ಅದೃಷ್ಟ ಬದಲಾಯಿಸಬಹುದು ಈ ರತ್ನ : ಅಸಲಿ ಮುತ್ತನ್ನು ಗುರುತಿಸುವುದು ಹೇಗೆ?

 ಜ್ಯೋತಿಷ್ಯದಲ್ಲಿ , ಗ್ರಹಗಳಿಗೆ ಶಕ್ತಿ ನೀಡಲು ಹಲವು ವಿಧಾನಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ರತ್ನಗಳು. ರತ್ನ ಶಾಸ್ತ್ರದಲ್ಲಿ, ಗ್ರಹಗಳಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಅನೇಕ ರೀತಿಯ ರತ್ನಗಳನ್ನು ಧರಿಸಲು ಸೂಚಿಸಲಾಗಿದೆ.

Written by - Ranjitha R K | Last Updated : Jun 14, 2021, 04:10 PM IST
  • ಮುತ್ತುಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ
  • ನಿಜವಾದ ಮುತ್ತುಗಳನ್ನು ಅಕ್ಕಿ ಧಾನ್ಯಗಳಿಂದ ಉಜ್ಜುವ ಮೂಲಕ ಗುರುತಿಸಿ
  • ಆರ್ಥಿಕ ಸ್ಥಿತಿ, ಮನಸ್ಸಿನ ಶಾಂತಿ ಮತ್ತು ದೇಹದ ಆರೋಗ್ಯವನ್ನು ಸುಧಾರಿಸುತ್ತದೆ
ಅದೃಷ್ಟ ಬದಲಾಯಿಸಬಹುದು ಈ ರತ್ನ : ಅಸಲಿ ಮುತ್ತನ್ನು ಗುರುತಿಸುವುದು ಹೇಗೆ?  title=
ಮುತ್ತುಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ (file photo zee news)

ನವದೆಹಲಿ : ಜ್ಯೋತಿಷ್ಯದಲ್ಲಿ (Astrology), ಗ್ರಹಗಳಿಗೆ ಶಕ್ತಿ ನೀಡಲು ಹಲವು ವಿಧಾನಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ರತ್ನಗಳು. ರತ್ನ ಶಾಸ್ತ್ರದಲ್ಲಿ, ಗ್ರಹಗಳಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಅನೇಕ ರೀತಿಯ ರತ್ನಗಳನ್ನು ಧರಿಸಲು ಸೂಚಿಸಲಾಗಿದೆ. ವಿಧಿವತ್ತಾಗಿ ಸರಿಯಾದ ರತ್ನವನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗಲಿದೆ (benefits of wearing pearl). ಅಂತಹ ಒಂದು ಪರಿಣಾಮಕಾರಿ ರತ್ನವೆಂದರೆ ಮುತ್ತು. ಜಾತಕದಲ್ಲಿ ಚಂದ್ರ ದೋಶವನ್ನು ತೆಗೆದುಹಾಕಲು ಮುತ್ತುಗಳನ್ನು ಧರಿಸಲಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. 

ಮುತ್ತುಗಳನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು : 
1. ಮುತ್ತುಗಳನ್ನು ಧರಿಸುವುದರಿಂದ (benefits of wearing pearl) ಆರ್ಥಿಕ ಸ್ಥಿತಿ ಸುಧಾರಿಸುತ್ತದೆ, ಆರ್ಥಿಕ ಸಮಸ್ಯೆಗಳಿರುವವರು ಮುತ್ತುಗಳನ್ನು ಧರಿಸಬೇಕು.
2. ಮನಸ್ಸನ್ನು ಶಾಂತವಾಗಿಡಲು ಮುತ್ತು ಅತ್ಯುತ್ತಮ ರತ್ನವೆಂದು ಪರಿಗಣಿಸಲಾಗಿದೆ. ಚಂಚಲ ಚಿತ್ತ ಹೊಂದಿರುವವರು ಮತ್ತು ಯಾರಿಗೆ ಬಹಳ ಕೋಪ ಬರುತ್ತದೆಯೋ ಅವರು ಮುತ್ತು ಧರಿಸಿದರೆ ಬಹಳ ಪ್ರಯೋಜನಕಾರಿ ಎನ್ನಲಾಗಿದೆ. 
3.ಮುತ್ತು ನಕಾರಾತ್ಮಕತೆಯನ್ನು (Negetive energy) ತೆಗೆದುಹಾಕುವ ಮೂಲಕ ಮನಸ್ಸನ್ನು ಸ್ಥಿರಗೊಳಿಸುತ್ತದೆ. ಕೆಲವು ಮನೆಯಲ್ಲಿ ನೋಡುತ್ತಿರುತ್ತೇವೆ. ಒಬ್ಬರಲ್ಲ ಒಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥಹ ಪರಿಸ್ಥಿತಿಯಲ್ಲಿ ಮುತ್ತನ್ನು ಧರಿಸಿದರೆ ಆರೋಗ್ಯ ಸಮಸ್ಯೆ (health problem) ನಿವಾರಣೆಯಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ : ಈ ಅಕ್ಷರಗಳಿಂದ ನಿಮ್ಮ ಹೆಸರೂ ಆರಂಭವಾಗುತ್ತದೆಯೇ? ಹೆಸರಿನ ಪ್ರಕಾರ ಗುಣ ಹೇಗಿರಲಿದೆ?

ಅಸಲಿ ಮುತ್ತುಗಳನ್ನು ಗುರುತಿಸುವ ಬಗೆ ಹೇಗೆ ? 
ರತ್ನ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಸಿಕ್ಕಿ ಸಿಕ್ಕಿದ ರತ್ನಗಳನ್ನು ಧರಿಸುವುದಲ್ಲ. ರತ್ನ ನಿಮ್ಮ ರಾಶಿಗೆ (Zodiac sign)ಸರಿ ಹೊಂದುತ್ತದೆಯೇ ಎಂದು ಮೊದಲು ನೋಡಿಕೊಳ್ಳಬೇಕು. ಎರಡನೇಯದಾಗಿ ಅಸಲಿ ರತ್ನವನ್ನೇ ಧರಿಸಬೇಕು. ಆಗ ಮಾತ್ರ ರತ್ನ ಶಾಸ್ತ್ರದಲ್ಲಿ ಹೇಳಿದ ಪ್ರಯೋಜನ ಸಿಗುತ್ತದೆಯಂತೆ. ಅಸಲಿ ರತ್ನ ನಿಮ್ಮ ಬಳಿಯಿದ್ದರೆ ಸೂಕ್ತ ಸಮಯ ಸಂದರ್ಭಗಳನ್ನು ನೋಡಿ ಅದನ್ನು ಧರಿಸಬೇಕು.  ಇನ್ನು ಮುಖ್ಯವಾದ ವಿಷಯ ಎಂದರೆ ಒಂದು ವೇಳೆ ನಿಮ್ಮ ಬಳಿ ಮುತ್ತು ಇದ್ದು ಅದು ಅಸಲಿಯೋ , ನಕಲಿಯೋ ಎಂದು ಕಂಡು ಹಿಡಯುವುದು ಹೇಗೆ? ನಿಮ್ಮ ಬಳಿಯಿರುವ ಮುತ್ತನ್ನು ಅಕ್ಕಿ ಧಾನ್ಯಗಳ (Rice) ಮೇಲೆ ಉಜ್ಜಿಕೊಳ್ಳಿ, ಮುತ್ತು ಅಸಲಿಯಾಗಿದ್ದರೆ ಅದರ ಹೊಳಪು ಹೆಚ್ಚುತ್ತದೆ. ಇನ್ನು ಮುತ್ತನ್ನು ಶುಕ್ಲ ಪಕ್ಷದ ಯಾವುದೇ ಸೋಮವಾರದಂದು ಬೆಳ್ಳಿಯ ಉಂಗುರದಲ್ಲಿ ಜೋಡಿಸಿ ಧರಿಸಬೇಕು. ಧರಿಸುವ ಮೊದಲು, ಇದನ್ನು ಹಾಲು-ಮೊಸರು-ಜೇನುತುಪ್ಪ-ತುಪ್ಪ-ತುಳಸಿ ಎಲೆಗಳಿಂದ (Tulsi leaves) ಶುದ್ಧೀಕರಿಸಿ. ನಂತರ ಅದನ್ನು ಗಂಗಾ ಜಲದಿಂದ ಸ್ವಚ್ಛಗೊಳಿಸಿ ಧರಿಸಿ. 

ಇದನ್ನೂ ಓದಿ : Mantra For Marriage: ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬಂದು ಸುಂದರ ಮಡದಿ ಪಡೆಯಲು ಇಲ್ಲಿದೆ ಮಂತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News