ನವದೆಹಲಿ : ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಇನ್ನು ಅದೆಷ್ಟೋ ಮಂದಿಗೆ ತಮಗೆ   ಮಧುಮೇಹ ರೋಗ ಇದೆ ಎನ್ನುವುದು ಕೂಡಾ ತಿಳಿದಿಲ್ಲ. ಈ ಸಮಸ್ಯೆಯನ್ನು Pre-Diabetes ಎಂದು ಕರೆಯಲಾಗುತ್ತದೆ. ಆದರೆ, ಸರಿಯಾದ ಆಹಾರದ ಸಹಾಯದಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು (Blood Sugar level) ನಿಯಂತ್ರಿಸಬಹುದು. ಈ ಮೂಲಕ  ಮಧುಮೇಹವನ್ನು ನಿವಾರಿಸಬಹುದು. ಸಕ್ಕರೆಯನ್ನು ನಿಯಂತ್ರಿಸಲು, ಮಧುಮೇಹಿಗಳು ನಿರ್ದಿಷ್ಟ ಸಮಯಕ್ಕೆ ಉಪಾಹಾರ ಸೇವಿಸಬೇಕು. 


COMMERCIAL BREAK
SCROLL TO CONTINUE READING

ಈ ಹೊತ್ತಿಗೆ ಉಪಹಾರ ಮುಗಿಸಬೇಕು :
Northwestern University ಅಧ್ಯಯನದ ಪ್ರಕಾರ, ಮಧುಮೇಹಿಗಳು (Diabetes) ಬೆಳಿಗ್ಗೆ 8.30 ಕ್ಕಿಂತ ಮುಂಚೆ ಉಪಹಾರ ಸೇವಿಸಬೇಕು. ಸಂಶೋಧನೆಯಲ್ಲಿ, ತಡವಾಗಿ ಉಪಹಾರ ಸೇವಿಸುವವರಲ್ಲಿ ಸಕ್ಕರೆ ಪ್ರಮಾಣ ಮತ್ತು ಇನ್ಸುಲಿನ್ ಪ್ರತಿರೋಧವು ಕಂಡುಬಂದಿದೆ. ಇನ್ಸುಲಿನ್ ಪ್ರತಿರೋಧದಿಂದಾಗಿ, ದೇಹವು ಇನ್ಸುಲಿನ್ ಎಂಬ ಹಾರ್ಮೋನ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣದ (Sugar level) ಹೆಚ್ಚಳಕ್ಕೆ ಕಾರಣವಾಗುತ್ತದೆ. ತಡವಾಗಿ ಉಪಹಾರ ಸೇವನೆ ಬ್ಲಡ್ ಶುಗರ್ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. 


ಇದನ್ನೂ ಓದಿ :  Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ


ಮಧುಮೇಹವಿದ್ದರೆ ಬೆಳಗಿನ ಉಪಾಹಾರಕ್ಕಾಗಿ ಈ ಆಹಾರಗಳನ್ನು ಸೇವಿಸಿ - (healthy breakfast foods in diabetes)


ಮಧುಮೇಹ ರೋಗಿಗಳು ತಮ್ಮ ಬೆಳಗಿನ ಉಪಾಹಾರದಲ್ಲಿ ಈ ಕೆಳಗಿನ ಆಹಾರಗಳನ್ನು ಸೇರಿಸಬೇಕು.
ಮೊಟ್ಟೆ : ಮೊಟ್ಟೆಯಲ್ಲಿ  (Egg) ಕ್ಯಾಲೋರಿಗಳು ಕಾರ್ಬೋಹೈಡ್ರೇದಟ್ ಗಳು ಬಹಳ ಕಡಿಮೆ ಇರುತ್ತದೆ. ಇದು ಹೆಚ್ಚಿನ ಪ್ರೋಟೀನ್ ಆಹಾರವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. 


ಓಟ್ ಮೀಲ್- ಮಧುಮೇಹಿ ರೋಗಿಗಳು ಯಾವುದೇ ಆತಂಕವಿಲ್ಲದೆ ಓಟ್ ಮೀಲ್ (Oats) ಅನ್ನು ಬೆಳಗಿನ ಉಪಾಹಾರದಲ್ಲಿ ತಿನ್ನಬಹುದು. ಇದರಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಹೆಸರುಬೇಳೆ : ಹೆಸರುಬೇಳೆ ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ಹೊಂದಿದೆ, ಅಂದರೆ ಅದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ. 


ಇದನ್ನೂ ಓದಿ:  Side Effects of Paneer: ನೀವೂ Paneer ಪ್ರಿಯರೆ, ಹಾಗಾದರೆ ಅತಿಯಾಗಿ ತಿನ್ನುವ ಮೊದಲು ಈ ಲೇಖನ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.