Chanakya Niti for Successful Life: ಜೀವನದಲ್ಲಿ ಕೆಲ ತಪ್ಪುಗಳನ್ನು ಮಾಡುವುದರಿಂದ ಇಡೀ  ಜೀವನವೇ ಹಾಳಾಗುತ್ತದೆ ಮತ್ತು ಜೀವನ ಪುನಃ ಮೊದಲಿನಂತೆ ಆಗಲಿ ಸಾಧ್ಯವಾಗುವುದಿಲ್ಲ ಎಂದು ಚಾಣಕ್ಯ ನೀತಿ ಹೇಳುತ್ತದೆ. ಆದರೆ, ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಣಯ ವ್ಯಕ್ತಿಯನ್ನು ರಸ್ತೆಯಿಂದ ಅರಮನೆಗೂ ಕೂಡ ಕೊಂಡೊಯ್ಯುತ್ತದೆ. ಇಂದು ನಾವು ನಿಮಗೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿರುವ ಕೆಲ ಪ್ರಮುಖ ನೀತಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಜೀವನದಲ್ಲಿ ಬರುವ ದೊಡ್ಡ ಗಂಡಾಂತರಗಳನ್ನು ತಪ್ಪಿಸಬಹುದು ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು. 


COMMERCIAL BREAK
SCROLL TO CONTINUE READING

ಚಾಣಕ್ಯ ನೀತಿಯ ಈ ಮಹತ್ವದ ನೀತಿಗಳನ್ನು ನೀವೂ ನಿಮ್ಮ ಜೀವನದಲ್ಲಿ ಅಳವಡಿಸಿ
>> ಯಾವುದೇ ಓರ್ವ ವ್ಯಕ್ತಿಯಲ್ಲಿ, ಸಂಗತಿಯಲ್ಲಿ ಹಾಗೂ ಸನ್ನಿವೇಶದಲ್ಲಿ ಒಂದಿಲ್ಲ ಒಂದು  ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳು ಇದ್ದೇ ಇರುತ್ತವೆ ಎಂದು ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹೇಳುತ್ತಾರೆ. ಆದರೆ, ಕೇವಲ ಒಳ್ಳೆಯ ಸಂಗತಿಗಳನ್ನು ಮಾತ್ರ ಪಡೆದುಕೊಳ್ಳಬೇಕು ಮತ್ತು ಕೆಟ್ಟ ಸಂಗತಿ ಅಥವಾ ವಿಚಾರಗಳನ್ನು ತ್ಯಜಿಸಬೇಕು ಎಂದು ಅವರು ಹೇಳುತ್ತಾರೆ. ಇದರಿಂದ ಜೀವನದಲ್ಲಿ ಸಾಕಷ್ಟು ಯಶಸ್ಸು ಪ್ರಾಪ್ತಿಯಾಗುತ್ತದೆ. ಅಂದರೆ ನಮ್ಮ ಯೋಚನೆ ಯಾವಾಗಲೂ ಸಕಾರಾತ್ಮಕವಾಗಿರುತ್ತದೆ. 


>> ಒಳ್ಳೆಯ ಗುಣಗಳನ್ನು ಹೊಂದಿರುವವರನ್ನು ಅದರಲ್ಲಿಯೂ ವಿಶೇಷವಾಗಿ ಮಹಿಳೆಯರನ್ನು ಗೌರವಿಸಬೇಕು. ದುಷ್ಟ ಕುಲಕ್ಕೆ  ಸೇರಿದ ಸುಂದರ, ಸದ್ಗುಣಿ ಮತ್ತು ಚಾರಿತ್ರ್ಯ ಹೊಂದಿರುವ ಕನ್ಯೆಯನ್ನು ಮನೆ ಸೊಸೆಯಾಗಿ ಸ್ವೀಕರಿಸಲು ಎಂದಿಗೂ ಕೂಡ ಹಿಂಜರಿಯಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಇಂತಹ ಸದ್ಗುಣಿ ಕನ್ಯೆ,  ಜೀವನ ಹಾಗೂ ಮನೆಯನ್ನು ಸ್ವರ್ಗವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಇಂತಹ ಕನ್ಯೆಯನ್ನು ಮನೆ ಸೊಸೆ ಮಾಡಿಕೊಳ್ಳುವಾಗ ಆಕೆಯ ಕುಲವನ್ನು ಪಕ್ಕಕ್ಕಿಟ್ಟು, ಆಕೆಯ ಒಳ್ಳೆಯ ಗುಣಗಳಿಗೆ ಮಾತ್ರ ಮಹತ್ವ ನೀಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
 
>> ಬೆಲೆಬಾಳುವ ವಸ್ತು ಕೇಸರಿನಲ್ಲಿ ಬಿದ್ದರೂ ಕೂಡ ಅದು ತನ್ನ ಮೌಲ್ಯವನ್ನು ಎಂದಿಗೂ ಕೂಡ ಕಳೆದುಕೊಳ್ಳುವುದಿಲ್ಲ. ಹೀಗಾಗಿ ಕೊಳಚೆಯಲ್ಲಿ ಚಿನ್ನ ಕಂಡರೂ ಕೂಡ ಅದನ್ನು ಕೈಗೆತ್ತಿಕೊಳ್ಳಲು ಹಿಂಜರಿಯಬಾರರು ಎಂದು ಚಾಣಕ್ಯ ನೀತಿ ಹೇಳುತ್ತದೆ.


ಇದನ್ನೂ ಓದಿ-Jyeshtha Month 2022: ವೈಶಾಖ ಹುಣ್ಣಿಮೆಯ ಬಳಿಕ ಜೇಷ್ಠ ಮಾಸ ಆರಂಭ, ಭಾಗ್ಯವೃದ್ಧಿ ಹಾಗೂ ಪುಣ್ಯ ಪ್ರಾಪ್ತಿಗೆ ಈ 8 ಕೆಲಸಗಳನ್ನು ಮಾಡಿ
 
>> ಮೋಸ ಮಾಡುವ ವ್ಯಕ್ತಿ ಮತ್ತು ಹಾವಿನಲ್ಲಿ ಒಂದನ್ನು ಆಯ್ದುಕೊಳ್ಳಲು ಯಾರಾದರೂ ನಿಮಗೆ ಹೇಳಿದರೆ, ಹಾವನ್ನು ಆಯ್ದುಕೊಳ್ಳಿ ಎಂದು ಚಾಣಕ್ಯ ನೀತಿ ಹೇಳುತ್ತದೆ. ಏಕೆಂದರೆ, ಆಚಾರ್ಯ ಚಾಣಕ್ಯರ ಪ್ರಕಾರ, ಹಾವಿಗೆ ನೀವು ಕಾಟ ಕೊಟ್ಟಾಗ ಮಾತ್ರ ಅದು ನಿಮ್ಮ ಮೇಲೆ ದಾಳಿ ಇಡುತ್ತದೆ. ಆದರೆ, ಮೋಸ ಮಾಡುವ ವ್ಯಕ್ತಿಗೆ ನೀವು ಎಷ್ಟೇ ಒಳಿತನ್ನು ಬಗೆದರೂ ಕೂಡ ಅವನು ನಿಮಗೆ ಹಾನಿ ತಲುಪಿಸುವುದರಿಂದ ಹಿಂಜರಿಯುವುದಿಲ್ಲ.


ಇದನ್ನೂ ಓದಿ-Astrology: ಈ ಲಗ್ನ ಜಾತಕದವರು ದ್ವಿಸ್ವಭಾವಿಗಳು, ಯೋಚಿಸದೆಯೇ ತಪ್ಪು ನಿರ್ಣಯ ಕೈಗೊಳ್ಳುತ್ತಾರೆ


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )  


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.