Papaya Facts: ಊಟದ ಬಳಿಕ ಪರಂಗಿ ಹಣ್ಣನ್ನು ಸೇವಿಸಬಹುದೇ? ಇಲ್ಲಿದೆ ಮುಖ್ಯ ಮಾಹಿತಿ

Papaya Facts: ಪರಂಗಿ ಅಥವಾ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ತಿಳಿದೇ ಇದೆ. ಆದರೆ, ಪಪ್ಪಾಯಿಯನ್ನು ಯಾವಾಗ ತಿನ್ನಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಆಹಾರದ ನಂತರ ಪಪ್ಪಾಯಿಯನ್ನು ತಿನ್ನಬಹುದೇ ಎಂದು ಅನೇಕ ಜನರು ಆಶ್ಚರ್ಯ ಪಡುತ್ತಾರೆ. ಈ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

Written by - Yashaswini V | Last Updated : Jun 28, 2022, 07:19 AM IST
  • ಪಪ್ಪಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
  • ಪಪಾಯಿನ್ ಕಿಣ್ವವು ಪಪ್ಪಾಯಿಯಲ್ಲಿ ಕಂಡುಬರುತ್ತದೆ.
  • ಇದು ಪ್ರೋಟೀನ್‌ಗಳ ವಿಭಜನೆಗೆ ಬಹಳ ಮುಖ್ಯವಾಗಿದೆ.
Papaya Facts: ಊಟದ ಬಳಿಕ ಪರಂಗಿ ಹಣ್ಣನ್ನು ಸೇವಿಸಬಹುದೇ? ಇಲ್ಲಿದೆ ಮುಖ್ಯ ಮಾಹಿತಿ  title=
Papaya Facts

ಉತ್ತಮ ಆರೋಗ್ಯಕ್ಕೆ ಪರಂಗಿ ಹಣ್ಣನ್ನು ಯಾವಾಗ ತಿನ್ನಬೇಕು: ಪರಂಗಿ ಹಣ್ಣು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಉದರ ಸಂಬಂಧಿತ ಸಮಸ್ಯೆಗಳಿಗೆ ಇದನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಕೆಲವರು ಪರಂಗಿ ಅಥವಾ ಪಪ್ಪಾಯಿ ಹಣ್ಣನ್ನು ಸೇವಿಸಬಾರದು. ಉದಾಹರಣೆಗೆ, ಗರ್ಭಿಣಿಯರು ಇದರಿಂದ ದೂರವಿರಬೇಕು. ಪರಂಗಿ ಅಥವಾ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ತಿಳಿದಿದ್ದರೂ ಸಹ ಜನರಲ್ಲಿ ಇದನ್ನು ಯಾವಾಗ ತಿನ್ನಬೇಕು? ಆಹಾರ ಸೇವಿಸಿದ ನಂತರ ಪಪ್ಪಾಯಿಯನ್ನು ತಿನ್ನಬಹುದೇ ಅಥವಾ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬೇಕೇ ಎಂಬ ಬಗ್ಗೆ ಗೊಂದಲಗಳಿವೆ. ಅಂತಹ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ... 

ಪಪ್ಪಾಯಿಯನ್ನು ಊಟದ ನಂತರ ತಿನ್ನಬಹುದೇ?
ಪರಂಗಿ ಹಣ್ಣನ್ನು ನೀವು ಬಯಸಿದ ಸಮಯದಲ್ಲಿ ತಿನ್ನಬಹುದು. ಆದರೆ, ನೀವು ಊಟದ ನಂತರ ಪಪ್ಪಾಯವನ್ನು ತಿನ್ನುವುದರಿಂದ ಅದು ಸಾಮಾನ್ಯವಾಗಿ ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದು ದೇಹದಲ್ಲಿ ಸಂಗ್ರಹವಾಗುತ್ತದೆ. ಈ ಕಾರಣದಿಂದಾಗಿ ತೂಕ ಕೂಡ ಹೆಚ್ಚಾಗಬಹುದು. ಹಾಗಾಗಿ ಊಟದ ನಂತರ ಈ ಹಣ್ಣಿನ ಸೇವನೆ ಅಷ್ಟು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Heart Attack Risk: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ ಈ ಎಲೆಗಳು

ವಾಸ್ತವವಾಗಿ, ಪಪ್ಪಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಪಪಾಯಿನ್ ಕಿಣ್ವವು ಪಪ್ಪಾಯಿಯಲ್ಲಿ ಕಂಡುಬರುತ್ತದೆ, ಇದು ಪ್ರೋಟೀನ್‌ಗಳ ವಿಭಜನೆಗೆ ಬಹಳ ಮುಖ್ಯವಾಗಿದೆ. ಪಪ್ಪಾಯಿಯನ್ನು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಒಂದು ಗಂಟೆಯ ನಂತರ ತಿನ್ನಬಹುದು. ಇದನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಿಗ್ಗೆ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುವುದು.

ಇದನ್ನೂ ಓದಿ- White Hair Treatment: ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು

ಪಪ್ಪಾಯಿ ತಿನ್ನುವುದರಿಂದ ಈ ಪ್ರಯೋಜನಗಳು ದೊರೆಯುತ್ತವೆ
- ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಅನಿಲವು ಕಡಿಮೆಯಾಗುತ್ತದೆ
- ಅಜೀರ್ಣಕ್ಕೂ ಸಹಾಯ ಮಾಡುತ್ತದೆ
- ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
- ಮಲಬದ್ಧತೆಯಲ್ಲಿ ಪ್ರಯೋಜನಕಾರಿ 
- ಪಿರಿಯಡ್ಸ್ ನೋವನ್ನು ಕಡಿಮೆ ಮಾಡುತ್ತದೆ
- ಹೊಟ್ಟೆ ಶುದ್ಧವಾಗುತ್ತದೆ
- ಇದು ಕರುಳನ್ನು ಸ್ವಚ್ಛಗೊಳಿಸುತ್ತದೆ.

ಸೂಚನೆ- ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News