ಬೆಂಗಳೂರು : Diabetes Control : ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲಿ ಜನರನ್ನು ಅತಿಯಾಗಿ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಡಯಾಬಿಟೀಸ್. ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವ ಮೂಲಕ ಇದರಿಂದ ಪರಿಹಾರ ಕಂಡು ಕೊಳ್ಳಬಹುದು. ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ, ಮೂಲಕ  ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಆದರೆ ಇದಕ್ಕಾಗಿ ಮೊದಲು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ಕಳಪೆ ಆಹಾರ ಪದ್ಧತಿಯಿಂದಾಗಿ ಮಧುಮೇಹಕ್ಕೆ ಬಲಿಯಾಗುತ್ತಾರೆ. ಹೀಗಾದಾಗ ಕೆಲವರು ನೈಸರ್ಗಿಕ ವಿಧಾನಗಳಿಂದ ಅದರಿಂದ ಪರಿಹಾರ ಬಯಸಿದರೆ, ಇನ್ನು ಕೆಲವರು ಔಷಧಿಗಳ ಮೇಲೆ ಅವಲಂಬಿತರಾಗರುತ್ತಾರೆ. ಆದರೆ ನೈಸರ್ಗಿಕ ವಿಧಾನಗಳನ್ನು ಬಳಸಿ ಪರಿಣಾಮಕಾರಿಯಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣಕ್ಕೆ ತರಬಹುದು. 


COMMERCIAL BREAK
SCROLL TO CONTINUE READING

ತುಳಸಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ  :
ತುಳಸಿಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಲ್ಲದು. ತುಳಸಿ ಎಲೆಗಳನ್ನು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಲೆಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ. ಇದು ದೇಹಕ್ಕೆ ಒಳ್ಳೆಯದು. ಇದಲ್ಲದೆ, ತುಳಸಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಪ್ರತಿದಿನ ಮೂರು ತುಳಸಿ ಎಲೆಗಳನ್ನು ಅಗಿಯಬಹುದು. 


ಇದನ್ನೂ ಓದಿ : ನಿಮ್ಮ ಹೃದಯ ದುರ್ಬಲವಾಗುತ್ತಿದೆ ಎನ್ನುತ್ತವೆ ಈ ಸಂಕೇತಗಳು ..!


ಮಾವಿನ ಎಲೆಗಳು :
ಇದಲ್ಲದೆ ಮಧುಮೇಹ ರೋಗಿಗಳಿಗೆ ಮಾವಿನ ಎಲೆಗಳು ತುಂಬಾ ಉಪಯುಕ್ತವಾಗಿವೆ. ವಿಟಮಿನ್ ಸಿ, ವಿಟಮಿನ್ ಎ ಮತ್ತು ಅನೇಕ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಈ ಎಲೆಗಳಲ್ಲಿ ಕಂಡುಬರುತ್ತವೆ. ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಎಲೆಗಳು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನೂ ಹೊಂದಿವೆ.  


ಜಾಮೂನ್ ಬೀಜಗಳು :
ಸಾಮಾನ್ಯವಾಗಿ ಜಾಮೂನ್ ಅಥವಾ ನೇರಳೆ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆಯುತ್ತೇವೆ. ಆದರೆ ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಈ ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಅವುಗಳ ಬೀಜಗಳನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ಚಹಾದಲ್ಲಿ ಕುದಿಸಿ ಕುಡಿಯಬಹುದು. 


ಇದನ್ನೂ ಓದಿ : Papaya Facts: ಊಟದ ಬಳಿಕ ಪರಂಗಿ ಹಣ್ಣನ್ನು ಸೇವಿಸಬಹುದೇ? ಇಲ್ಲಿದೆ ಮುಖ್ಯ ಮಾಹಿತಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.