Christmas Party At Home: ಕ್ರಿಸ್‌ಮಸ್‌ಗೆ ಇನ್ನು ಒಂದೇ ದಿನ ಬಾಕಿ ಉಳಿದಿದೆ. ಹೀಗಿರುವಾಗ ಕ್ರಿಸ್‌ಮಸ್ (Christmas 2021) ಹಬ್ಬದ ಸಂಭ್ರಮದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್‌ನ ಅಪಾಯ ಜನರಲ್ಲಿ ಹೆಚ್ಚುತ್ತಿದೆ. Omicron ನಿಂದಾಗಿ ರೋಗಿಗಳು ಹೆಚ್ಚಾಗುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಮನೆಯಲ್ಲಿಯೇ ಇದ್ದು ಹಬ್ಬವನ್ನು ಆನಂದಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದು, ಇದರಿಂದ ನೀವು ಈ ಹಬ್ಬವನ್ನು ನಿಮ್ಮ ಮಕ್ಕಳೊಂದಿಗೆ ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗಲಿದೆ ಮತ್ತು ನಿಮ್ಮ ಮಕ್ಕಳು ಕೂಡ ಇದನ್ನು ತುಂಬಾ ಇಷ್ಟಪಡಲಿದ್ದಾರೆ. ಮನೆಯಲ್ಲಿ ಸುರಕ್ಷಿತ ಕ್ರಿಸ್ಮಸ್ ಪಾರ್ಟಿಯನ್ನು ಸೇಲಿಬ್ರೆಟ್ ಮಾಡಲು ಇಲ್ಲಿವೆ ಕೆಲ ಸಲಹೆಗಳು (Christmas Celebration Tips).


COMMERCIAL BREAK
SCROLL TO CONTINUE READING

ಮಕ್ಕಳೊಂದಿಗೆ ಮಾತನಾಡಿ- ವಿಶ್ವಾದ್ಯಂತ ಕ್ರಿಸ್‌ಮಸ್ ದಿನದಂದು ಸಾಕಷ್ಟು ಔತಣಕೂಟಗಳು ನಡೆಯುತ್ತವೆ, ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳ ಮನಸ್ಸು ಕೂಡ ಈ ದಿನದಂದು ಪಾರ್ಟಿ ಮಾಡಲು ಹಾತೊರೆಯುವುದು ಸಹಜ.ಇದರಿಂದಾಗಿ ಮಕ್ಕಳಿಂದಲೂ ಕೂಡ ಒತ್ತಾಯ ರುತ್ತದೆ. ಹೀಗಾಗಿ, ಮಕ್ಕಳೊಂದಿಗೆ ಮಾತನಾಡಿ ಮತ್ತು ಓಮಿಕ್ರಾನ್ ಗಂಭೀರತೆಯ ಬಗ್ಗೆ ಅವರಿಗೆ ತಿಳಿಹೇಳಿ. ಪರಿಸ್ಥಿತಿಯ ಗಂಭೀರತೆ ಕುರಿತು ಪ್ರೀತಿಯಿಂದ ವಿವರಿಸಿ ಮತ್ತು ಮನೆಯಲ್ಲಿ ಪಾರ್ಟಿ ಮಾಡುವ ಬಗ್ಗೆ ಐಡಿಯಾಗಳನ್ನು ನೀಡಿ.


ಮನೆಯಲ್ಲಿ ಈ ರೀತಿಯ ಪಾರ್ಟಿಗೆ ಸಿದ್ಧತೆ ಮಾಡಿ- ನೀವು ಮಕ್ಕಳಿಗೆ ಕ್ರಿಸ್ಮಸ್ ಟ್ರೀ ಅನ್ನು ಅಲಂಕರಿಸುವ ಕೆಲಸವನ್ನು ನೀಡಬಹುದು, ಆದ್ದರಿಂದ ಮಕ್ಕಳು ತುಂಬಾ ಆನಂದಿಸುತ್ತಾರೆ. ಮರವನ್ನು ಅಲಂಕರಿಸಲು ನೀವು ಸಹ ಅವರಿಗೆ ಸಹಾಯ ಮಾಡಿ. ಇದಲ್ಲದೆ ನೀವು ಮನೆಯನ್ನು ಅಲಂಕರಿಸುವಾಗ ಮಕ್ಕಳನ್ನು ಸಹ ಶಾಮೀಲುಗೊಳಿಸಿ.


ಇದನ್ನೂ ಓದಿ-ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ತೆರೆಯಲಿದೆ, ಸಿಗಲಿದೆ ಪದೋನ್ನತಿ


ಮನೆಯಲ್ಲಿ ತಿನಿಸುಗಳನ್ನು ಮಾಡಿ- ಕ್ರಿಸ್‌ಮಸ್‌ನಲ್ಲಿ ಕೇಕ್ ತಯಾರಿಸಲಾಗುತ್ತದೆ, ಈ ದಿನ ಅನೇಕ ಜನರು ಹೊರಗಿನಿಂದ ಕೇಕ್‌ಗಳನ್ನು ಖರೀದಿಸುತ್ತಾರೆ, ಆದರೆ ನೀವು ಮಕ್ಕಳೊಂದಿಗೆ ಮನೆಯಲ್ಲಿಯೇ ಕೇಕ್ ತಯಾರಿಸಬಹುದು. ಮಕ್ಕಳು ಇದನ್ನು ತುಂಬಾ ಆನಂದಿಸುತ್ತಾರೆ. ಇದರ ಜೊತೆಗೆ ನೀವು ಮನೆಯಲ್ಲಿಯೇ ತಯಾರಿಸಿದ ಖಾದ್ಯ ಪದಾರ್ಥ ಸೇವಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ-Grah Dosh: ಪ್ರತಿ ಗ್ರಹದ ಅಶುಭ ಪರಿಣಾಮವನ್ನು ನಿವಾರಿಸುತ್ತೆ ಈ ಶಕ್ತಿಯುತ ಪರಿಹಾರ


ಆಟಗಳು- ಮಕ್ಕಳಿಗಾಗಿ ಹಲವು ಆಟಗಳನ್ನು ನೀವು ಯೋಜಿಸಬಹುದು. ಇದರೊಂದಿಗೆ, ಅವರು ದೈಹಿಕವಾಗಿಯೂ ಸಕ್ರಿಯರಾಗುತ್ತಾರೆ ಮತ್ತು ಪರಸ್ಪರ ನೃತ್ಯವನ್ನು ಸಹ ಆನಂದಿಸುತ್ತಾರೆ. ನೀವು ಬಯಸಿದರೆ, ಆಟಗಳ ನಂತರ ನೀವು ಅವರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡಬಹುದು.


ಇದನ್ನೂ ಓದಿ-Budh Gochar: 2022ರ ಮೊದಲು ಬುಧ ರಾಶಿ ಪರಿವರ್ತನೆ, ಈ 5 ರಾಶಿಯವರು ಜಾಗರೂಕರಾಗಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.