Banana Tea Health Benefits: ಉತ್ತಮ ಗುಣಮಟ್ಟದ ಹಾಗೂ ಗಾಢವಾದ ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ಕೆಟ್ಟ ಕನಸುಗಳಿಲ್ಲದ ಮತ್ತು ಗಾಢವಾದ ನಿದ್ರೆಯಿಂದ, ಬೆಳಗ್ಗೆ ನೀವು ತುಂಬಾ ತಾಜಾ ಮನಸ್ಥಿತಿಯೊಂದಿಗೆ ಎಚ್ಚೆತ್ತುಕೊಲ್ಲುವಿರಿ. ಸೌಂದರ್ಯದ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ನಿದ್ರೆ ಬಹಳ ಮುಖ್ಯ. ಒಂದು ವೇಳೆ ರಾತ್ರಿ ಹೊತ್ತು ಚೆನ್ನಾಗ್ಗಿ ನಿದ್ರೆ ಬಂದರೆ, ಕನಸುಗಳ ಕಾರಣ, ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆಯ ಕಾರಣ ನಿಮ್ಮ ನಿದ್ದೆ ಕೆಡಿಸಿಕೊಳ್ಳಬೇಡಿ, ಈ ಲೇಖನದಲ್ಲಿ ಹೇಳಲಾಗಿರುವ ವಿಧಾನವನ್ನು ಅನುಸರಿಸಿ ನೀವು ಬಾಳೆಹಣ್ಣಿನ ವಿಶೇಷ ಚಹಾವನ್ನು ತಯಾರಿಸಿ ಸೇವಿಸಬಹುದು. ಇದು ನಿಮಗೆ ಉತ್ತಮ ಗುಣಮಟ್ಟದ ನಿದ್ರೆಯ ಜೊತೆಗೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.
ಉತ್ತಮ ನಿದ್ರೆಗಾಗಿ ಏನು ಮಾಡಬೇಕು?
ಉತ್ತಮ ಗುಣಮಟ್ಟದ ನಿದ್ರೆಯ ಆನಂದವನ್ನು ಪಡೆಯಲು, ಮಲಗುವ ಸುಮಾರು ಒಂದು ಗಂಟೆ ಮುನ್ನ ಬಾಳೆಹಣ್ಣು ಮತ್ತು ದಾಲ್ಚಿನ್ನಿಯಿಂದ ಮಾಡಿದ ಈ ಚಹಾವನ್ನು ಸೇವಿಸಿ. ಈ ಚಹಾವನ್ನು ತಯಾರಿಸಲು ನಿಮಗೆ ಬೇಕಾಗುವ ಪದಾರ್ಥಗಳು ಈ ಕೆಳಗಿನಂತಿವೆ,
>> ಒಂದೂವರೆ ಕಪ್ ನೀರು
>> 1 ಬಾಳೆಹಣ್ಣು
>> 1 ಟೀಸ್ಪೂನ್ ದಾಲ್ಚಿನ್ನಿ ಪುಡಿ
ಚಹಾ ತಯಾರಿಸುವುದು ಹೇಗೆ?
>> ಮೊದಲು ಬಾಳೆಹಣ್ಣನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಮತ್ತು ಸಿಪ್ಪೆಯೊಂದಿಗೆ ಸಣ್ಣ ತುಂಡುಗಳಾಗಿ ಕತ್ತರಿಸಿ.
>> ಈಗ ಚಹಾ ಮಾಡಲು ಈ ತುಂಡುಗಳನ್ನು ಪಾತ್ರೆಯಲ್ಲಿ ಹಾಕಿ.
>> ಬಳಿಕ ಅದರಲ್ಲಿ ಒಂದು ಟೀಚಮಚ (ಸಣ್ಣ ಚಮಚ) ದಾಲ್ಚಿನ್ನಿ ಪುಡಿ ಹಾಕಿ.
>> ಇದೀಗ ಮತ್ತೆ ನೀರನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
>> ಬಾಳೆಹಣ್ಣಿನ ಸಿಪ್ಪೆ ಸುಲಿಯಲು ಆರಂಭವಾದ ಕೂಡಲೇ ಗ್ಯಾಸ್ ಅನ್ನು ಆಫ್ ಮಾಡಿ.
>> ನಂತರ ಅದನ್ನು ಒಂದು ಕಪ್ ನಲ್ಲಿ ಸೋಸಿ ಚಹಾದಂತೆ ಸೇವಿಸಿ.
>> ಮಲಗುವ ಒಂದು ಗಂಟೆ ಮೊದಲು ಈ ಚಹಾ ಕುಡಿಯುವುದರಿಂದ ಬೆಡ್ ಟೈಮ್ ಗೂ ಮುನ್ನ ನಿಮಗೆ ಫ್ರೆಶ್ ಆಗಲು ಅವಕಾಶ ಸಿಗುತ್ತದೆ ಮತ್ತು ಮೂತ್ರ ವಿಸರ್ಜನೆಗಾಗಿ ನೀವು ಪದೇ ಪದೇ ಏಳಬೇಕಾಗಿಲ್ಲ.
>> ಪ್ರತಿ ರಾತ್ರಿ ಮಲಗುವ ಮುನ್ನ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ನಿಮ್ಮ ರಾತ್ರಿ ನಿದ್ದೆ ಮತ್ತು ನಿಮ್ಮ ಮುಂಜಾವು ಎರಡೂ ನಿಮಗೆ ಆನಂದವನ್ನು ನೀಡಲಿವೆ.
ಬಾಳೆಹಣ್ಣು ಉತ್ತಮ ನಿದ್ರೆಗೆ ಹೇಗೆ ಸಹಾಯ ಮಾಡುತ್ತದೆ?
>> ಬಾಳೆಹಣ್ಣುಗಳು ಅಮೈನೋ ಆಮ್ಲ, ಟ್ರೈಫೋಟಾನ್ ಮತ್ತು ರಿಲ್ಯಾಕ್ಷೆಶನ್ ಗುಣಗಳನ್ನು ಹೊಂದಿವೆ. ಇವುಗಳ ನಿಯಮಿತ ಸೇವನೆ ಸೇವನೆಯು ಮೆದುಳಿನಲ್ಲಿ ಸಿರೊಟೋನಿನ್ ಸ್ರವಿಕೆಗೆ ಕಾರಣವಾಗುತ್ತದೆ. ಸೆರಾಟೋನಿನ್ ಒಂದು ರಿಲ್ಯಾಕ್ಷೆಶನ್ ಹಾರ್ಮೋನ್ ಆಗಿದೆ, ಇದು ಮೆದುಳನ್ನು ಶಾಂತಗೊಳಿಸುತ್ತದೆ, ನಿದ್ರೆಯನ್ನು ಉತ್ತೇಜಿಸುತ್ತದೆ. ದೇಹದ ಜೀವಕೋಶಗಳನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿಯ ಭಾವನೆಯನ್ನು ನೀಡುತ್ತದೆ.
>> ಬಾಳೆಹಣ್ಣಿನ ಸೇವನೆಯಿಂದ ದೇಹದಲ್ಲಿ ಕಾರ್ಟಿಸೋಲ್ ಉತ್ಪಾದನೆ ಸೀಮಿತಗೊಳ್ಳುತ್ತದೆ. ಕಾರ್ಟಿಸೋಲ್ ಒಂದು ಹಾನಿಕಾರಕ ಹಾರ್ಮೋನ್ ಆಗಿದ್ದು, ಇದು ದೇಹ ಮತ್ತು ಮೆದುಳಿನಲ್ಲಿನ ಒತ್ತಡಕ್ಕೆ ಮುಖ್ಯ ಕಾರಣವಾಗಿದೆ, ಇದನ್ನು ಒತ್ತಡದ ಹಾರ್ಮೋನ್ ಎಂದೂ ಕೂಡ ಕರೆಯುತ್ತಾರೆ.
ಉತ್ತಮ ನಿದ್ರೆಗೆ ದಾಲ್ಚಿನ್ನಿ ಹೇಗೆ ಸಹಕಾರಿ?
>> ದಾಲ್ಚಿನ್ನಿ ಒಂದು ಆಯುರ್ವೇದ ಔಷಧಿಯಾಗಿದೆ, ಇದನ್ನು ಅನೇಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಿದ್ರಾಹೀನತೆಯ ಸಮಸ್ಯೆ ಕೂಡ ಅಂತಹ ಒಂದು ಕಾಯಿಲೆಯಾಗಿದೆ. ಹೇಗಾಗಿ ರಾತ್ರಿ ಸರಿಯಾಗಿ ನಿದ್ದೆ ಬಾರದವರು ದಾಲ್ಚಿನ್ನಿಯಿಂದ ತಯಾರಿಸಿದ ಟೀ ಸೇವಿಸಬೇಕು. ನೀವು ಸೇವಿಸಿದ ಆಹಾರದ ಜೀರ್ಣಕ್ರಿಯೆಯನ್ನು ಇದು ಖಚಿತಪಡಿಸುತ್ತದೆ.
>> ದಾಲ್ಚಿನ್ನಿ ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಬಾಳೆಹಣ್ಣಿನೊಂದಿಗೆ ಚಹಾವನ್ನು ತಯಾರಿಸಿದಾಗ, ನಿದ್ರೆಯ ಮೇಲೆ ಅದರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ-BP-Sugar-Cholesterol-Cancer-Obesity ಯಂತಹ ಮಾರಕ ಕಾಯಿಲೆಗಳಿಗೆ ವರದಾನ ಈ ಬೇಸಿಗೆ ಹಣ್ಣು!
(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.