Raw Onion : ನೀವು ಪ್ರತಿದಿನ ಹಸಿ ಈರುಳ್ಳಿ ತಿನ್ನುತ್ತೀರಾ? ಹಾಗಿದ್ರೆ, ಆರೋಗ್ಯಕ್ಕೆ ತಪ್ಪಿದ್ದಲ್ಲ ಅಪಾಯ

ಬೇಸಿಗೆಯಲ್ಲಿ ಹೆಚ್ಚು ಹಸಿ ಈರುಳ್ಳಿಯನ್ನು ತಿನ್ನುವುದು ಎಷ್ಟು ಹಾನಿಕಾರಕ ಗೊತ್ತಾ? ಹೌದು, ಬೇಸಿಗೆಯಲ್ಲಿ ಹೆಚ್ಚು ಹಸಿ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

Written by - Zee Kannada News Desk | Last Updated : May 27, 2022, 04:17 PM IST
  • ಕೆಲ ಜನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ
  • ಬೇಸಿಗೆಯಲ್ಲಿ ಹೆಚ್ಚು ಹಸಿ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ
  • ಬೇಸಿಗೆಯಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಕರುಳಿಗೆ ಹಾನಿ
Raw Onion : ನೀವು ಪ್ರತಿದಿನ ಹಸಿ ಈರುಳ್ಳಿ ತಿನ್ನುತ್ತೀರಾ? ಹಾಗಿದ್ರೆ, ಆರೋಗ್ಯಕ್ಕೆ ತಪ್ಪಿದ್ದಲ್ಲ ಅಪಾಯ title=

Disadvantages Of Eating Raw Onion : ಬೇಸಿಗೆಯಲ್ಲಿ ಜನ ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನನ್ನೂ ಮಾಡುವುದಿಲ್ಲ, ಆದ್ರೂ ಕೆಲ ಜನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. ಅದ್ರಲ್ಲೂ ಈ ಸಮಯದಲ್ಲಿ ಹಸಿ ಈರುಳ್ಳಿ ಸೇವಿಸುವುದು ಆರೋಗ್ಯಕ್ಕೆ, ಇದರ ಸೇವನೆಯಿಂದ ದೇಹವನ್ನು ಶಾಖದಿಂದ ರಕ್ಷಿಸುತ್ತದೆ, ಜೊತೆಗೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಬೇಸಿಗೆಯಲ್ಲಿ ಹೆಚ್ಚು ಹಸಿ ಈರುಳ್ಳಿಯನ್ನು ತಿನ್ನುವುದು ಎಷ್ಟು ಹಾನಿಕಾರಕ ಗೊತ್ತಾ? ಹೌದು, ಬೇಸಿಗೆಯಲ್ಲಿ ಹೆಚ್ಚು ಹಸಿ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ

ಕರುಳಿಗೆ ಹಾನಿ

ಬೇಸಿಗೆಯಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಕರುಳಿಗೆ ಹಾನಿಯಾಗಬಹುದು. ಹೌದು, ಹಸಿ ಈರುಳ್ಳಿ ನಿಮ್ಮ ದೇಹದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾದ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ, ಹಸಿ ಈರುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಇದನ್ನೂ ಓದಿ : Dates Benefits : ಪುರುಷರೆ ಪ್ರತಿದಿನ ಸೇವಿಸಿ ಖರ್ಜೂರ, ನಿಮ್ಮ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು!

ಅಸಿಡಿಟಿ

ಹಸಿ ಈರುಳ್ಳಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ಇದು ಅಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೆ, ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಕಾರಣ, ದೇಹದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗುತ್ತದೆ. ಹೀಗಾಗಿ, ಆಹಾರದೊಂದಿಗೆ ಹಸಿ ಈರುಳ್ಳಿ ತಿನ್ನುವುದು ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ, ನೀವು ಅಗತ್ಯಕ್ಕಿಂತ ಹೆಚ್ಚು ಹಸಿ ಈರುಳ್ಳಿ ಸೇವಿಸಿದರೆ. ಆದ್ದರಿಂದ ಇದು ನಿಮಗೆ ಹಾನಿಕಾರಕವಾಗಬಹುದು.

ಮಲಬದ್ಧತೆಯ ಸಮಸ್ಯೆ

ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಹೊಟ್ಟೆನೋವು, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ, ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಸೇವಿಸುವುದನ್ನು ನಿಲ್ಲಿಸಿ, ಆದ್ರೆ, ಇದರಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿದೆ. ತಿಂದರೆ ಹೊಟ್ಟೆ ನೋವು, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಹಸಿ ಈರುಳ್ಳಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ಇದನ್ನೂ ಓದಿ : Flaxseed Raita : ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅಗಸೆ ಬೀಜ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News