Zodiac Sign: ಕನ್ಯಾ ರಾಶಿಯ ಜನರಿಗೆ ಸ್ಪಂಜ್ ರಸಗುಲ್ಲಾ ಅಥವಾ ರಸಮಲೈಗಳಂತಹ ರಸಭರಿತ ಸಿಹಿತಿಂಡಿಗಳು ತುಂಬಾ ಇಷ್ಟವಾಗುತ್ತವೆ.ಈ ಜನರು ತುಂಬಾ ಚತುರರು ಹಾಗೂ ಅವಕಾಶವಾದಿಗಳಾಗಿರುತ್ತಾರೆ, ಅತಿಥಿಗಳಿಗೆ ಮನಃಪೂರ್ವಕವಾಗಿ ಇವರು ಉಣಬಡಿಸುತ್ತಾರೆ. ಇವರಲ್ಲಿ ಆಹಾರದ ವ್ಯವಸ್ಥೆಯನ್ನು ನಿಭಾಯಿಸುವ ಅದ್ಭುತ ಸಾಮರ್ಥ್ಯ ಇರುತ್ತದೆ. ಈ ಜಾತಕದವರು ಆಳವಾಗಿ ಯೋಚಿಸದೆಯೇ ಯಾರ ಬಗ್ಗೆಯೂ ಕೂಡ ಲಘುವಾಗಿ ನಿರ್ಣಯವನ್ನು ಕೈಗೊಳ್ಳುತ್ತಾರೆ. ಇವರಲ್ಲಿ ಎಷ್ಟು ಆತುರತೆ ಇರುತ್ತದೆ ಎಂದರೆ ಇವರು , ಅನೇಕ ಬಾರಿ ತರಾತುರಿಯಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಮತ್ತು ನಂತರ ತಾವು ಮಾಡಿದ ಕಾರ್ಯಕ್ಕೆ ತಾವೇ ಕೋಪಗೊಳ್ಳುತ್ತಾರೆ. ಜಗಳಗಳನ್ನು ಇವರು ಹೆಚ್ಚಾಗಿ ಇಷ್ಟಪಡುವುದಿಲ್ಲ ಮತ್ತು ಜಗಳ ಹೆಚ್ಚಾದಾಗ ಕ್ಷಮೆ ಕೊರಲು ಇವರು ಹಿಂಜರಿಯುವುದಿಲ್ಲ.
ಕ್ಷಣದಲ್ಲಿ ಕೋಪ ಮತ್ತು ಕ್ಷಣದಲ್ಲಿ ಸಂತೋಷ
ಕನ್ಯಾ ಇದರ ಅರ್ಥವು ಹೆಸರಿನಿಂದಲೇ ಸ್ಪಷ್ಟವಾಗುತ್ತದೆ. ಕನ್ಯಾ ರಾಶಿ ಎಂದರೆ ಸೌಮ್ಯ, ಸರಳ, ತಾಳ್ಮೆ, ಭಾವೋದ್ರಿಕ್ತ, ಸುಂದರ, ಬುದ್ಧಿವಂತ ಮತ್ತು ಶೃಂಗಾರ ಇಷ್ಟಪಡುವವರು ಎಂದರ್ಥ . ಕನ್ಯಾ ದ್ವಂದ್ವ ಸ್ವಭಾವದ ರಾಶಿಯಾಗಿದೆ. ಅಂದರೆ, ಈ ಜಾತಕದವರು ದ್ವಿಸ್ವಭಾವಿಗಳಾಗಿರುತ್ತಾರೆ. ಇದೇ ಕಾರಣದಿಂದ ಒಮ್ಮೆ ಒಂದಾದರೆ, ಮತ್ತೊಮ್ಮೆ ಮಗದೊಂದು ಎಂಬಂತೆ ಇವರ ಸ್ವಭಾವ ಇರುತ್ತದೆ. ತುಂಬಾ ಅಸ್ಥಿರ ಸ್ವಭಾವದವರಾಗಿರುತ್ತಾರೆ. ಇವರು ಒಂದು ಕ್ಷಣದಲ್ಲಿ ಕೋಪಗೊಳ್ಳುತ್ತಾರೆ ಮತ್ತು ಇನ್ನೊಂದು ಕ್ಷಣದಲ್ಲಿ ಸಂತೋಷಪಡುತ್ತಾರೆ. ಬುಧದೇವ ಕನ್ಯಾ ಲಗ್ನದ ಅಧಿಪತಿ. ಕನ್ಯಾ ರಾಶಿಯು ಉತ್ತರ ಪಾಲ್ಗುಣಿಯ ಮೂರು ಹಂತಗಳು, ಹಸ್ತಾದ ನಾಲ್ಕು ಹಂತಗಳು ಮತ್ತು ಚಿತ್ರಾ ನಕ್ಷತ್ರದ ಎರಡು ಹಂತಗಳನ್ನು ಹೊಂದಿರುವ ಒಂದು ಶಿರೋದಯ ರಾಶಿಯಾಗಿದ್ದು, ಇದರ ದಕ್ಷಿಣ ದಿಕ್ಕಿಗೆ ಬಲವಿದೆ. ಈ ಲಗ್ನವು ಸೌಮ್ಯ ಸ್ವಭಾವವನ್ನು ಹೊಂದಿರುತ್ತದೆ ಮತ್ತು ರಾಶಿಗಳಲ್ಲಿ ಇದು ಸ್ತ್ರೀಯಾಗಿದೆ. ಕನ್ಯಾ ರಾಶಿ ಲಗ್ನ ಎಲ್ಲಾ ಲಗ್ನಗಳಲ್ಲಿ ಏಕೈಕ ಸ್ತ್ರೀಲಗ್ನವಾಗಿದ್ದು, ಇದರ ಅಧಿಪತಿಯಾಗಿರುವ ಬುಧನು ತನ್ನದೇ ಆದ ರಾಶಿಯಲ್ಲಿ ಉತ್ಕೃಷ್ಟನಾಗಿದ್ದಾನೆ. ಬುಧನಿಗೆ ರಸಭರಿತ ಸಿಹಿತಿಂಡಿಗಳು ಅಂದರೆ ತುಂಬಾ ಇಷ್ಟ. ಈ ಲಗ್ನದ ವಿಶೇಷತೆ ಎಂದರೆ ಇದರ ಮಾಲೀಕ ಮತ್ತು ಉದರ ಕಾರ್ಯಕ್ಷೇತ್ರದ ಅಧಿಪತಿ ಒಂದೇ ಆಗಿರುತ್ತಾರೆ. ಮಿಥುನ ರಾಶಿಯ ಹತ್ತನೇ ಭಾವದಲ್ಲಿ ಅಂದರೆ, ಕೆಲಸದ ಮನೆಯಲ್ಲಿ ಇದು ಬೀಳುತ್ತದೆ, ಇದರಿಂದಾಗಿ ಕನ್ಯಾ ಮತ್ತು ಮಿಥುನ ಎರಡೂ ಭಾವಗಳಿಗೆ ಅಧಿಪತಿಯಾಗಿರುವ ಬುಧದೇವ ಇವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಜಾತಕದಲ್ಲಿ ಬುಧ ಉಚ್ಛನಾಗಿದ್ದರೆ ಮಾತ್ರ ಇದು ಸಾಧ್ಯ.
ಇಡೀ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ
ಈ ಲಗ್ನ ಜಾತಕದಲ್ಲಿ ಸ್ತ್ರೀಲಿಂಗ ಗುಣಗಳು ಹೆಚ್ಚಾಗಿರುವ ಕಾರಣ ಇದು ಮಹಿಳೆಯರಿಗೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಈ ಲಗ್ನ ಜಾತಕದ ಮಹಿಳೆಯರು ಮನೆಯಲ್ಲಿ ಕುಟುಂಬದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಹಿರಿಯರು ಮತ್ತು ಅತಿಥಿಗಳನ್ನು ಸ್ವಾಗತಿಸುವುದು ಇವರು ನಡೆಸಿಕೊಳ್ಳುವ ಆತಿಥ್ಯ. ತನ್ನ ಗುಣಗಳಿಂದ ಪತಿ ಮತ್ತು ಕುಟುಂಬವನ್ನು ಸಂತೋಷವಾಗಿರಿಸುತ್ತಾರೆ. ಕಾಲ ಪುರುಷನ ಆರನೇ ರಾಶಿಯಾಗಿರುವುದರಿಂದ, ಇವರು ರೋಗಗಳು, ಸಾಲಗಳು ಮತ್ತು ಶತ್ರುಗಳಿಗೆ ಹೆದರುತ್ತಾರೆ. ಈ ರಾಶಿ ಉದರರೋಗಗಳು ಮತ್ತು ಅಕ್ರಮಗಳಿಗೆ ಸಂಬಂಧಿಸಿದ ರಾಶಿಯಾಗಿದೆ.
ಲಾಭ ಪಡೆಯಲು ತಂತ್ರ ರೂಪಿಸುತ್ತಾರೆ
ಈ ಲಗ್ನದಲ್ಲಿ ಹುಟ್ಟುವುದು ಎಂದರೆ ಬುದ್ಧಿಯ ತೀಕ್ಷ್ಣತೆ ಪಡೆಯುವುದು ಎಂದರ್ಥ. ಈ ಲಗ್ನ ಜಾತಕದ ವ್ಯಕ್ತಿಗಳಿಗೆ ಕಲಿಕೆಯ ಕಡೆಗೆ ನಿಜವಾದ ಆಸಕ್ತಿ ಇರುತ್ತದೆ. ಕನ್ಯಾ ರಾಶಿಯ ಜನರು ಅವಕಾಶವಾದಿಗಳು ಮತ್ತು ಇವರ ಅವಕಾಶವಾದವು ಎಲ್ಲರ ಮುಂದೆ ಬಹಿರಂಗಗೊಳ್ಳುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಇವರನ್ನು ಬುದ್ಧಿವಂತರು ಎಂದು ಹೇಳಲಾಗಿದೆ. ಇವರು ತಮ್ಮ ಸ್ವಂತ ಲಾಭಕ್ಕಾಗಿ ಕುಶಲತೆಯನ್ನು ಹೊಂದಿರುತ್ತಾರೆ. ಅಂದರೆ, ತಮಗೆ ಲಾಭ ಸಿಗುವುದಿದ್ದರೆ ಮಾತ್ರ ಇವರು ಸಲಹೆ ಗಳನ್ನು ನೀಡುತ್ತಾರೆ.
ಬಲವಾದ ನಿರ್ವಹಣಾ ಸಾಮರ್ಥ್ಯ ಹೊಂದಿರುತ್ತಾರೆ
ಈ ಜಾತಕದ ವಿಶೇಷತೆ ಎಂದರೆ ಅದು ಇವರಲ್ಲಿನ ನಿರ್ವಹಣಾ ಸಾಮರ್ಥ್ಯ, ಈ ಜಾತಕದ ಜನರು ನಿರ್ವಹಣೆಯಲ್ಲಿ ತುಂಬಾ ನಿಪುಣರಾಗಿರುತ್ತಾರೆ. ಹೆಣ್ಣೇ ಆಗಿರಲಿ, ಗಂಡೇ ಆಗಿರಲಿ, ಇವರು ಅತಿಥಿಗಳಿಗೆ ಮನಃಪೂರ್ವಕ ಉಣಬಡಿಸುತ್ತಾರೆ ಮತ್ತು ಊಟದ ವ್ಯವಸ್ಥೆಯನ್ನು ನಿಭಾಯಿಸುವ ವಿಶಿಷ್ಟ ಪ್ರತಿಭೆ ಇವರಲ್ಲಿರುತ್ತದೆ. ಈ ಲಗ್ನ ಜಾತಕ ಹೊಂದಿರುವ ಜನರು ಹೋಟೆಲ್ ನಿರ್ವಹಣೆ, ಹೋಟೆಲ್ ಅಥವಾ ಇತರ ಆಹಾರ ಸಂಬಂಧಿತ ವ್ಯಾಪಾರ ನಡೆಸಬೇಕು. ಇವರು ಅಂತಹ ವ್ಯವಸ್ಥೆಯನ್ನು ನಿರ್ವಹಿಸುವ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದಾರೆ, ಇವರು ಯೋಜನೆ, ವಾಣಿಜ್ಯ, ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಬರವಣಿಗೆ ಇತ್ಯಾದಿ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.
ತುಂಬಾ ಬುದ್ಧಿವಂತರಗಿರುತ್ತಾರೆ
ಇವರು ಹಣಕಾಸಿನ ವಿಷಯದಲ್ಲಿ ತುಂಬಾ ಕಾಲ್ಪನಿಕರಾಗಿತ್ತಾರೆ. ಇವರ ಭವಿಷ್ಯದ ಯೋಜನೆಗಳು ತುಂಬಾ ಪ್ರಬಲವಾಗಿರುತ್ತವೆ. ಇವರು ತಮ್ಮ ಶತ್ರುಗಳನ್ನು ಗುರುತಿಸುವಲ್ಲಿ ಮೋಸ ಹೋಗುತ್ತಾರೆ. ಕನ್ಯಾ ರಾಶಿಯ ಜನರು ಒಳಿತು ಅಥವಾ ಕೆಟ್ಟದ್ದನ್ನು ಮೇಲ್ನೋಟದಿಂದ ಮಾತ್ರ ನಿರ್ಧರಿಸುತ್ತಾರೆ. ಇವರು ತುಂಬಾ ಆಳವಾಗಿ ಯೋಚಿಸುವುದಿಲ್ಲ. ಈ ಲಗ್ನ ಜಾತಕದ ಜನರು ವಿವಿಧ ರೀತಿಯ ಶಿಸ್ತುಗಳನ್ನು ಅಧ್ಯಯನ ಮಾಡಲು ಇಷ್ಟಪಡುತ್ತಾರೆ. ಇವರು ಹೆಚ್ಚು ಆತುರತೆಯ ಸ್ವಭಾವದವರಾಗಿರುತ್ತಾರೆ. ಇದೇ ಕಾರಣದಿಂದ ಇವರು ಕೆಲವೊಮ್ಮೆ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ ಮತ್ತು ತಮ್ಮ ಮೇಲೆ ತಾವೇ ಕೋಪಗೊಳ್ಳುತ್ತಾರೆ ಹಾಗೂ ತಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ.
ವಿವರಿಸುವ ವಿಧಾನವು ತುಂಬಾ ಪರಿಣಾಮಕಾರಿ
ಇವರು ಯಾವುದೇ ಕೆಲಸವನ್ನು ತರ್ಕಬದ್ಧವಾಗಿ ಮತ್ತು ಸುಯೋಜಿತ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಅಷ್ಟೇ ಅಲ್ಲ ತಮ್ಮ ಕೆಲಸವನ್ನು ವಿವರಿಸುವ ಇವರ ವಿಧಾನ ಕೂಡ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇವರು ತಮ್ಮ ತಪ್ಪನ್ನು ತಾರ್ಕಿಕ ರೀತಿಯಲ್ಲಿ ಸಾಬೀತುಪಡಿಸುತ್ತಾರೆ. ಇವರ ಸ್ವಭಾವದಲ್ಲಿ ಸ್ತ್ರೀ ಸ್ವಭಾವದ ಒಂದು ನೋಟವಿರುತ್ತದೆ. ಯಾವ ಕೆಲಸವನ್ನು ಯಾವಾಗ ಮಾಡಬೇಕೆಂದು ಇವರಿಗೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇತರರಿಂದ ಕೆಲಸವನ್ನು ಮಾಡಿಸಲು ಇವರು ಹಿಂಜರಿಯುವುದಿಲ್ಲ. ಹಾಗಂತ ಇವರು ಧೈರ್ಯಶಾಲಿಗಳಲ್ಲ, ಆದರೆ, ಖಂಡಿತವಾಗಿಯೂ ತಾಳ್ಮೆಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ-Chandra Grahan 2022: ವರ್ಷದ ಮೊದಲ ಚಂದ್ರಗ್ರಹಣ ಈ ರಾಶಿಯ ಜನರ ವೃತ್ತಿಜೀವನದಲ್ಲಿ ಬಡ್ತಿ ನೀಡಲಿದೆ
ಸ್ವಭಾವತಃ ಶಾಂತಿಯುತರಾಗಿರುತ್ತಾರೆ
ಈ ಲಗ್ನ ಜಾತಕದವರು ಜಗಳಗಳನ್ನು ಇಷ್ಟಪಡುವುದಿಲ್ಲ. ಒಳಗಿನಿಂದ ತುಂಬಾ ಪುಕ್ಕಲು ಸ್ವಭಾವದವರಾಗಿರುತ್ತಾರೆ. ಜಗಳ ವಿಕೋಪಕ್ಕೆ ಹೋದಾಗ ಕ್ಷಮೆ ಯಾಚಿಸಿ ವಿಷಯ ಬಗೆಹರಿಸಿಕೊಳ್ಳುತ್ತಾರೆ. ಶುಕ್ರನು ಇವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಶುಕ್ರನು ಅದೃಷ್ಟದ ಅಧಿಪತಿ ಮತ್ತು ಕೋಶಗಳ ಅಧಿಪತಿಯಾಗಿದ್ದಾನೆ. ಈ ಜಾತಕ ಹೊಂದಿರುವ ಹೆಂಡತಿ ಸುಂದರ ಮತ್ತು ಸದ್ಗುಣಿಯಾಗಿರುತ್ತಾಳೆ. ಶನಿಯು ಇವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತಾನೆ. ಈ ಜಾತಕ ಹೊಂದಿದವರು ಗಿಡ-ಮರಗಳಿಗೆ ನೀರುಣಿಸಬೇಕು ಮತ್ತು ರತ್ನಗಳಲ್ಲಿ ಪಚ್ಚೆಯನ್ನು ಧರಿಸಬೇಕು. ಪಚ್ಚೆಯನ್ನು ಧರಿಸುವುದರಿಂದ ಇವರ ಆತ್ಮಸ್ಥೈರ್ಯ ಬಲಗೊಳ್ಳುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.