ಬೆಂಗಳೂರು: ಜೀವನ ಎಂದ ಮೇಲೆ ಸುಖ-ದುಃಖ ಎರಡೂ ಇದ್ದದ್ದೇ. ನಗು-ಅಳು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿಯವರೆಗೆ ನೀವು ಸಾಮಾನ್ಯವಾಗಿ ನಗುವುದು ಆರೋಗ್ಯಕ್ಕೆ ಉತ್ತಮ ಎಂದು ತಿಳಿದಿರಬಹುದು ಮತ್ತು ನಗುವುದರ ಪ್ರಯೋಜನಗಳ ಬಗ್ಗೆಯೂ ಕೇಳಿರಬೇಕು. ಆದರೆ ಅಳುವುದರಿಂದಲೂ ಸಹ ಅನೇಕ ಪ್ರಯೋಜನಗಳು  (Health benefits of Crying) ಸಿಗಲಿವೆ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಹೌದು, ಅಳುವುದು (Crying) ಒಂದು ಸಾಮಾನ್ಯ ಕ್ರಿಯೆಯಾಗಿದೆ, ಇದು ವಿವಿಧ ಅಭಿವ್ಯಕ್ತಿಗಳಿಂದ ಉಂಟಾಗುತ್ತದೆ. ಅಳುವುದು ನಿಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿ ಎಂದು ಸಂಶೋಧಕರು ಹೇಳುತ್ತಾರೆ. ಮಾನವರ ಕಣ್ಣೀರು ಮೂರು ವಿಧಗಳಾಗಿರಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಲೇಖನದಲ್ಲಿ, ಕಣ್ಣೀರಿನ ಪ್ರಕಾರಗಳು ಮತ್ತು ಅಳುವುದರಿಂದ ಸಿಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.


ಇದನ್ನೂ ಓದಿ- Benefits of soaked gram : ಈ ಐದು ಕಾರಣಕ್ಕಾಗಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನಿ


ಕಣ್ಣೀರಿನ ವಿಧಗಳು? (Types of Tears)
ಮಾನವರ ಕಣ್ಣಿನಿಂದ ಮೂರು ರೀತಿಯ ಕಣ್ಣೀರು ಬರುತ್ತದೆ ಎಂದು ಹೇಳಲಾಗುತ್ತದೆ.
>> ಒಬ್ಬ ವ್ಯಕ್ತಿಯು ಕಣ್ಣು ಮಿಟುಕಿಸಿದಾಗ ಒಂದು ರೀತಿಯ ಕಣ್ಣೀರು ಹೊರಬರುತ್ತದೆ, ಇದು ಕಣ್ಣುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತದೆ. ಈ ಕಣ್ಣೀರಿನ ಹೆಸರು ಬಾಸಲ್ ಟಿಯರ್ಸ್ (Basal Tears).
>> ಎರಡನೆಯ ವಿಧದ ಕಣ್ಣೀರು ರಿಫ್ಲೆಕ್ಸ್ ಕಣ್ಣೀರು (Reflex Tears). ಇದು ಕಣ್ಣುಗಳು ಗಾಳಿ, ಹೊಗೆ, ಮಣ್ಣು ಇತ್ಯಾದಿಗಳಿಗೆ ಒಡ್ಡಿಕೊಳ್ಳುವುದರಿಂದ ಬರುತ್ತದೆ. ಈ ಕಣ್ಣೀರಿನ ಮೂಲಕ ದೇಹವು ಕಣ್ಣುಗಳನ್ನು ರಕ್ಷಿಸುತ್ತದೆ.
>> ಇದಲ್ಲದೆ, ಮಾನವರು ವಿವಿಧ ಭಾವನೆಗಳಿಂದ ಸಹ ಕಣ್ಣೀರು ಸುರಿಸುತ್ತಾರೆ. ಇವುಗಳನ್ನು ಭಾವನಾತ್ಮಕ ಕಣ್ಣೀರು (Emotional Tears) ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ- Dangerous Combination With Honey: ಜೇನುತುಪ್ಪದ ಜೊತೆ ಮರೆತೂ ಕೂಡ ಈ ಆಹಾರಗಳನ್ನು ಸೇವಿಸಲೇಬಾರದಂತೆ


ಅಳುವುದರ ಆಶ್ಚರ್ಯಕರ ಪ್ರಯೋಜನಗಳು  (Surprising benefits of Crying) :
* ಅಳುವುದು ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
* ಅಳುವುದು ನಿಮಗೆ ಇತರ ಜನರಿಂದ ತ್ವರಿತ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ.
* ಅಳುವುದು ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ, ಇದು ನಿಮಗೆ ದೈಹಿಕ ಮತ್ತು ಭಾವನಾತ್ಮಕ ನೋವಿನಿಂದ ಪರಿಹಾರ ನೀಡುತ್ತದೆ.
* ಒತ್ತಡದಿಂದಾಗಿ ನೀವು ಅಳುವಾಗ, ನಿಮ್ಮ ಕಣ್ಣೀರಿನಲ್ಲಿ ಅನೇಕ ರೀತಿಯ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮ ದೇಹಕ್ಕೆ ಒಳ್ಳೆಯದು.
* ಕಣ್ಣೀರು ಐಸೋಜೈಮ್ ಎಂಬ ದ್ರವವನ್ನು ಹೊಂದಿರುತ್ತದೆ. ಇದರಿಂದಾಗಿ ಕಣ್ಣೀರು  ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಂದು ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ.
* ಒಬ್ಬ ವ್ಯಕ್ತಿಯು ಕಣ್ಣುಗಳನ್ನು ಮಿಟುಕಿಸಿದಾಗ, ಬಾಸಲ್ ಕಣ್ಣೀರು ಹೊರಹೊಮ್ಮುತ್ತದೆ. ಇದು ಲೋಳೆಯ ಪೊರೆಯನ್ನು ಒಣಗದಂತೆ ರಕ್ಷಿಸುತ್ತದೆ.


(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.