Side Effects of Paneer: ಹೆಚ್ಚಿನ ಜನರಿಗೆ ಪನೀರ್ ಒಂದು ಇಷ್ಟದ ಆಹಾರ ಪದಾರ್ಥ. ಪನೀರ್ ಪ್ರೋಟೀನ್‌ನ ಉತ್ತಮ ಆಗರವಾಗಿದೆ ಮತ್ತು ವಿಶೇಷವಾಗಿ ಸಸ್ಯಾಹಾರಿಗಳು ತಮ್ಮ ದೈನಂದಿನ ಪ್ರೋಟೀನ್ ಅಗತ್ಯತೆಗಳನ್ನು ಪೂರೈಸಲು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಪನೀರ್ ನ ಅತಿಯಾದ ಸೇವನೆಯು ಹಾನಿ ಯುಂಟು ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೌದು, ತಜ್ಞರ ಪ್ರಕಾರ, ಹಲವು ಬಾರಿ ಹೆಚ್ಚು ಪನೀರ್ ಸೇವನೆ ನಮ್ಮ ಆರೋಗ್ಯದ(Health Tips) ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಾವು ಸೀಮಿತ ಪ್ರಮಾಣದಲ್ಲಿ ಪನೀರ್ ಅನ್ನು ಯಾಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ತೂಕ ಇಳಿಕೆಯ ಮೇಲೆ ಪ್ರಭಾವ (Weight Loss)
ಒಂದು ವೇಳೆ ನೀವೂ ಕೂಡ ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ, ಅತಿಯಾಗಿ ಪನೀರ್ ಅನ್ನು ಸೇವಿಸಬೇಡಿ. ಪನೀರ್ ಸೇವನೆಯಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ ಹಾಗೂ ಅದರಿಂದ ತೂಕ ಏರಿಕೆಯಾಗುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಪನೀರ್ ಸೇವಿಸಿ.
ಅತಿಸಾರ ಸಮಸ್ಯೆ
ಪನೀರ್ ನಲ್ಲಿ ಪ್ರೋಟಿನ್ ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಿರುವಾಗ ಒಂದು ವೇಳೆ ನೀವು ಅತಿಯಾಗಿ ಪನೀರ್ ಸೇವಿಸಿದರೆ, ದೇಹದಲ್ಲಿ ಪ್ರೋಟೀನ್ ಪ್ರಮಾಣ ಹಟಾತ್ ಏರಿಕೆಯಾಗಿ ಅತಿಸಾರ ಸಮಸ್ಯೆ ಎದುರಾಗಬಹುದು.
ರಕ್ತದೊತ್ತಡ (Blood Pressure)
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾಗಿ ಪನೀರ್ ಸೇವಿಸಬಾರದು. ಇದರಿಂದ ರಕ್ತದೊತ್ತದೆ ಹೆಚ್ಚಾಗುವ ಸಾಧ್ಯತೆ ಇದೆ.
ಕೊಲೆಸ್ಟ್ರಾಲ್ (Cholesterol) ಮಟ್ಟ ಹೆಚ್ಚಿಸುತ್ತದೆ
ಪನೀರ್ ನಲ್ಲಿ ಕೊಬ್ಬಿನಂಶ ಜಾಸ್ತಿ ಇರುತ್ತದೆ ಹಾಗೂ ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕೂಡ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಜಾಸ್ತಿಯಾಗುವುದರಿಂದ ಹೃದ್ರೋಗ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ-Yoga After Dinner: ನಿಮಗೂ ಈ ಸಮಸ್ಯೆ ಇದ್ದರೆ ರಾತ್ರಿ ಊಟದ ನಂತರ ತಪ್ಪದೇ ಈ 2 ಯೋಗಾಸನಗಳನ್ನು ಮಾಡಿ
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ
ಒಂದು ವೇಳೆ ನಿಮಗೆ ಮಲಬದ್ಧತೆ, ಅಸಿಡಿಟಿ ಹಾಗೂ ಅಪಚನದಂತಹ ಸಮಸ್ಯೆಗಳಿದ್ದರೆ, ಪನ್ನೀರ್ ಅನ್ನು ಅತಿಯಾಗಿ ಸೇವಿಸಬೇಡಿ. ಏಕೆಂದರೆ ಇದರಿಂದ ಅಸಿಡಿಟಿ ಸಮಸ್ಯೆ, ಉದರ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ-Curd Face mask: ಮೊಸರು ಹಚ್ಚಿದರೆ ಪಡೆಯಬಹುದು ಹೊಳೆಯುವ ತ್ವಚೆ, ಇಮ್ಮಡಿಯಾಗುತ್ತದೆ ಮುಖದ ಸೌಂದರ್ಯ
(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ನುರಿತ ವೈದ್ಯಕೀಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ )
ಇದನ್ನೂ ಓದಿ-Papaya Leaf: ಈ ಎಲೆಯ ರಸ ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.