Bhindi Fry Recipe : ಬೆಂಡೆಕಾಯಿ ಫ್ರೈ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರೂರುತ್ತದೆ. ಎಲ್ಲಾ ವಯೋಮಾನದವರೂ ಕಡಲೆ ಹಿಟ್ಟಿನಲ್ಲಿ ಲೇಪಿತ ಗರಿಗರಿಯಾದ ಬೆಂಡೆಕಾಯಿ ರುಚಿಯನ್ನು ಇಷ್ಟಪಡುತ್ತಾರೆ. ಗರಿಗರಿಯಾದ ಬೆಂಡೆಕಾಯಿ ಫ್ರೈ ಊಟದ ಜೊತೆ ಉತ್ತಮ ಕಾಂಬಿನೇಷನ್. ಇದನ್ನು ಪಲ್ಯದಂತೆಯೂ ಅಥವಾ ಸೈಡ್ ಡಿಶ್ ಆಗಿಯೂ ಸೇವಿಸಬಹುದು. ಏನಾದರೂ ಹೊಸ ರೆಸಿಪಿಯನ್ನು ಪ್ರಯತ್ನಿಸಲು ಬಯಸಿದರೆ, ನೀವು ಗರಿಗರಿಯಾದ ಬೆಂಡೆ ಫ್ರೈ ಮಾಡಬಹುದು. ಗರಿಗರಿಯಾದ ಬೆಂಡೆಕಾಯಿ ಫ್ರೈ ಟೇಸ್ಟಿ ಮತ್ತು ಪೌಷ್ಟಿಕವಾಗಿರುತ್ತದೆ.


COMMERCIAL BREAK
SCROLL TO CONTINUE READING

ಬೆಂಡೆಕಾಯಿ ಫ್ರೈ ತಯಾರಿಸುವುದು ಸುಲಭ ಮತ್ತು ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನೀವು ಹೊಸ ಅಡುಗೆಯನ್ನು ಕಲಿಯುತ್ತಿದ್ದರೆ, ಬೆಂಡೆಕಾಯಿ ಫ್ರೈ ಮಾಡುವ ಮೂಲಕ ನೀವು ಎಲ್ಲರನ್ನೂ ಮೆಚ್ಚಿಸಬಹುದು. ಬನ್ನಿ ಗರಿಗರಿಯಾದ ಬೆಂಡೆಕಾಯಿ ಫ್ರೈ ಮಾಡುವುದು ಹೇಗೆಂದು ತಿಳಿಯೋಣ.


ಇದನ್ನೂ ಓದಿ: Sweet Recipe: ಶಾವಿಗೆ ಪಾಯಸ ಒಮ್ಮೆ ಹೀಗೆ ಮಾಡಿ ನೋಡಿ, ಇಷ್ಟಪಟ್ಟು ತಿನ್ನುವಿರಿ


ಬೆಂಡೆಕಾಯಿ ಫ್ರೈ ತಯಾರಿಸಲು ಬೇಕಾಗುವ ಪದಾರ್ಥಗಳು


ಬೆಂಡೆಕಾಯಿ - 250 ಗ್ರಾಂ
ಕಡಲೆ ಹಿಟ್ಟು - 1/4 ಕಪ್
ಅಕ್ಕಿ ಹಿಟ್ಟು - 1/4 ಕಪ್
ಅರಿಶಿನ - 1/4 ಟೀಸ್ಪೂನ್
ಕೆಂಪು ಮೆಣಸಿನ ಪುಡಿ - 1/2 ಟೀಸ್ಪೂನ್
ಜೀರಿಗೆ ಪುಡಿ - 1/2 ಟೀಸ್ಪೂನ್
ಕೊತ್ತಂಬರಿ ಪುಡಿ - 1/2 ಟೀಸ್ಪೂನ್
ಚಾಟ್ ಮಸಾಲಾ - 1/2 ಟೀಸ್ಪೂನ್
ನಿಂಬೆ ರಸ - 1 ಟೀಸ್ಪೂನ್
ಎಣ್ಣೆ - ಹುರಿಯಲು
ಉಪ್ಪು - ರುಚಿಗೆ ತಕ್ಕಂತೆ


ಬೆಂಡೆಕಾಯಿ ಫ್ರೈ ಮಾಡುವ ವಿಧಾನ 


ಬೆಂಡೆಕಾಯಿ ಫ್ರೈ ತಯಾರಿಸಲು, ಮೊದಲು ಬೆಂಡೆಕಾಯಿಯನ್ನು ತೊಳೆಯಿರಿ ಮತ್ತು ಹತ್ತಿ ಬಟ್ಟೆಯಿಂದ ಒರೆಸಿ. ಬೆಂಡೆಕಾಯಿಯನದನು ದೊಡ್ಡ ತುಂಡುಗಳಾಗಿ ಕತ್ತರಿಸಿ ಅದರೊಳಗಿನ ಬೀಜಗಳನ್ನು ತೆಗೆದುಹಾಕಿ. ಈಗ ಬೆಂಡೆಕಾಯಿಯ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅದಕ್ಕೆ ಅರಿಶಿನ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ ಮತ್ತು ಬೆಂಡೆಕಾಯಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ ರುಚಿಗೆ ತಕ್ಕಂತೆ ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ.


ಇದನ್ನೂ ಓದಿ : ಮಧುಮೇಹವನ್ನು ಪರ್ಮನೆಂಟ್‌ ಆಗಿ ನಿವಾರಿಸುತ್ತೆ ʻಬ್ಲೂ ಟೀʼ


ಈಗ ಮ್ಯಾರಿನೇಟ್ ಮಾಡಲು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಇದರ ನಂತರ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೆಂಡೆಕಾಯಿ ಇರುವ ಪಾತ್ರೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಮತ್ತು ನಿಧಾನವಾಗಿ ಬೆಂಡೆಕಾಯಿಗಳನ್ನು ಮಸಾಲೆಗಳೊಂದಿಗೆ ಲೇಪಿಸಿ. ಬೆಂಡೆಕಾಯಿಗೆ ನೀರನ್ನು ಸೇರಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ.


ಈಗ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ, ಬೆಂಡೆಕಾಯಿ ತುಂಡುಗಳನ್ನು ಬಾಣಲೆಯಲ್ಲಿ ಹಾಕಿ ಮತ್ತು ಅವುಗಳನ್ನು ಡೀಪ್ ಫ್ರೈ ಮಾಡಲು ಬಿಡಿ. ಈ ಸಮಯದಲ್ಲಿ, ಗ್ಯಾಸ್‌ ಮಧ್ಯಮ ಉರಿಯಲ್ಲಿರಲಿ. ಬೆಂಡೆಕಾಯಿ ಗರಿಗರಿಯಾದ ಮತ್ತು ಗೋಲ್ಡನ್ ಕಲರ್‌ ಆಗುವವರೆಗೆ ಫ್ರೈ ಮಾಡಿ. ಇದರ ನಂತರ ಅದನ್ನು ಒಂದು ತಟ್ಟೆಯಲ್ಲಿ ತೆಗೆಯಿರಿ. ಗರಿಗರಿಯಾದ ಬೆಂಡೆಕಾಯಿ ಮೇಲೆ ಒಂದು ಚಿಟಿಕೆ ಚಾಟ್ ಮಸಾಲವನ್ನು ಸಿಂಪಡಿಸಿ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಸೇವಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ