Chanakya Niti For Men: ಆಚಾರ್ಯ ಚಾಣಕ್ಯರು ಓರ್ವ ಮಹಾನ್ ವಿದ್ವಾಂಸ, ನೀತಿಶಾಸ್ತ್ರ, ರಾಜತಾಂತ್ರಿಕ, ಶಿಕ್ಷಕ, ತಂತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಆಚಾರ್ಯ ಚಾಣಕ್ಯರು ತನ್ನ ನೀತಿಯ ಬಲದ ಮೇಲೆ ಚಂದ್ರಗುಪ್ತ ಮೌರ್ಯನಂತಹ ಸಾಮಾನ್ಯ ಮಗುವನ್ನು ಮಗಧ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿಸಿದ್ದರು. ಆಚಾರ್ಯ ಚಾಣಕ್ಯರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಚಾಣಕ್ಯ ನೀತಿ ತುಂಬಾ ವಿಶೇಷವಾಗಿದೆ. ಜೀವನ ಮತ್ತು ವ್ಯಕ್ತಿಗೆ ಸಂಬಂಧಿಸಿದ ಸಂಬಂಧಗಳು ಪೋಷಕರು, ಸ್ನೇಹಿತರು, ಹೆಂಡತಿ ಮತ್ತು ಸಹೋದರರ ಜೊತೆಗೆ ಹೇಗೆ ಇರಬೇಕು ಎಂಬುದರ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿಯು ಚಾಣಕ್ಯ ನೀತಿ ಮಾತುಗಳನ್ನು ಅನುಸರಿಸಿದರೆ, ಅವನು ಖಂಡಿತವಾಗಿಯೂ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ತನ್ನ ನೀತಿ ಶಾಸ್ತ್ರದಲ್ಲಿ ಆಚ್ಯಾರ್ಯ ಚಾಣಕ್ಯರು ಮಹಿಳೆಯರ ಕೆಲ ವಿಶೇಷತೆಗಳ ಕುರಿತು ಉಲ್ಲೇಖಿಸಿದ್ದು, ಅವುಗಳ ಮುಂದೆ ಪುರುಷರು ಸೋಲೋಪ್ಪಿಕೊಳ್ಳಲೇಬೇಕು ಎಂದಿದ್ದಾರೆ,


COMMERCIAL BREAK
SCROLL TO CONTINUE READING

ಚಾಣಕ್ಯರು ಪುರುಷ ಹಾಗೂ ಮಹಿಳೆಯ ಸಂಬಂಧದ ಬಗ್ಗೆ ಅನೇಕ ನೀತಿಗಳನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯರ ಪ್ರಕಾರ ಸ್ತ್ರೀಯರಲ್ಲಿ ಕೆಲವು ವಿಶೇಷ ಗುಣಗಳಿದ್ದು, ಆ ಗುಣಗಳ ಮುಂದೆ ಪುರುಷರೂ ಕೂಡ ತಲೆಬಾಗಲೇಬೇಕು ಎಂದಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹಲವು ಪಟ್ಟು ಹೆಚ್ಚು ಧೈರ್ಯಶಾಲಿಗಳಾಗಿರುತ್ತಾರೆ ಎನ್ನಲಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಹಿಳೆಯರು ಒತ್ತಡವನ್ನು ತೆಗೆದುಕೊಳ್ಳುವ ಬದಲು ಧೈರ್ಯದಿಂದ ಆ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂದಿದ್ದಾರೆ.


ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರ ಹೋಲಿಕೆಯಲ್ಲಿ ಮಹಿಳೆಯರು ಹೆಚ್ಚು ತಿಳುವಳಿಕೆಯುಳ್ಳವರಾಗಿರುತ್ತಾರೆ. ಇದೆ ಕಾರಣದಿಂದ ಅವರು ತಮ್ಮ ಬುದ್ಧಿ ಹಾಗು ವಿವೇಕದ ಬಲದ ಮೇಲೆ ತನ್ನ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳುತ್ತಾರೆ.


ಭಾವನೆಗಳ ವಿಷಯದಲ್ಲಿ ಮಹಿಳೆಯರು ಪುರುಷರಿಗಿಂತ ತುಂಬಾ ಮುಂದೆ ಇರುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದರೆ, ಭಾವುಕತೆ ಅವರ ದೌರ್ಬಲ್ಯ ಅಲ್ಲ ಮತ್ತು ಅದು ಅವರ ಆಂತರಿಕ ಶಕ್ತಿಯಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಅವರು ಎಲ್ಲಿಯಾದರೂ ಕೂಡ ಸುಲಭವಾಗಿ ಹೊಂದಿಕೊಳ್ಳುತ್ತಾರೆ.


ಇದನ್ನೂ ಓದಿ-Kiara Advani Wedding: ವಿವಾಹಕ್ಕಾಗಿ ಮನೆಯಿಂದ ಹೊರಟ್ರಾ ಕಿಯಾರಾ ಅಡ್ವಾಣಿ! ದೀಪಿಕಾ ಕೂಡ ಇದೆ ಕೆಲಸ ಮಾಡಿದ್ರು


ಪುರುಷರ ಹೋಲಿಕೆಯಲ್ಲಿ ಮಹಿಳೆಯರಲ್ಲಿ ಹೆಚ್ಚಿನ ಶಕ್ತಿಯ ಅಗತ್ಯತೆ ಇರುತ್ತದೆ. ಇದೇ ಕಾರಣದಿಂದ ಅವರಿಗೆ ಹಸಿವು ಕೂಡ ಹೆಚ್ಚಾಗುತ್ತದೆ. ಫಿಟ್ ಆಗಿರಲು ಅವರಿಗೆ ಹೆಚ್ಚಿನ ಕ್ಯಾಲೋರಿಗಳ ಅಗತ್ಯ ಬೀಳುತ್ತದೆ.


ಇದನ್ನೂ ಓದಿ-ಮದುವೆಗೂ ಮುನ್ನವೇ ತಾಯಿಯಾಗಲಿದ್ದಾಳೆಯೇ ದಕ್ಷಿಣ ಚಿತ್ರರಂಗದ ಈ ಖ್ಯಾತ ತಾರೆ?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ