ಚಾಣಕ್ಯ ನೀತಿ: ಮಹಾನ್ ರಾಜತಾಂತ್ರಿಕರಾಗಿದ್ದ ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನದ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿ ತನ್ನ ಕೆಲಸಕ್ಕೆ, ಪರಿಶ್ರಮಕ್ಕೆ ತಕ್ಕಂತೆ ಫಲಗಳನ್ನು ಪಡೆಯುತ್ತಾನೆ ಎಂದು ಅವರು ತಮ್ಮ ನೀತಿಗಳಲ್ಲಿ ತಿಳಿಸಿದ್ದಾರೆ.  
ಅಷ್ಟೇ ಅಲ್ಲದೆ, ಜೀವನದಲ್ಲಿ ಯಶಸ್ಸನ್ನು ಪಡೆಯಲು ವ್ಯಕ್ತಿಯು ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಉಲ್ಲೇಖಿಸಿರುವ ಆಚಾರ್ಯ ಚಾಣಕ್ಯರು, ಯಶಸ್ಸಿನ ಗುಟ್ಟನ್ನು ತಿಳಿಸಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಮತ್ತು ಸಮೃದ್ಧಿಯನ್ನು ಪಡೆಯಲು, ಜೀವನದಲ್ಲಿ ಯಶಸ್ಸನ್ನು ಪಡೆಯಲು ನಿಯಮಿತವಾಗಿ ಪೂಜಿಸಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮದ ಜೊತೆಗೆ ಪ್ರತಿದಿನ ಕೆಲವು ವಸ್ತುಗಳ ಆರಾಧನೆಯೂ ಅಗತ್ಯ. ಯಾವುದರ ಆರಾಧನೆಯಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ನಿತ್ಯ ಏನನ್ನು ಆರಾಧಿಸಬೇಕು ಎಂದು ತಿಳಿಯೋಣ... 


ನಿತ್ಯ ಈ 6 ವಸ್ತುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ!
ದೇವತೆಗಳ ಆರಾಧನೆ:

ಇಂದಿನ ಕಾಲಘಟ್ಟದಲ್ಲಿ ತಮ್ಮ ಕುಲದೇವತೆಗಳ ಬಗ್ಗೆಯೇ ಗೊತ್ತಿಲ್ಲದವರೂ ಇದ್ದಾರೆ. ಪ್ರತಿಯೊಂದು ಕುಲಕ್ಕೂ ತನ್ನದೇ ಆದ ವಿಭಿನ್ನ ದೇವತೆಗಳಿವೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಕುಲದೇವರ ಪೂಜೆ ಮತ್ತು ಆರಾಧನೆಯಿಂದ  ವ್ಯಕ್ತಿಯ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ. ಅಂತಹ ವ್ಯಕ್ತಿಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಾನೆ. ದೇವತೆಗಳ ಆರಾಧನೆಯಿಂದ ಮುಂಬರುವ ಏಳು ತಲೆಮಾರುಗಳ ಮೇಲೆ ಅವನ ಆಶೀರ್ವಾದ ಇರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. 


ಇದನ್ನೂ ಓದಿ- Astro Tips : ನಿಮ್ಮ ಅದೃಷ್ಟ ಬದಲಾಯಿಸುತ್ತದೆ ಈ ಹೂವು, ಹೀಗೆ ಬಳಸಿ; ಬಡತನ ತೊಲಗಿ ಧನ ಪ್ರಾಪ್ತಿಯಾಗುತ್ತದೆ


ದೇವರನ್ನು ಆರಾಧಿಸಿ:
ಊಟ ಮಾಡುವ ಮೊದಲು ದೇವರಿಗೆ ಅನ್ನವನ್ನು ಅರ್ಪಿಸುವ ಮನೆಗಳಲ್ಲಿ ತಾಯಿ ಅನ್ನಪೂರ್ಣ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವು ಯಾವಾಗಲೂ ಇರುತ್ತದೆ ಎಂದು ನಂಬಲಾಗಿದೆ. ಅಂತಹ ಮನೆಗಳಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಅಡುಗೆ ಮನೆಯನ್ನು ಸದಾ ಶುಚಿಯಾಗಿಟ್ಟುಕೊಂಡು ಪ್ರತಿನಿತ್ಯ ಸಾತ್ವಿಕ ಆಹಾರವನ್ನು ತಯಾರಿಸಿ ದೇವರಿಗೆ ಅರ್ಪಿಸಿ. 


ಆಹಾರವನ್ನು ದಾನ ಮಾಡಿ:
ಹಿಂದೂ ಧರ್ಮದಲ್ಲಿ ಅನ್ನದಾನದ ಮಹತ್ವವನ್ನು ಹೇಳಲಾಗಿದೆ. ಹಸಿದವರಿಗೆ ಮತ್ತು ನಿರ್ಗತಿಕರಿಗೆ ಅನ್ನ ನೀಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತಾನು ದುಡಿಯುವುದರಲ್ಲಿ ಸ್ವಲ್ಪ ಭಾಗವನ್ನು ಖಂಡಿತವಾಗಿಯೂ ದಾನ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. 


ಪಠ್ಯಗಳನ್ನು ಓದಿ:
ಒಬ್ಬ ವ್ಯಕ್ತಿಯು ಧಾರ್ಮಿಕ ಗ್ರಂಥಗಳಲ್ಲಿ ಅಡಗಿರುವ ಜ್ಞಾನವನ್ನು ಓದಬೇಕು ಎಂದು ಹೇಳಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಈ ಪಠ್ಯಗಳನ್ನು ಓದಿದಾಗ, ಅವನು ಜೀವನದಲ್ಲಿಯೂ ಅವುಗಳನ್ನು ಅನುಸರಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ. ಇದರೊಂದಿಗೆ, ಇವು ವ್ಯಕ್ತಿಯನ್ನು ಜೀವನದಲ್ಲಿ ತೊಂದರೆಗಳಿಂದ ರಕ್ಷಿಸಬಹುದು. ಅಲ್ಲದೆ, ಜೀವನದಲ್ಲಿ ಪ್ರಗತಿಯ ಹಾದಿಯಲ್ಲಿ ನಡೆಯಲು ದಾರಿಯನ್ನು ತೋರಿಸುತ್ತದೆ ಎಂದು ಬಣ್ಣಿಸಲಾಗಿದೆ.


ಹಸುವಿನ ಪೂಜೆ:
ಹಿಂದೂ ಧರ್ಮದಲ್ಲಿ ಗೋವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿತ್ಯವೂ ಹಸುವಿನ ಸೇವೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಸಂಕಷ್ಟಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.


ಇದನ್ನೂ ಓದಿ- Samudrik Shastra: ಈ ರೀತಿ ಹಣೆಯಿರುವ ಹುಡುಗಿಯರು ಗಂಡನಿಗೆ ಅದೃಷ್ಟ ದೇವತೆಯಂತೆ.!


ಏಕಾದಶಿ ಉಪವಾಸ:
ಏಕಾದಶಿ ಉಪವಾಸವನ್ನು ಎಲ್ಲಾ ಉಪವಾಸಗಳಲ್ಲಿ ಅತ್ಯುತ್ತಮವಾದ ಉಪವಾಸವೆಂದು ಪರಿಗಣಿಸಲಾಗಿದೆ. ಈ ಉಪವಾಸಗಳನ್ನು ಸಂಪೂರ್ಣ ಶ್ರದ್ಧೆ ಮತ್ತು ನಂಬಿಕೆಯಿಂದ ಆಚರಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಏಕಾದಶಿಯ ದಿನದಂದು ಹಿಂಸೆ ಮಾಡುವುದು, ಸುಳ್ಳು ಹೇಳುವುದು, ಮದ್ಯಪಾನ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.