ಬೆಂಗಳೂರು : ಯಾರೇ ಆಗಲಿ ಸ್ಲಿಂ ಆಗಿರಲು ಬಯಸುತ್ತಾರೆ. ಮುಖ ಸೌಂದರ್ಯದ ಜೊತೆಗೆ ದೇಹ ಸೌಂದರ್ಯಕ್ಕೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ತೂಕ ಇಳಿಸಿಕೊಳ್ಳಲು ಯೋಚಿಸುವವರು ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಕಡಿಮೆ ಕ್ಯಾಲೋರಿ ಇರುವಂತಹ ಆಹಾರಗಳನ್ನು ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು   ಅನ್ನ ತಿನ್ನುವುದನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಹಾಗೆ ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಬ್ರೌನ್ ರೈಸ್ ನಿಂದ ತೂಕ ಕಡಿಮೆ ಮಾಡಿಕೊಳ್ಳುವುದು ಸಾಧ್ಯ : 
ತೂಕ ಕಳೆದು ಕೊಳ್ಳುವುದು ಮುಖ್ಯ ಅದರ ಜೊತೆ ಅನ್ನ ಬಿಡುವುದು ಕೂಡಾ ಸಾಧ್ಯವಿಲ್ಲ ಎಂದಾದರೆ ಬಿಳಿ ಅನ್ನದ ಬದಲಿಗೆ, ಬ್ರೌನ್ ರೈಸ್ ಸೇವಿಸುವುದು ಉತ್ತಮ.  ಬ್ರೌನ್ ರೈಸ್ ತಿನ್ನುವುದರಿಂದ, ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ದೈನಂದಿನ ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸಿದರೆ, ದೇಹದಲ್ಲಿ 100 ಕ್ಯಾಲೊರಿಗಳವರೆಗೆ ಕಡಿಮೆಯಾಗುತ್ತದೆ.


ಇದನ್ನೂ ಓದಿ : Amla Seeds Benefits : ನೆಲ್ಲಿ ಕಾಯಿ ಬೀಜದಲ್ಲಿದೆ, ಅದ್ಭುತ ಆರೋಗ್ಯ ಪ್ರಯೋಜನಗಳು!


ಬಿಳಿ ಅನ್ನ ಆರೋಗ್ಯಕ್ಕೆ ಹಾನಿಕಾರಕ : 
ಬಿಳಿ ಅನ್ನವನ್ನು ಸೇವಿಸುವುದು ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಏಕೆಂದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಬಿಳಿ ಅನ್ನದ ಬದಲಿಗೆ ಬ್ರೌನ್ ರೈಸ್ ಮತ್ತು ಗೋಧಿಯಂತಹ ಧಾನ್ಯಗಳನ್ನು ತಿನ್ನುವ ಜನರು, ಹೆಚ್ಚು ಫಿಟ್ ಆಗಿರುತ್ತಾರೆ ಎನ್ನಲಾಗಿದೆ. ಬ್ರೌನ್ ರೈಸ್ ತಿನ್ನುವುದರಿಂದ ಚಯಾಪಚಯ ಮತ್ತು ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ.


ಈ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು : 
 ಬ್ರೌನ್ ರೈಸ್ ತಿನ್ನುವವರು ಪ್ರತಿದಿನ ಸುಮಾರು ಅರ್ಧ ಗಂಟೆಗಳ ಕಾಲ ಸ್ಪೀಡ್ ವಾಕ್ ಮಾಡಲು ಸಲಹೆ ನೀಡುಲಾಗುತ್ತದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು  ನಿಯಂತ್ರಣದಲ್ಲಿರುತ್ತದೆ. ಕೆಲವು ವಾರಗಳವರೆಗೆ ಬ್ರೌನ್ ರೈಸ್ ಮತ್ತು ವ್ಯಾಯಾಮದ ದಿನಚರಿಯನ್ನು ಅನುಸರಿಸಿದರೆ, ಬೆಲ್ಲಿ ಫ್ಯಾಟ್ ಕೂಡಾ ಕರಗುತ್ತದೆ. 


ಇದನ್ನೂ ಓದಿ : Raw Onion : ನೀವು ಪ್ರತಿದಿನ ಹಸಿ ಈರುಳ್ಳಿ ತಿನ್ನುತ್ತೀರಾ? ಹಾಗಿದ್ರೆ, ಆರೋಗ್ಯಕ್ಕೆ ತಪ್ಪಿದ್ದಲ್ಲ ಅಪಾಯ


ಹೃದಯ ಸಂಬಂಧಿ ಕಾಯಿಲೆಗಳೂ ದೂರ ಉಳಿಯುತ್ತವೆ :
ಬ್ರೌನ್ ರೈಸ್ ನಲ್ಲಿರುವ ಫೈಬರ್ ಮತ್ತು ಹೋಲ್ ಗ್ರೇನ್  ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವವರು ಹೃದಯಾಘಾತ,  ಕರೋನರಿ ಹಾರ್ಟ್ ಡಿಸೀಸ್ ಅಥವಾ ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಕಾಯಿಲೆಗಳ ಅಪಾಯದಿಂದ ದೂರ ಉಳಿಯುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.