Nithya Menen Pregnancy: ಮದುವೆಗೂ ಮುನ್ನವೇ ತಾಯಿಯಾಗಲಿದ್ದಾಳೆಯೇ ದಕ್ಷಿಣ ಚಿತ್ರರಂಗದ ಈ ಖ್ಯಾತ ತಾರೆ?

Nithya Menen Pregnancy: 'ಮಿಶನ್ ಮಂಗಲ್' ಮೂಲಕ ಭಾರಿ ಚರ್ಚೆಗೆ ಬಂದ ದಕ್ಷಿಣ ಚಿತ್ರರಂಗದ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.  

Written by - Nitin Tabib | Last Updated : Oct 28, 2022, 08:53 PM IST
  • ಈ ಚಿತ್ರವು ಮುನ್ನೆಲೆಗೆ ಬಂದ ತಕ್ಷಣ, ನಟಿಯ ಅಭಿಮಾನಿಗಳು
  • ಆಕೆ ತಾಯಿಯಾಗುವುದಕ್ಕೆ ಆಕೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತದೆ.
  • ಆದರೆ, ಇದನ್ನು ನೋಡಿದ ಕೆಲವರು ಭಾರಿ ಗೊಂದಲಕ್ಕೋಳಗಾಗಿದ್ದಾರೆ.
Nithya Menen Pregnancy: ಮದುವೆಗೂ ಮುನ್ನವೇ ತಾಯಿಯಾಗಲಿದ್ದಾಳೆಯೇ ದಕ್ಷಿಣ ಚಿತ್ರರಂಗದ ಈ ಖ್ಯಾತ ತಾರೆ? title=
Nithya Menen Pregnancy

Nithya Menen Pregnancy: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮದುವೆಯಿಲ್ಲದೆ ಗರ್ಭಧಾರಣೆಯ ಪರೀಕ್ಷಾ ಕಿಟ್‌ನ ಚಿತ್ರವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ಮುನ್ನೆಲೆಗೆ ಬಂದ ತಕ್ಷಣ, ನಟಿಯ ಅಭಿಮಾನಿಗಳು ಆಕೆ ತಾಯಿಯಾಗುವುದಕ್ಕೆ ಆಕೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತದೆ. ಆದರೆ, ಇದನ್ನು ನೋಡಿದ ಕೆಲವರು ಭಾರಿ ಗೊಂದಲಕ್ಕೋಳಗಾಗಿದ್ದಾರೆ.

‘ಬ್ರೀತ್’ ವೆಬ್ ಸಿರೀಸ್ ನಲ್ಲಿ ಅಭಿಷೇಕ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಿತ್ಯಾ ಮೆನನ್ ಈ ಹಿಂದೆ ಮದುವೆಯ ಸುದ್ದಿಯಿಂದ ಭಾರಿ ಹೆಡ್ಲೈನ್ ಗಿಟ್ಟಿಸಿದ್ದಳು. ಆದರೆ, ನಟಿ ಈ ಸುದ್ದಿಯನ್ನು ಶುದ್ಧ ವದಂತಿ ಎಂದು ತಳ್ಳಿಹಾಕಿದ್ದಳು. ಇದೀಗ ನಟಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ  ಪ್ರೆಗ್ನೆನ್ಸಿ ಕಿಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾಳೆ, ಈ ಫೋಟೋ ಪೋಸ್ಟ್ ಗೆ ನಿತ್ಯಾ "ಅಂಡ್ ದಿ ವಂಡರ್ ಬಿಗಿನ್ಸ್" ಎಂದು ಶೀರ್ಷಿಕೆ ನೀಡಿದ್ದಾಳೆ. ಇದನ್ನು ನೋಡಿದ ಕುಟುಂಬಸ್ಥರಿಂದ ಮತ್ತು ಸ್ನೇಹಿತರಿಂದ ಅಭಿನಂದನೆಗಳು ಬರಲಾರಂಭಿಸಿವೆ. ನಟಿಯ ಪೋಸ್ಟ್‌ಗೆ ಹಲವು ಶುಭಾಶಯಗಳು ಮತ್ತು ಶುಭ ಸಂದೇಶಗಳು ಬರುತ್ತಿವೆ.

 
 
 
 

 
 
 
 
 
 
 
 
 
 
 

A post shared by Nithya Menen (@nithyamenen)

ಇದನ್ನೂ ಓದಿ-ಟ್ವಿಟ್ಟರ್ ಗೆ ಯಜಮಾನನಾದ ಎಲೋನ್ ಮಾಸ್ಕ್, ಹ್ಯಾಪಿ ಮೂಡ್ನಲ್ಲಿ ಕಂಗನಾ...!

ನಟಿ ಇನ್ನೂ ಮದುವೆಯಾಗದ ಕಾರಣ ನಿತ್ಯಾಳ ಈ ಪೋಸ್ಟ್‌ನಿಂದ ಹಲವು ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆ ನಿಜವಾಗಿಯೂ ಗರ್ಭಿಣಿಯಾಗಿದ್ದಾಳೆ ಎಂದು ನಂಬುತ್ತಿದ್ದರೆ, ಉಳಿದವರು  ಈ ಗರ್ಭಧಾರಣೆಯ ಸರ್ಪ್ರೈಸ್ ಖಂಡಿತವಾಗಿಯೂ ನಟಿಯ ಮುಂಬರುವ ಚಿತ್ರದ ಪ್ರಚಾರದ ಭಾಗವಾಗಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ-ರಾಕಿಭಾಯ್‌ಗೆ ಬಾಲಿವುಡ್‌ನಿಂದ ಬಿಗ್‌ ಆಫರ್‌ : ʼಬ್ರಹ್ಮಾಸ್ತ್ರ 2ʼ, ʼಕರ್ಣʼ ಚಿತ್ರದಲ್ಲಿ ಆಕ್ಟ್‌ ಮಾಡ್ತಾರಾ ಯಶ್‌...!

ನಿತ್ಯಾ ಮೆನನ್ ಅವರು ಇತ್ತೀಚೆಗಷ್ಟೇ 'ಬ್ರೀತ್' ವೆಬ್ ಸರಣಿಯಲ್ಲಿ ಅಭಿಷೇಕ್ ಬಚ್ಚನ್ ಅವರ ಎದುರು ಕೆಲಸ ಮಾಡಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ, ಇದರಿಂದಾಗಿ ಅವರು ಹಿಂದಿ ಸಿನಿಮಾ ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾಳೆ. ನಿತ್ಯಾ ಮೆನನ್ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಆಕೆ ಕೊನೆಯದಾಗಿ ಮಮ್ಮುಟ್ಟಿ ಅವರ 'ಪುಜು' ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು, ಇತ್ತೀಚೆಗೆ ನಿತ್ಯಾ ಮೆನನ್ ಸೂಪರ್ ಸ್ಟಾರ್ ಧನುಷ್ ಅವರ 'ತಿರುಚಿತಾಂಬಲಂ' ನಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾಳೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಸಾಬೀತಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News