ನವದೆಹಲಿ: Buried Treasure - ರಾತ್ರಿ ಮಲಗುವ ಮೇಲೆ ಬರುವ ಕನಸುಗಳು ಯಾವಾಗಲು ಭವಿಷ್ಯದ ಘಟನೆಗಳತ್ತ ಸಂಕೇತ ನೀಡುತ್ತವೆ ಎನ್ನಲಾಗುತ್ತದೆ. ಶುಭವೇ ಆಗಿರಲಿ ಅಥವಾ ಅಶುಭವೆ ಆಗಿರಲಿ, ಮಲಗುವ ವೇಳೆ ಕಾಣಿಸಿಕೊಳ್ಳುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮಹತ್ವವಿದೆ. ಸ್ವಪ್ನಶಾಸ್ತ್ರದಲ್ಲಿಯೂ (Swapna Shastra) ಕೂಡ ಈ ಕುರಿತು ಉಲ್ಲೇಖಿಸಲಾಗಿದೆ. ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇಂತಹ  ಕಾಕತಾಳೀಯ, ಹುದುಗಿಟ್ಟ ನಿಧಿ ಸಿಗಲಿದೆ ಎಂಬ ಸಂಕೇತ ನೀಡುತ್ತದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಹುದುಗಿಟ್ಟ ನಿಧಿಯ ಮಾಹಿತಿ ಯಾರು ನೀಡಲಿದ್ದಾರೆ?
ನಿಗೂಢ ನಿಧಿ ಸಿಗುವ ಇಂತಹ ಕಲ್ಪನೆಗಳಿಗೆ ರೆಕ್ಕೆ ಕೊಡುವಲ್ಲಿ ರಾವಣ ಮತ್ತು ವರಾಹ ಸಂಹಿತೆಯ (Ravan And Varah Samhita) ಪಾತ್ರ ತುಂಬಾ ದೊಡ್ಡದಾಗಿದೆ. ರಾವಣ ಮತ್ತು ವರಾಹ ಸಂಹಿತೆಯ ಪ್ರಕಾರ, ನಿಗೂಢ ನಿಧಿ ನಿಮ್ಮ ಹಣೆಬರಹದಲ್ಲಿ ಬರೆದಿದ್ದರೆ, ನಿಮಗೆ ಒಂದು ಕನಸು ಬೀಳಲಿದ್ದು, ಆ ಕನಸಿನಲ್ಲಿ, ನಿಗೂಢ ನಿಧಿ ಇರುವ ಜಾಗದಲ್ಲಿ ಬಿಳಿ ಹಾವು ಕಾಣಿಸಲಿದೆ. ಇದರರ್ಥ, ನಿಮ್ಮ ಪೂರ್ವಜರು ನಿಮಗೆ ನಿಮ್ಮ ಕನಸಿನಲ್ಲಿ ಬಿಳಿ ಹಾವಿನ ರೂಪದಲ್ಲಿ ದರುಶನ ನೀಡಿ, ನಿಗೂಢ ನಿಧಿ ಇರುವ ಜಾಗದ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತದೆ. ಬಿಳಿ ಹಾವಿನ ರೂಪದಲ್ಲಿ ನಿಮ್ಮ ಪೂರ್ವಜರು ಆ ನಿಧಿಯ ರಕ್ಷಣೆ ಮಾಡುತ್ತಿರುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ .


ಇದಲ್ಲದೆ ಒಂದು ವೇಳೆ ನೀವು ಕನಸಿನಲ್ಲಿ ಕಮಲದ ಹೂವು ಕಂಡರೆ ಅಥವಾ ಕಮಲದ ಹೂವಿನ ಎಳೆಯ ಮೇಲೆ ನೀವು ಊಟ ಮಾಡುತ್ತಿರುವುದಾಗಿ ಕನಸು ಬಿದ್ದರೆ, ಭವಿಷ್ಯದಲ್ಲಿ ನಿಮಗೆ ನಿಗೂಢ ನಿಧಿ ಸಿಗಲಿದೆ ಎಂಬುದನ್ನು ಇದು ಸಂಕೇತಿಸುತ್ತದೆ. 


ಕನಸಿನಲ್ಲಿ ಒಂದು ವೇಳೆ ನಿಮಗೆ ಹಳೆ ದೇಗುಲ, ಆಭರಣದಿಂದ ಕೂಡಿದ ಪೆಟ್ಟಿಗೆ, ಶಂಖ (Conch) ಹಾಗೂ ಕಲಶದಂತಹ ವಸ್ತುಗಳು ಕಂಡರೂ ಕೂಡ ನಿಮ್ಮ ಭಾಗ್ಯದಲ್ಲಿ ಆಕಸ್ಮಿಕವಾಗಿ ಪೂರ್ವಜರ ಆಸ್ತಿ ಸಿಗುವ ಯೋಗವಿದೆ ಎಂದು ತಿಳಿಯಬಹುದು.


ತಂತ್ರಶಾಸ್ತ್ರದಲ್ಲಿ (Tantra Shastra) ಹುದುಗಿಟ್ಟ ನಿಧಿ ಸಿಗುವ ಸಂಕೇತಗಳು 
ಕಲಿಯುಗದಲ್ಲಿ ಯಾವ ರೀತಿ ಮಶೀನ್ ಗಳಿಂದ ಎಲ್ಲ ರೀತಿಯ ಕೆಲಸಗಳನ್ನು ನಡೆಸಲಾಗುತ್ತದೆಯೋ, ಅದೇ ರೀತಿ ಪುರಾತನ ಕಾಲದಲ್ಲಿ ತಂತ್ರ ಶಾಸ್ತ್ರದ ಸಹಾಯದಿಂದ ಹಲವು ರಹಸ್ಯಗಳ ಮೇಲಿನ ತೆರೆ ಎತ್ತಲಾಗುತ್ತಿತ್ತು ಎನ್ನಲಾಗಿದೆ. ತಂತ್ರಶಾಸ್ತ್ರದಲ್ಲಿ ಹುದುಗಿಟ್ಟ ನಿಧಿಯ ಕುರಿತು ಈ ಕೆಳಗಿನ ಸಂಕೇತಗಳನ್ನು ನೀಡಲಾಗಿದೆ.


>> ಒಂದು ಭೂಮಿಯಲ್ಲಿ ಹಲವು ಮರಗಳಿದ್ದು, ಒಂದೇ ಮರದ ಮೇಲೆ ಹೆಚ್ಚು ಪಕ್ಷಿಗಳು ಕುಳಿತಿದ್ದರೆ, ಅಲ್ಲಿ ಹುದುಗಿಟ್ಟ ನಿಗೂಢ ನಿಧಿ ಇರುವ ಸಾಧ್ಯತೆ ಇದೆ.
>> ಮಳೆಯಾಗಿಯೂ ಕೂಡ ನೀರಿರುವ ಜಾಗದಲ್ಲಿ ಒಂದು ವೇಳೆ ಹುಲ್ಲು ಇಲ್ಲದಿದ್ದರೆ, ಹಾಗೂ ಬೇಸಿಗೆ ಕಾಲದಲ್ಲಿ ಬಿರು ಬಿಸಿಲಿನಲ್ಲಿಯೂ ಕೂಡ ಅಲ್ಲಿ ಹಸಿರು ಹುಲ್ಲು ಬೆಳೆಯುತ್ತಿದ್ದರೆ, ಅಲ್ಲಿ ನಿಗೂಢ ನಿಧಿ ಇರುವ ಸಾಧ್ಯತೆ ಇದೆ.
>> ಹಾವು, ಮುಂಗುಸಿ, ಅಥವಾ ಊಸರವಳ್ಳಿ ಕಾಣಿಸಿಕೊಂಡರೆ ಅಥವಾ ಅವುಗಳ ಬಿಲಗಳು ಇದ್ದರೆ, ಆ ನೆಲದಲ್ಲಿ ನಿಧಿ ಇರುವ ಸಾಧ್ಯತೆ ಇದೆ.
>> ಒಂದು ವೇಳೆ ಮರಗಳು ತನ್ನ ನೈಸರ್ಗಿಕ ಗಾತ್ರಕ್ಕಿಂತ ಎತ್ತರ ಬೆಳೆದಿದ್ದರೆ ಅಲ್ಲಿ ನಿಗೂಢ ನಿಧಿ ಸಿಗುವ ಸಾಧ್ಯತೆ ಇದೆ.


ಇದನ್ನೂ ಓದಿ-Zodiac Signs: ಪ್ರತಿಯೊಂದು ವಾಕ್ಸಮರ ಗೆದ್ದೇ ಗೆಲ್ಲುತ್ತಾರೆ ಈ ನಾಲ್ಕು ರಾಶಿಯ ಜನರು


ನಿಗೂಢ ನಿಧಿಯ ಜಾಗವನ್ನು ಹೇಗೆ ಪತ್ತೆಹಚ್ಚಬೇಕು? (Dream Analysis)
ಕನಸು ಅಥವಾ ಇತರೆ ಸಂಕೇತಗಳ ಆಧಾರದ ಮೇಲೆ ನಿಮಗೆ ಹುದುಗಿಟ್ಟ ನಿಗೂಢ ನಿಧಿಯ ಸ್ಥಾನದ ಕುರಿತು ಮಾಹಿತಿ ಸಿಗಬಹುದು. ಹಾಗಂತ ನೀವು ಯಾವ ಸ್ಥಳದಲ್ಲಿಯೂ ಕೂಡ ಅಗೆಯುವ ಕೆಲಸಕ್ಕೆ ಕೈಹಾಕಬಾರದು. ಇದಕ್ಕಾಗಿ ಮೊದಲು ನೀವು ನಿಜವಾಗಿಯೂ ಆ ಜಾಗದಲ್ಲಿ ನಿಗೂಢ ನಿಧಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ ನೀವು ನಿಗೂಢ ನಿಧಿ ಇರುವ ಜಾಗದಲ್ಲಿ 40 ದಿನಗಳ ಕಾಲ ಶುದ್ಧ ತುಪ್ಪದ ದೀಪ ಹಾಗೂ ಒಂದು ಲವಂಗ್ ಉರಿಸಬೇಕು. 40 ದಿನಗಳೊಳಗೆ ನಿಮಗೆ ನಿಮ್ಮ ಕನಸಿನಲ್ಲಿ ಈ ಕುರಿತು ಸಂಕೇತ ಸಿಗಲಿದ್ದು, ನೀವು ಆ ಸ್ಥಾನದಲ್ಲಿ ಅಗೆಯಬೇಕೋ ಅಥವಾ ಬೇಡವೋ ಎಂಬುದು ತಿಳಿಯಲಿದೆ.


ಇದನ್ನೂ ಓದಿ- ಅದೃಷ್ಟ ಬದಲಾಯಿಸಬಹುದು ಈ ರತ್ನ : ಅಸಲಿ ಮುತ್ತನ್ನು ಗುರುತಿಸುವುದು ಹೇಗೆ?


ಎರಡನೆಯದಾಗಿ ನಿಗೂಢ ಧನ ಇರುವ ಸಂಭವನೀಯ ಜಾಗದಲ್ಲಿ ಕಟ್ಟಿಗೆಯ ಒಂದು ಚೌಕಟ್ಟನ್ನು ಇಡಿ. ದರ ಮೇಲೆ ವಿಳ್ಯದೇಲೆ ಅಥವಾ ಅಥವಾ ಆಳದ ಮರದ ಎಲೆಯನ್ನಿಟ್ಟು ಅದರ ಮೇಲೆ ಅಡಿಕೆಯನ್ನು ಇಡಬೇಕು. ಬಳಿಕ ಅದಕ್ಕೆ ಅರಿಶಿನ, ಕುಂಕುಮ, ಅಕ್ಷತೆ ಹಾಕಿ ತುಪ್ಪದ ದೀಪ ಉರಿಸಿ. ಈ ಕೆಲಸವನ್ನು ಸತತ 40 ದಿನಗಳವರೆಗೆ ಮಾಡಬೇಕು. ಬಳಿಕ ಎಲ್ಲ ಎಲೆಗಳನ್ನು ಹಾಗೂ ಅಡಿಕೆಗಳನ್ನು ವಿಸರ್ಜಿಸಿ , ಅಲೌಕಿಕ ಶಕ್ತಿಗೆ ನಿಗೂಢ ನಿಧಿಯ ಕುರಿತು ಸಂಕೇತ ನೀಡಲು ಪ್ರಾರ್ಥಿಸಬೇಕು. ಒಂದು ವೇಳೆ ನಿಜವಾಗಿಯೂ ಕೂಡ ಅಲ್ಲಿ ನಿಗೂಢ ನಿಧಿ ಇದ್ದರೆ, ನಿಮ್ಮ ಕನಸಿನಲ್ಲಿ ಅಥವಾ ಬೇರೆ ಯಾವುದೇ ರೂಪದಲ್ಲಿ ನಿಮಗೆ ನಿಧಿಯ ಕುರಿತು ಸಂಕೇತ ಸಿಗಲಿದೆ.


ಇದನ್ನೂ ಓದಿ-ಈ ಅಕ್ಷರಗಳಿಂದ ನಿಮ್ಮ ಹೆಸರೂ ಆರಂಭವಾಗುತ್ತದೆಯೇ? ಹೆಸರಿನ ಪ್ರಕಾರ ಗುಣ ಹೇಗಿರಲಿದೆ?


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳ ಮೇಲೆ ಆಧರಿಸಿವೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.