ ಓದಿ-Yoga After Dinner: ನಿಮಗೂ ಈ ಸಮಸ್ಯೆ ಇದ್ದರೆ ರಾತ್ರಿ ಊಟದ ನಂತರ ತಪ್ಪದೇ ಈ 2 ಯೋಗಾಸನಗಳನ್ನು ಮಾಡಿ


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)


ಇದನ್ನೂ ಓದಿ-Navratri 2021: ನವರಾತ್ರಿಯ ಉಪವಾಸದ ನಿಯಮಗಳು; ಮರೆತೂ ಮಾಡದಿರಿ ಈ ತಪ್ಪು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.