Budha Rashi Parivartan: ಗ್ರಹಗಳ ಸಂಕ್ರಮಣಗಳು ಬಹಳ ಮುಖ್ಯ ಮತ್ತು ಈ ಸಂಕ್ರಮಣಗಳು ವಿಶೇಷ ಸಂದರ್ಭದಲ್ಲಿ ಸಂಭವಿಸಿದಾಗ ಅಥವಾ ವಿಶೇಷ ಸಂಯೋಜನೆಯನ್ನು ಮಾಡಿದಾಗ, ಅವುಗಳಿಂದ ಶುಭ ಮತ್ತು ಅಶುಭ ಫಲಿತಾಂಶಗಳ ಪರಿಣಾಮವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಹೊಸ ವರ್ಷ ಪ್ರಾರಂಭವಾಗುವ ಮೊದಲು, ಬುಧ ಗ್ರಹವು (Mercury Transit) 29 ಡಿಸೆಂಬರ್ 2021 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದೆ. ಬುಧ ಜನವರಿ 21 ರವರೆಗೆ ಈ ರಾಶಿಯಲ್ಲಿ ಇರುತ್ತಾರೆ. ಬುದ್ಧಿಶಕ್ತಿ, ಸಂವಹನ, ತರ್ಕ ಮತ್ತು ವೃತ್ತಿಯ ಮೇಲೆ ಪ್ರಭಾವ ಬೀರುವ ಬುಧವು ಈ ಅವಧಿಯಲ್ಲಿ ಎಲ್ಲಾ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಈ ಬುಧ ಸಂಕ್ರಮಣವು (Budha Rashi Parivartan) 5 ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಜೀವನದ ಕೆಲವು ಅಂಶಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ರಾಶಿಚಕ್ರದ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ :
ಮೇಷ ರಾಶಿ (Aries): ಮೇಷ ರಾಶಿಯ ಜನರು ಈ ಅವಧಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ಹೊಸ ಕೆಲಸವನ್ನು ಪ್ರಾರಂಭಿಸಲು ಹೊರಟಿರುವವರು ಹಣದ ಕೊರತೆಯನ್ನು (Financial Troubles) ಎದುರಿಸಬೇಕಾಗಬಹುದು.
ಇದನ್ನೂ ಓದಿ- Horoscope 2022: ಹೊಸ ವರ್ಷದಲ್ಲಿ ಈ ತಿಂಗಳಿನಿಂದ ಬದಲಾಗಲಿದೆ 4 ರಾಶಿಯವರ ಅದೃಷ್ಟ
ಮಿಥುನ ರಾಶಿ (Gemini): ಮಿಥುನ ರಾಶಿಯ ಜನರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಚರ್ಮದ ಸಮಸ್ಯೆ (Skin Problem), ಅಲರ್ಜಿ ಅಥವಾ ನಿದ್ರಾಹೀನತೆಯ ಸಮಸ್ಯೆ ಇರಬಹುದು. ಸಮತೋಲಿತ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ಸಿಂಹ ರಾಶಿ (Leo): ಸಿಂಹ ರಾಶಿಯವರು ಕುಟುಂಬದಲ್ಲಿ ಕೆಲವು ಕಲಹಗಳನ್ನು ಎದುರಿಸಬೇಕಾಗಬಹುದು. ತಾಯಿಯೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಸ್ನೇಹಿತರೊಂದಿಗೂ ವಿವಾದಗಳು ಉಂಟಾಗಬಹುದು.
ಇದನ್ನೂ ಓದಿ- ಶನಿಯ ಪ್ರಕೋಪದಿಂದ ಬಚಾವಾಗಲು ಡಿಸೆಂಬರ್ 25 ವಿಶೇಷ ದಿನ, ಅಂದು ಈ ಕೆಲಸ ಮಾಡಿ ನೋಡಿ
ಮಕರ ರಾಶಿ (Capricorn): ಮಕರ ರಾಶಿಯವರಿಗೆ ನಿದ್ರಾಹೀನತೆಯ ಸಮಸ್ಯೆಯೂ ಕಾಡಬಹುದು. ಇದಲ್ಲದೆ, ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಾಧ್ಯತೆಯೂ ಇದೆ. ಒತ್ತಡವನ್ನು ತಪ್ಪಿಸುವುದು ಮತ್ತು ಧ್ಯಾನ ಇತ್ಯಾದಿಗಳನ್ನು ಆಶ್ರಯಿಸುವುದು ಉತ್ತಮ.
ಕುಂಭ ರಾಶಿ (Aquarius): ಬುಧ ಸಂಕ್ರಮಣ ಕುಂಭ ರಾಶಿಯವರಿಗೆ ಒಳ್ಳೆಯದೆಂದು ಹೇಳಲಾಗದು. ಅವರು ಜೀವನದ ಹಲವು ರಂಗಗಳಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು. ಕಠಿಣ ಪರಿಶ್ರಮದ ನಂತರವೇ ನೀವು ಫಲವನ್ನು ಪಡೆಯುತ್ತೀರಿ. ಅನಾವಶ್ಯಕ ಪ್ರಯಾಣಗಳು ಎದುರಾಗಲಿವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.