Curry Leaf Benefits: ಕರಿಬೇವಿನ ಎಲೆ ರಸ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ
Curry Leaf Benefits: ನೀವು ಎಂದಾದರೂ ಕರಿಬೇವಿನ ಎಲೆ ರಸವನ್ನು ಸೇವಿಸಿದ್ದೀರಾ
Curry Leaf Benefits- ಅಡುಗೆಯಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಆಹಾರದ ಸ್ವಾದ ಹೆಚ್ಚಾಗುತ್ತದೆ. ಭಾರತೀಯ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಎಲ್ಲಾ ಖಾದ್ಯಗಳಲ್ಲೂ ತಪ್ಪದೇ ಇದನ್ನು ಬಳಸಲಾಗುತ್ತದೆ. ಇದು ವಿಭಿನ್ನ ರುಚಿಯನ್ನು ಹೊಂದಿರುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ತಾಮ್ರ ಮತ್ತು ಜೀವಸತ್ವಗಳ ಗುಣಲಕ್ಷಣಗಳು ಕಂಡು ಬರುತ್ತದೆ. ಇವು ದೇಹಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ತರಕಾರಿಗಳಲ್ಲಿ ಬಳಸಲಾಗುತ್ತದೆ. ಆದರೆ ನೀವು ಎಂದಾದರೂ ಕರಿಬೇವಿನ ಎಲೆಗಳ ರಸವನ್ನು ಸೇವಿಸಿದ್ದೀರಾ? ಕರಿಬೇವಿನ ಎಲೆ ರಸವನ್ನು ಕುಡಿಯುವುದರಿಂದಲೂ ಹಲವು ಪ್ರಯೋಜನ ಲಭ್ಯವಿದೆ.
ಇದನ್ನೂ ಓದಿ- Betel Leaf Benefits For Men: ವಿವಾಹಿತ ಪುರುಷರು ರಾತ್ರಿ ಮಲಗುವ ಮುನ್ನ ವಿಳ್ಳೆದೆಲೆ ಸೇವಿಸುವುದರಿಂದ ಸಿಗುತ್ತೆ ಈ ಲಾಭ
ಕರಿಬೇವಿನ ಎಲೆ ರಸವನ್ನು ತಯಾರಿಸುವುದು ಹೇಗೆ?
ಕರಿಬೇವಿನ ಎಲೆ ರಸವನ್ನು (Curry Leaf Juice) ತಯಾರಿಸಲು, ಮೊದಲು ಒಂದು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಒಲೆಯ ಮೇಲೆ ಇರಿಸಿ. ನಂತರ ಕರಿಬೇವಿನ ಎಲೆಯನ್ನು ಅದಕ್ಕೆ ಹಾಕಿ ಅದನ್ನು ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಅದರಲ್ಲಿ ನಿಂಬೆ, ಜೇನುತುಪ್ಪವನ್ನು ಸೇರಿಸಿ. ನೀವು ಅದನ್ನು ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ನಂತರವೂ ಸೇವಿಸಬಹುದು.
ಕರಿಬೇವಿನ ಎಲೆ ರಸವನ್ನು ಕುಡಿಯುವುದರಿಂದಾಗುವ ಪ್ರಯೋಜನಗಳು:
ಮಧುಮೇಹಿಗಳಿಗೆ ಪ್ರಯೋಜನಕಾರಿ - ಕರಿಬೇವಿನ ಸೊಪ್ಪು ಮಧುಮೇಹಿ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆ- ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕರಿಬೇವಿನ ಎಲೆ ರಸ (Curry Leaf Juice) ಬಹಳ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- Banana peel: ಮುಖದ ಮೇಲಿನ ಕಲೆ, ಮೊಡವೆ ನಿವಾರಣೆಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಈ ರೀತಿ ಬಳಸಿ
ತೂಕವನ್ನು ಕಡಿಮೆ ಮಾಡಲು- ಕರಿಬೇವಿನ ಎಲೆಗಳು ತೂಕವನ್ನು ಕಡಿಮೆ ಮಾಡಲು (Weight Loss) ಸಹ ಬಹಳ ಪ್ರಯೋಜನಕಾರಿ. ಕರಿಬೇವಿನ ಎಲೆಗಳಲ್ಲಿ ಡಿಕ್ಲೋರೊಮೆಥೇನ್, ಈಥೈಲ್ ಅಸಿಟೇಟ್ ಮತ್ತು ಮಹಾನಿಂಬೈನ್ ಮುಂತಾದ ಅಗತ್ಯ ಅಂಶಗಳು ಕಂಡುಬರುತ್ತವೆ. ಕರಿಬೇವಿನ ಎಲೆ ರಸವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು.
ಹೃದಯ- ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಸಿ, ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಗಳಿವೆ. ಕರಿಬೇವಿನ ಎಲೆ ರಸವನ್ನು ಸೇವಿಸುವುದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.