ನವದೆಹಲಿ : Curd Face mask: ಮೊಸರು ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು (benefits of curd) ನೀಡುತ್ತದೆ. ಮೊಸರಿನ ಬಳಕೆಯಿಂದ, ಮುಖದ ಸುಕ್ಕುಗಳು, ಲೈನ್ಸ್ , ಟ್ಯಾನಿಂಗ್ ಸಮಸ್ಯೆಗಳು, ಮೊಡವೆ ಕಲೆಗಳು ಇತ್ಯಾದಿಗಳನ್ನು ಹೋಗಲಾಡಿಸಬಹುದು. ಮೊಸರಿನಲ್ಲಿರುವ ಸತು, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಗಳು ಚರ್ಮವನ್ನು ಆರೋಗ್ಯವಾಗಿಡುತ್ತವೆ.


COMMERCIAL BREAK
SCROLL TO CONTINUE READING

ಚರ್ಮಕ್ಕೆ ಸಂಬಂಧಿಸಿದ (Skin care) ಯಾವುದೇ ಸಮಸ್ಯೆಯಿದ್ದರೂ, ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಬಳಸಿ. ಈ ಫೇಸ್ ಪ್ಯಾಕ್ ತ್ವಚೆಯನ್ನು ತಂಪಾಗಿರಿಸುತ್ತವೆ.


1. ಮೊಸರು ಮತ್ತು ರೋಸ್ ವಾಟರ್ :
-ಮೊಸರಿನಲ್ಲಿ (Curd) ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ತ್ವಚೆಗೆ ಹಚ್ಚಿ. 
-ಅದರ ನಂತರ 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ (warm water) ತೊಳೆಯಿರಿ. 
-ನಿರಂತರವಾಗಿ ಹೀಗೆ ಮಾಡುತ್ತಾ ಬಂದರೆ ತ್ವಚೆಗೆ ಹೊಳಪೂ ನೀಡುತ್ತದೆ. 
-ನಂತರ ನಿಮ್ಮ ಚರ್ಮವನ್ನು ಮೃದುವಾದ ಟವೆಲ್ ನಿಂದ ಒಣಗಿಸಿ.
ಅದರ ನಂತರ ಉತ್ತಮ ಮಾಯಿಶ್ಚರೈಸರ್ ಹಚ್ಚಿ.


ಇದನ್ನೂ ಓದಿ : Papaya Leaf: ಈ ಎಲೆಯ ರಸ ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತೆ


2. ಮೊಸರು ಮತ್ತು ಆಲಿವ್ ಎಣ್ಣೆ :
-ಮೂರು ಚಮಚ ಮೊಸರು ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು (olive oil) ಬೆರೆಸಿ ಪೇಸ್ಟ್ ತಯಾರಿಸಿ.
-ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ.
-15-20 ನಿಮಿಷಗಳ ನಂತರ ಮುಖಾನ್ನು ತೊಳೆಯಿರಿ.
-ಹೀಗೆ ಮಾಡುವುದರಿಂದ ತ್ವಚೆ ವಯಸ್ಸಾದಂತೆ ಕಾಣಿಸುವುದಿಲ್ಲ.  


3. ಮೊಸರು ಮತ್ತು ಕಡಲೆ ಹಿಟ್ಟು : 
-ಒಂದು ಟೀಚಮಚ ಕಡಲೆಹಿಟ್ಟು  ಅರ್ಧ ಚಮಚ ನಿಂಬೆ ರಸ (lemon juice) ಮತ್ತು 2 ಚಮಚ ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ. 
-ಇದನ್ನು ಮುಖಕ್ಕೆ ಹಚ್ಚಿದ ನಂತರ, ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ. 
-ಇದು ಚರ್ಮದ ಮೇಲೆ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Benefits of Cabbage: ನಿಮ್ಮ ಡಯಟ್ನಲ್ಲಿ ಈ ಆಹಾರವನ್ನು ಸೇರಿಸಿ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ


4. ಮೊಟ್ಟೆ ಮತ್ತು ಕಡಲೆ ಹಿಟ್ಟು : 
-ಮೊದಲು 1 ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ.
-ಈಗ 1 ಟೀಸ್ಪೂನ್ ಕಡಲೆ ಹಿಟ್ಟು, ಸಣ್ಣ ಬಾಳೆಹಣ್ಣು (banana) ಮತ್ತು 2 ಚಮಚ ಮೊಸರು ಸೇರಿಸಿ.
-ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
-ಮೊಸರಿನಿಂದ ಮಾಡಿದ ಈ ಫೇಸ್ ಪ್ಯಾಕ್ (face pack) ಅನ್ನು ಪ್ರತಿದಿನ ಹಚ್ಚುವುದರಿಂದ ಮುಖಡ ಸೌಂದರ್ಯ ಹೆಚ್ಚುತ್ತದೆ. 
-ಅಲ್ಲದೆ ಚರ್ಮ ಸಂಬಂಧಿ ಸಮಸ್ಯೆಗಲು ಕೂಡಾ ದೂರವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.