Sun Transit In Gemini 2021: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಯಾವ ರಾಶಿಗಳ ಮೇಲೆ ಏನು ಪ್ರಭಾವ?

Sun Transit In Gemini 2021: ಜ್ಯೋತಿಷ್ಯ ಶಾಸ್ತ್ರದ  (Astrology) ಪ್ರಕಾರ ಗಹಗಳ ರಾಶಿ ಪರಿವರ್ತನೆಯ ( Effects Of Plannet Transition) ತನ್ನದೇ ಆದ ಮಹತ್ವವಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಎಲ್ಲಾ ರಾಶಿಗಳ (Zodiac Signs) ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳು ಬೀರುತ್ತದೆ.

Written by - Nitin Tabib | Last Updated : Jun 13, 2021, 07:46 PM IST
  • ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಗೆ ತನ್ನದೇ ಆದ ಮಹತ್ವವಿದೆ.
  • ಗ್ರಹಗಳ ರಾಶಿ ಪರಿವರ್ತನೆ ಇತರ ರಾಶಿಗಳ ಮೇಲೂ ಕೂಡ ಪ್ರಭಾವ ಬೀರುತ್ತದೆ.
  • ಜೂನ್ 15 ರಂದು ಸೂರ್ಯ ಮಿಥುನ ರಾಶಿಯಲ್ಲಿ ಗೋಚರಿಸಲಿದ್ದಾನೆ.
Sun Transit In Gemini 2021: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಯಾವ ರಾಶಿಗಳ ಮೇಲೆ ಏನು ಪ್ರಭಾವ? title=
Sun Transit In Gemini 2021(File Photo)

Sun Transit In Gemini 2021: ಜ್ಯೋತಿಷ್ಯ ಶಾಸ್ತ್ರದ  (Astrology) ಪ್ರಕಾರ ಗಹಗಳ ರಾಶಿ ಪರಿವರ್ತನೆಯ ( Effects Of Plannet Transition) ತನ್ನದೇ ಆದ ಮಹತ್ವವಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಎಲ್ಲಾ ರಾಶಿಗಳ (Zodiac Signs) ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳು ಬೀರುತ್ತದೆ. ಜೂನ್ 15, 2021, ಮಂಗಳವಾರ ಸೂರ್ಯ ದೇವ, ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ (Surya Mithun Rashi Gochar 2021). ಜುಲೈ 16ರವರೆಗೆ ಸೂರ್ಯ ಮಿಥುನ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಸೂರ್ಯನ ಈ ರಾಶಿ ಪರಿವರ್ತನೆಯಿಂದ (Surya Rashi Parivartan 2021) ಎಲ್ಲಾ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳು ಉಂಟಾಗುತ್ತವೆ.  ಹಾಗಾದರೆ ಸೂರ್ಯನ ಈ ರಾಶಿ ಪರಿವರ್ತನೆಯಿಂದ ಎಲ್ಲಾ ರಾಶಿಗಳ  ಪರಿಸ್ಥಿತಿ ಹೇಗಿರಲಿದೆ (Surya Rashi Parivartan Effects On Various Zodiac Signs) ತಿಳಿದುಕೊಳ್ಳೋಣ ಬನ್ನಿ .

1. ಮೇಷ - ಮೇಷ ರಾಶಿಯ ಜನರಿಗೆ ಸೂರ್ಯನ ರಾಶಿ ಪರಿವರ್ತನೆ ಶುಭವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಸಫಲತೆ ಸಾಧಿಸುವಿರಿ. ಕೌಟುಂಬಿಕ ಜೀವನದಲ್ಲಿ ಸುಖ ನೆಲೆಸಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ.

2. ವೃಷಭ - ಮಿಶ್ರ ಪ್ರಭಾವ ಇರಲಿದೆ. ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕ ಹಣ ವೆಚ್ಚ ಬೇಡ. ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ನೌಕರಿ ಹಾಗೂ ವ್ಯಾಪಾರಕ್ಕೆ ಈ ಸಮಯ ಶುಭವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

3. ಮಿಥುನ - ಸೂರ್ಯ ಮಿಥುನ ರಾಶಿಯನ್ನೇ ಪ್ರವೆಶಿಸಲಿದ್ದಾನೆ. ಅಧಿಕ ಹಣ ವೆಚ್ಚವಾಗುವ ಸಾಧ್ಯತೆ. ವ್ಯಾಪಾರಕ್ಕಾಗಿ ಸಮಯ ಶುಭ ಆಗಿದೆ. ಆರೋಗ್ಯದ ಕಾಳಜಿ ವಹಿಸಿ.. ಬಾಳಸಂಗಾತಿಯ ಜೊತೆಗೆ ಕಾಲ ಕಳೆಯಿರಿ. ವಾಗ್ವಾದದಿಂದ ದೂರ ಉಳಿಯಿರಿ.

4. ಕರ್ಕ - ನಿಮಗೆ ಸೂರ್ಯನ ರಾಶಿ ಪರಿವರ್ತನೆ ಶುಭವಾಗಿಲ್ಲ. ಹಣಕಾಸಿನ ವ್ಯವಹಾರ ಬೇಡ. ಹೂಡಿಕೆಯಿಂದ ಹಾನಿ ಸಂಭವ ಸಾಧ್ಯತೆ. ಆರ್ಥಿಕ ಸ್ಥಿತಿ ನಾಜೂಕಾಗಿರಲಿದೆ. ಆರೋಗ್ಯದ ವಿಶೇಷ ಗಮನಹರಿಸಿ.

5. ಸಿಂಹ - ಶುಭವಾಗಿರಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಬಡ್ತಿಯ ಯೋಗ. ಧನಲಾಭದ ಸಂಕೇತ. ಹೀಗಾಗಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ದಾಂಪತ್ಯ ಜೀವನ ಸುಖದಿಂದ ಕೂಡಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ.

ಇದನ್ನೂ ಓದಿ-Surya Grahan 2021: ಇಂದು ವರ್ಷದ ಮೊದಲ ಸೂರ್ಯಗ್ರಹಣ, ಈ 5 ರಾಶಿಗಳ ಮೇಲೆ 'ವಿಶೇಷ' ಪರಿಣಾಮ

6. ಕನ್ಯಾ - ಕನ್ಯಾ ರಾಶಿಯ ಜಾತಕದವರಿಗೆ ಮಿಶ್ರ ಫಲಗಳು ಪ್ರಾಪ್ತಿಯಾಗಲಿವೆ. ನೌಕರಿ ಹಾಗೂ ವ್ಯಾಪಾರಕ್ಕೆ ಸಮಯ ಶುಭವಾಗಿದೆ. ಕೌಟುಂಬಿಕ ಸದಸ್ಯರ ಸಾಥ್ ಸಿಗಲಿದೆ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ. 

7. ತುಲಾ - ನಿಮ್ಮ ಪಾಲಿಗೆ ಸಮಯ ಶುಭವಾಗಿರುವುದಿಲ್ಲ. ಕೆಲಸದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಯೋಚಿಸಿ ಹಣ ವೆಚ್ಚ ಮಾಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. 

8. ವೃಶ್ಚಿಕ - ಸಮಸ್ಯೆಗಳನ್ನು ಹೆಚ್ಚಿಸಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ. ನೌಕರಿ ಹಾಗೂ ವ್ಯಾಪಾರದಲ್ಲಿ ಸಮಸ್ಯೆಗಳು ಉದ್ಭವಿಸಲಿವೆ. ಬಾಳ ಸಂಗಾತಿಯ ಜೊತೆಗೆ ಇರುಸು-ಮುರುಸು ಉಂಟಾಗುವ ಸಾಧ್ಯತೆ ಇದೆ. ಮಾನಸಿಕ ಒತ್ತಡದಿಂದ ಪಾರಾಗಲು ಧ್ಯಾನ ಮಾಡಿ.

9. ಧನು - ಸೂರ್ಯನ ರಾಶಿ ಪರಿವರ್ತನೆ ಧನು ರಾಶಿಯ ಜಾತಕದವರಿಗೆ ಸಮ್ಮಿಶ್ರ ಪ್ರತಿಫಲ ನೀಡಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಧೈರ್ಯದಿಂದ ಮುಂದುವರೆಯಿರಿ.  ಕಠಿಣ ಪರಿಶ್ರಮದಿಂದ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. 

ಇದನ್ನೂ ಓದಿ-Brihaspati Rashi Parivartan 2021: ಬೃಹಸ್ಪತಿ ರಾಶಿ ಪರಿವರ್ತನೆ ಯಾವ ರಾಶಿಗಳ ಮೇಲೆ ಏನು ಪರಿಣಾಮ!

10. ಮಕರ -  ಸೂರ್ಯನ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಬಡ್ತಿಯ ಲಕ್ಷಣಗಳು ಘೋಚರಿಸುತ್ತಿವೆ. ಸಂಗಾತಿಯ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. 

11. ಕುಂಭ - ಸೂರ್ಯನ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಶುಭ ಪರಿಣಾಮಗಳನ್ನು ನೀಡಲಿದೆ. ನೌಕರಿ ಹಾಗೂ ವ್ಯಾಪಾರಕ್ಕೆ ಈ ಸಮಯ ವರದಾನಕ್ಕಿಂತ ಕಡಿಮೆಯೇನಿಲ್ಲ ಎನ್ನಬಹುದು. ದಾಂಪತ್ಯ ಜೀವನದಲ್ಲಿ ಸುಖದ ಅನುಭವ ಉಂಟಾಗಲಿದೆ. ಸಂಗಾತಿಯ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಧನಲಾಭದ ಯೋಗಗಳು ನಿರ್ಮಾಣಗೊಳ್ಳುತ್ತಿವೆ. 

12. ಮೀನ - ಮೀನ ರಾಶಿಯ ಜನರ ಪಾಲಿಗೆ ಸಮಯ ಸಾಮಾನ್ಯವಾಗಿರಲಿದೆ. ಆರೋಗ್ಯದ ವಿಶೇಷ ಕಾಳಜಿ ವಹಿಸಿ. ಕೌಟುಂಬಿಕ ಜೀವನದಲ್ಲಿ ಸುಖವನ್ನು ಅನುಭವಿಸುವಿರಿ. ಅಧಿಕ ಹಣ ವೆಚ್ಚವಾಗಲಿದೆ.

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯ ಹಾಗೂ ನಿಖರವಾಗಿದೆ ಎಂದು ಝೀ ಹಿಂದುಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಇಲ್ಲಿ ನೀಡಲಾಗಿರುವ ಮಾಹಿತಿಯನ್ನು ಅನುಸರಿಸುವ ಮೊದಲು ಈ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆಯನ್ನು ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Solar Eclipse 2021 : ಈ ಸೂರ್ಯಗ್ರಹಣದಂದು ಬಾನಿನಲ್ಲಿ ಕಾಣಿಸಲಿದೆ `ವಜ್ರದುಂಗುರ'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News