Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ

Raw Papaya Paratha: ನೀವು ಪಕ್ವವಾದ ಪಪ್ಪಾಯಿಯನ್ನು ಅಂದರೆ ಪರಂಗಿ ಹಣ್ಣನ್ನು ಸೇವಿಸಿರಬಹುದು. ಕೆಲವರು ಪರಂಗಿ ಕಾಯಿಯನ್ನು ಕೂಡ ಆಗಾಗ್ಗೆ ಸೇವಿಸಬಹುದು. ಆದರೆ ಪರಂಗಿ ಕಾಯಿಯಿಂದ ತಯಾರಿಸಲಾದ ಪರಾಠವನ್ನು ಎಂದಾದರೂ ತಿಂದಿದ್ದೀರಾ? ಪರಂಗಿ ಕಾಯಿಯಿಂದ ತಯಾರಿಸಲಾದ ಈ ಪರಾಠ ಸೇವಿಸುವುದರೆ  ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

Written by - Yashaswini V | Last Updated : Oct 7, 2021, 02:35 PM IST
  • ಪರಂಗಿ ಕಾಯಿಯು ಪರಂಗಿ ಹಣ್ಣಿಗಿಂತ ಹೆಚ್ಚಿನ ಕಿಣ್ವಗಳನ್ನೂ ಹೊಂದಿರುತ್ತದೆ
  • ಹಸಿ ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ
  • ಇದರಲ್ಲಿರುವ ಪಾಪೈನ್ ಎಂಬ ಕಿಣ್ವವು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ
Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ title=
Benefits of Raw Papaya

Raw Papaya Paratha: ಪರಂಗಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿರಬಹುದು. ಸಾಮಾನ್ಯವಾಗಿ ಜನರು ಹೆಚ್ಚು ಮಾಗಿದ ಪಪ್ಪಾಯಿಯನ್ನು ಸೇವಿಸುತ್ತಾರೆ, ಆದರೆ ಹಸಿ ಪಪ್ಪಾಯಿ ಕೂಡ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ತಜ್ಞರ ಪ್ರಕಾರ, ಪರಂಗಿ ಕಾಯಿಯ ಸೇವನೆಯು ಕ್ಯಾನ್ಸರ್ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಪರಂಗಿ ಕಾಯಿ ಸೇವನೆಯ ಪ್ರಯೋಜನಗಳು:
ಪರಂಗಿ ಕಾಯಿಯು (Raw Papaya) ಪರಂಗಿ ಹಣ್ಣಿಗಿಂತ ಹೆಚ್ಚಿನ ಕಿಣ್ವಗಳನ್ನೂ ಹೊಂದಿರುತ್ತದೆ. ಇದರಲ್ಲಿರುವ ಪಾಪೈನ್ ಎಂಬ ಕಿಣ್ವವು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮನ್ನು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ.

ಇಂಟರ್‌ನ್ಯಾಷನಲ್ ಸೈಂಟಿಫಿಕ್ ಗ್ರೂಪ್ ಆಫ್ ಪ್ರಿವೆಂಟಿವ್ ಮೆಡಿಸಿನ್ ರಿಸರ್ಚ್ ಸೆಂಟರ್‌ನ ತಜ್ಞರ ಪ್ರಕಾರ, ಪಪ್ಪಾಯದಲ್ಲಿರುವ ವಿರೇಚಕ ಕಿಣ್ವಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪರಂಗಿಯು ಅಕಾಲಿಕ ವಯಸ್ಸಾದ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ- Benefits of Cabbage: ನಿಮ್ಮ ಡಯಟ್ನಲ್ಲಿ ಈ ಆಹಾರವನ್ನು ಸೇರಿಸಿ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ

ಅನೇಕ ರೋಗಗಳಿಂದ ಸಿಗುತ್ತೆ ರಕ್ಷಣೆ:
ಹಸಿ ಪಪ್ಪಾಯಿಯಲ್ಲಿ ವಿಟಮಿನ್ ಎ (Vitamin A) ಮತ್ತು ಸಿ ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಕಡಿಮೆ ಪ್ರಮಾಣದ ಕ್ಯಾಲೋರಿಗಳಿಂದಾಗಿ, ಇದು ತೂಕವನ್ನು ಕಡಿಮೆ ಮಾಡುವಲ್ಲಿ ಸಹ ಪರಿಣಾಮಕಾರಿಯಾಗಿದೆ. ಇದರ ಫೈಟೊಕೆಮಿಕಲ್ ಸಂಯುಕ್ತವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಪರಂಗಿ ಕಾಯಿ ಪರಾಠ:
ಕೆಲವರಿಗೆ ಪರಂಗಿ ಕಾಯಿಯನ್ನು ತಿನ್ನುವುದು ಇಷ್ಟವಾಗುವುದಿಲ್ಲ. ಅಂತಹವರು ಪರಂಗಿ ಕಾಯಿಯನ್ನು ಪರಾಠ (Raw Papaya Paratha) ರೂಪದಲ್ಲಿಯೂ ಸೇವಿಸಬಹುದು.  

ಪರಂಗಿ ಕಾಯಿ ಪರಾಠ ತಯಾರಿಸಲು ಬೇಕಾಗುವ ಪದಾರ್ಥಗಳು:
*  2 ಕಪ್ ಗೋಧಿ ಹಿಟ್ಟು
* 1 ಕಪ್ ತುರಿದ ಪರಂಗಿ ಕಾಯಿ
* 2 ಚಮಚ ಕೊತ್ತಂಬರಿ ಸೊಪ್ಪು
* 1 ಟೀ ಸ್ಪೂನ್ ಜೀರಿಗೆ
* 1 ಟೀ ಸ್ಪೂನ್ ಶುಂಠಿ ಪೇಸ್ಟ್
* 1/2 ಟೀಚಮಚ ಉಪ್ಪು
* ಸಣ್ಣಗೆ ಕತ್ತರಿಸಿದ 1 ಈರುಳ್ಳಿ 
* ಸಣ್ಣಗೆ ಕತ್ತರಿಸಿದ 2 ಮೆಣಸಿನಕಾಯಿಗಳು (ಅಗತ್ಯವಿದ್ದರೆ)
* ಕರಿಬೇವಿನ ಎಲೆ
* ತುಪ್ಪ

ಇದನ್ನೂ ಓದಿ- Papaya Leaf: ಈ ಎಲೆಯ ರಸ ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತೆ

ಪರಂಗಿ ಕಾಯಿ ಪರಾಠ ತಯಾರಿಸುವುದು ಹೇಗೆ?
>> ಗೋಧಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸಣ್ಣಗೆ ತುರಿದ ಪರಂಗಿ ಹಣ್ಣು, ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಮಿಶ್ರಣ ಮಾಡಿ. 
>> ಅದರಲ್ಲಿ ಸಣ್ಣಗೆ ಕತ್ತರಿಸಿದ ಮೆಣಸಿನ ಕಾಯಿ, ಕರಿಬೇವು, ಹಸಿರು ಕೊತ್ತಂಬರಿ, ಶುಂಠಿ ಪೇಸ್ಟ್, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
>> ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಹೆಚ್ಚು ತೆಳ್ಳಗೆ ಕಲಸದಿದ್ದರೆ ಒಳ್ಳೆಯದು ಎಂದು ನೆನಪಿಡಿ.
>> 10-15 ನಿಮಿಷಗಳ ಬಳಿಕ ಚಪಾತಿ ರೀತಿಯಲ್ಲಿ ಲಟ್ಟಿಸಿ, ತವಾದಲ್ಲಿ ಬೇಯಿಸಿದ ಪರಂಗಿ ಕಾಯಿ ಪರಾಠ ಸಿದ್ಧವಾಗುತ್ತದೆ.

ಪರಂಗಿ ಕಾಯಿ ಪರಾಠವನ್ನು ಮೊಸರು ಅಥವಾ ಚಟ್ನಿ ಜೊತೆಗೆ ಸೇವಿಸಬಹುದು.

ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News