Benefits of eating Roasted Chana with jaggery: ಬದಲಾದ ಜೀವನಶೈಲಿಯ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಬಹುತೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತಿವೆ. ಇಂದಿನ ಹಾಳಾದ ಜೀವನಶೈಲಿಯು ಆ ರೋಗಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹೀಗಿರುವಾಗ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಲು ಬಯಸುತ್ತಿದ್ದರೆ, ನಿಮ್ಮ ಆಹಾರ ಮತ್ತು ಜೀವನಶೈಲಿಯು ಅತ್ಯುತ್ತಮವಾಗಿರಬೇಕು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಲ್ಲಬೇಕು. ಪಾಶ್ಚಿಮಾತ್ಯ ಆಹಾರಗಳಿಂದಾಗಿ, ಪೋಷಕಾಂಶಗಳ ಕೊರತೆಯಿಂದಾಗಿ ಜನರು ವಿವಿಧ ರೋಗಗಳಿಗೆ ಗುರಿಯಾಗುತ್ತಿದ್ದಾರೆ. ಅನೇಕ ಜನರಲ್ಲಿ ರಕ್ತಹೀನತೆಯ ಸಮಸ್ಯೆ ಎದುರಾಗುತ್ತದೆ. ಹೀಗಿರುವಾಗ ಜನರು ವಿವಿಧ ರೀತಿಯ ದುಬಾರಿ ಔಷಧಿಗಳನ್ನು ಸೇವಿಸುತ್ತಿದ್ದಾರೆ, ಆದರೆ ನಿಮ್ಮ ಮನೆಯ ಅಡುಗೆಮನೆಯಲ್ಲಿ ಸಿಗುವ ಎರಡು ಪದಾರ್ಥಗಳನ್ನು ಬಳಸಿ ನೀವೂ ಕೂಡ ಈ ರಕ್ತ ಹೀನತೆಯ ಸಮಸ್ಯೆಯನ್ನು ನಿವಾರಿಸಬಹುದು. 


COMMERCIAL BREAK
SCROLL TO CONTINUE READING

ಬೆಲ್ಲ ಮತ್ತು ಕಾಬೂಲಿ ಕಡಲೆ ರಕ್ತದ ಕೊರತೆಯನ್ನು ನಿವಾರಿಸುತ್ತವೆ
ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿಯಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದನ್ನು ಮರೆತುಬಿಟ್ಟಿದ್ದಾರೆ. ಇದರಿಂದಾಗಿ ಅವರು ಅನೇಕ ರೋಗಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ರಕ್ತದ ಕೊರತೆಯು ಒಂದು ಸಾಮಾನ್ಯ ಸಂಗತಿಯಾಗಿದೆ, ನೀವು ಸಹ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಹುರಿದ ಕಡಲೆ ಮತ್ತು ಬೆಲ್ಲವು ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬೆಲ್ಲದಲ್ಲಿ ಕಬ್ಬಿಣವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ರಕ್ತಹೀನತೆಯ ವಿರುದ್ಧ ಪರಿಣಾಮವನ್ನು ಮನೆಮದ್ದಾಗಿದೆ. ಕಾಳುಗಳೊಂದಿಗೆ ಇದನ್ನು ತಿನ್ನುವುದರಿಂದ ಕಬ್ಬಿಣ ಮತ್ತು ಪ್ರೊಟೀನ್ ಎರಡರ ಕೊರತೆ ನೀಗುತ್ತದೆ.


ಇದನ್ನೂ ಓದಿ-ಬಾಳೆಹಣ್ಣಿನ ಚಹಾ ಸೇವನೆಯಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?


ಈ ಕಾಯಿಲೆಗಳನ್ನು ಕೂಡ ನಿವಾರಿಸುತ್ತವೆ
ವಯಸ್ಸಾದಂತೆ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಬೆಲ್ಲ ಮತ್ತು ಕಾಬೂಲಿ ಕಡಲೆಯನ್ನು ಆಹಾರದಲ್ಲಿ ಶಾಮೀಲುಗೊಳಿಸಿದರೆ ಕ್ಯಾಲ್ಸಿಯಂ ಕೊರತೆ ನೀಗುತ್ತದೆ ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಪೊಟ್ಯಾಸಿಯಮ್ ಸಹ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದರಲ್ಲಿರುವ ಫೈಬರ್ ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿ ಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.