Lucky Signs on Palm: ಜ್ಯೋತಿಷ್ಯ ಶಾಸ್ತ್ರದಂತೆಯೇ, ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ವ್ಯಕ್ತಿಯ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ತಿಳಿದುಕೊಳ್ಳಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈಯಲ್ಲಿ ನಿರ್ಮಾಣಗೊಂಡ ರೇಖೆಗಳು ಮತ್ತು ಚಿಹ್ನೆಗಳನ್ನು ನಿಕಟವಾಗಿ ಓದಲಾಗುತ್ತದೆ ಮತ್ತು ಅದರಿಂದ ಓರ್ವ ವ್ಯಕ್ತಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ಅಂದಾಜಿಸಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೆಲವು ರೇಖೆಗಳು ಮತ್ತು ಚಿಹ್ನೆಗಳು ತುಂಬಾ ಅದೃಷ್ಟವೆಂದು ಹೇಳಲಾಗುತ್ತದೆ. ಅವುಗಳನ್ನು ಅಂಗೈಯಲ್ಲಿ ಹೊಂದುವುದರಿಂದ, ಒಬ್ಬ ವ್ಯಕ್ತಿಯು ರಾಜಯೋಗವನ್ನು ಪಡೆಯುತ್ತಾನೆ ಮತ್ತು ಅವನು ರಾಜನಂತೆ ಜೀವನವನ್ನು ನಡೆಸುತ್ತಾನೆ. ಇಂದಿನ ಲೇಖನದಲ್ಲಿ ನಾವು ಅಂತಹ ಕೆಲವು ಚಿಹ್ನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.


COMMERCIAL BREAK
SCROLL TO CONTINUE READING

ರಾಜನಂತೆ ಜೀವನ
ಅಂಗೈಯ ಮಧ್ಯ ಭಾಗದಲ್ಲಿ ಬಾಣ, ತೋರಣ, ಶಂಖ ಅಥವಾ ಧ್ವಜದ ಚಿಹ್ನೆ ಇರುವ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಾಧಿಸುತ್ತಾನೆ. ಅವನು ಜೀವನದಲ್ಲಿ ಏನನ್ನು ಪಡೆಯಬೇಕೆಂದು ಬಯಸುತ್ತಾನೋ ಅದನ್ನು ಪಡೆಯುತ್ತಾನೆ. ಆ ವ್ಯಕ್ತಿಯು ರಾಜರಂತೆ ಜೀವನವನ್ನು ನಡೆಸುತ್ತಾನೆ ಮತ್ತು ಆತನಿಗೆ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ.


ಧನಪ್ರಾಪ್ತಿ 
ವ್ಯಕ್ತಿಯೊಬ್ಬನ ಹೆಬ್ಬೆರಳಿನ ಮೇಲೆ ಸರೋವರ ಅಥವಾ ಮೀನಿನ ಚಿಹ್ನೆ ಇದ್ದರೆ, ಆ ವ್ಯಕ್ತಿಗೆ ಸಾಕಷ್ಟು ಧನಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಸಂಪಾದಿಸುತ್ತಾನೆ. ಇವರ ಜೀವನ ರಾಜನಂತಿರುತ್ತದೆ. ವ್ಯಾಪಾರದಲ್ಲಿ ದೊಡ್ಡ ಹೆಸರು ಗಳಿಸುತ್ತಾರೆ.


ಇದನ್ನೂ ಓದಿ-Shani Upay: ಹೊಸ ವರ್ಷಕ್ಕೂ ಮುನ್ನ ಶನಿವಾರ ಸಂಜೆಯೊಳಗೆ ಈ ಉಪಾಯ ಮಾಡಿ! ವರ್ಷವಿಡೀ ಸಂಕಷ್ಟ ನಿಮ್ಮ ಹತ್ತಿರವೂ ಸುಳಿಯಲ್ಲ


ಉನ್ನತ ಹುದ್ದೆ
ಹಸ್ತಸಾಮುದ್ರಿಕ ಶಾಸ್ತ್ರದ
ಪ್ರಕಾರ, ಅಂಗೈಯ ರೇಖೆಯು ಉಂಗುರದ ಬೆರಳಿನ ಕೆಳಗಿನ ಮಣಿಕಟ್ಟಿನಿಂದ ಶನಿ ಪರ್ವತಕ್ಕೆ ಹಾದು ಹೋದರೆ ಮತ್ತು ಅದು ತುಂಬಾ ಸ್ಪಷ್ಟವಾಗಿದ್ದರೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಜೀವನದಲ್ಲಿ ಸಾಕಷ್ಟು ಹಣ ಮತ್ತು ಗೌರವವನ್ನು ಗಳಿಸುತ್ತಾರೆ ಮತ್ತು ಅವರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.


ಇದನ್ನೂ ಓದಿ-Vastu Tips 2023: ಮನೆಯಲ್ಲಿನ ಗಡಿಯಾರದ ದಿಕ್ಕು ಅಷ್ಟೇ ಅಲ್ಲ ಅದರ ಬಣ್ಣ ಕೂಡ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.