ನವದೆಹಲಿ: ಬುಧ ಗ್ರಹ ಇಂದು (ನ.21) ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ. ಗ್ರಹಗಳ ರಾಜನಾದ ಸೂರ್ಯನು ಈಗಾಗಲೇ ಈ ರಾಶಿಚಕ್ರದಲ್ಲಿ ಕುಳಿತಿದ್ದಾನೆ. ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಇರುವಾಗ ಅವರ ಸಂಯೋಜನೆಯು ಬುಧಾದಿತ್ಯ ಯೋಗ(Budhaditya Yoga)ವನ್ನು ರೂಪಿಸುತ್ತದೆ. ಬುಧನು ಸಂಪತ್ತಿನ ಅಂಶ ಮತ್ತು ಸೂರ್ಯನು ಯಶಸ್ಸಿಗೆ ಕಾರಣನಾಗಿದ್ದಾನೆ. ಆದ್ದರಿಂದ ಈ ಎರಡರ ಸಂಯೋಜನೆ(Budh-Surya In Vrishchik)ಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿದೆ. ಬುಧಾದಿತ್ಯ ಯೋಗವು ಅವರಿಗೆ ಪ್ರಗತಿ, ಹಣ ಮತ್ತು ಪ್ರತಿಷ್ಠೆಯನ್ನು ತಂದಕೊಡುತ್ತದೆ. ಇಂದಿನಿಂದ ಪ್ರಾರಂಭವಾಗುವ ಬುಧಾದಿತ್ಯ ಯೋಗವು ಡಿಸೆಂಬರ್ 10 ರವರೆಗೆ ಇರುತ್ತದೆ ಮತ್ತು 5 ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. 


COMMERCIAL BREAK
SCROLL TO CONTINUE READING

ಬುಧಾದಿತ್ಯ ಯೋಗದಿಂದ ಹಣದ ಮಳೆ 


ವೃಷಭ ರಾಶಿ: ಈ ರಾಶಿಯ ಜನರು ವೃತ್ತಿ ಮತ್ತು ಹಣದ ವಿಷಯದಲ್ಲಿ ಅಪಾರ ಲಾಭವನ್ನು ಪಡೆಯುತ್ತಾರೆ. ಇದಲ್ಲದೇ ಇವರ ದಾಂಪತ್ಯ ಜೀವನವೂ ಅದ್ಭುತವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.


ಇದನ್ನೂ ಓದಿ: Remedies To Get Rid Of Poverty: ನೀವೂ ಕೂಡ ನಿಮ್ಮ ಮನೆಗಳಲ್ಲಿ ಈ ಕೆಲಸ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ದೇವಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ


ಕರ್ಕ ರಾಶಿ : ಕರ್ಕ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ನಿಮ್ಮ ಪ್ರೀತಿ ತುಂಬಿದ ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳು ಬರಬಹುದು.


ಸಿಂಹ ರಾಶಿ: ಈ ಬುದ್ಧಾದಿತ್ಯ ಯೋಗವು ಸಿಂಹ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನೀಡುತ್ತದೆ. ನೀವು ಹೊಸ ಕಾರು ಖರೀದಿಸಬಹುದು. ಒಟ್ಟಿನಲ್ಲಿ ಈ ಸಮಯ ಸಂತಸದಿಂದ ಕೂಡಿರುತ್ತದೆ.


ತುಲಾ ರಾಶಿ: ತುಲಾ ರಾಶಿಯವರಿಗೆ ಅಪೇಕ್ಷಿತ ಕೆಲಸ ಸಿಗಬಹುದು. ಆದ್ಯತೆಯ ಸ್ಥಳ ಅಥವಾ ಯೋಜನೆಗೆ ವರ್ಗಾಯಿಸಬಹುದು. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು, ಆದರೆ ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಮಾತನಾಡುವಾಗ ಜಾಗರೂಕರಾಗಿರಿ ಮತ್ತು ಕೋಪಗೊಳ್ಳುವುದನ್ನು ತಪ್ಪಿಸಿ.


ಇದನ್ನೂ ಓದಿ: Surya Grahan 2021: ಈ ದಿನ ಸಂಭವಿಸಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ತಿಳಿಯಿರಿ ಯಾರ ಮೇಲೆ ಯಾವ ಪರಿಣಾಮ ?


ಮಕರ ರಾಶಿ : ಮಕರ ರಾಶಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ಹಣ ಸಿಗಲಿದ್ದು, ಇದರಿಂದ ಅವರ ಖರ್ಚು ವೆಚ್ಚಗಳು ಭರಿಸುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸ ಪೂರ್ಣಗೊಳ್ಳಬಹುದು. ನಿಮಗೆ ಅದೃಷ್ಟವು ಕೈಹಿಡಿಯಲಿದ್ದು, ಹಣಕಾಸಿನ ಸ್ಥಿತಿಗತಿಯು ಸಂಪೂರ್ಣವಾಗಿ ಸುಧಾರಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.