ಬೊಜ್ಜು ಕರಗಿಸಲು ನಿತ್ಯ ಒಂದು ಲೋಟ ಕುಡಿಯಿರಿ ಈ ಎಲೆಯ ಜ್ಯೂಸ್ !
Curry Leaf Juice For Weight Loss:ಈ ಅಪಾಯವನ್ನು ಶಾಶ್ವತವಾಗಿ ದೂರ ಮಾಡಲು ಮನೆಯಲ್ಲಿ ಈ ಎಲೆಯ ಜ್ಯೂಸ್ ಅನ್ನು ತಯಾರಿಸಿ ಸೇವಿಸಬಹುದು.
Curry Leaf Juice For Weight Loss : ತೂಕ ಹೆಚ್ಚಳ ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಅನೇಕ ಜನರು ಎದುರಿಸುತ್ತಿರುವ ಸಮಸ್ಯೆ. ತೂಕ ಹೆಚ್ಚಳವಾದರೆ ಅಧಿಕ ಕೊಲೆಸ್ಟ್ರಾಲ್, ಬಿಪಿ, ಮಧುಮೇಹ, ಹೃದಯಾಘಾತದಂತಹ ಸಮಸ್ಯೆಗಳ ಅಪಾಯ ಕೂಡಾ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಎದುರಾಗಬಹುದಾದ ಅಪಾಯವನ್ನು ತಡೆಯಬಹುದು. ಈ ಅಪಾಯವನ್ನು ಶಾಶ್ವತವಾಗಿ ದೂರ ಮಾಡಲು ಮನೆಯಲ್ಲಿ ಈ ಎಲೆಯ ಜ್ಯೂಸ್ ಅನ್ನು ತಯಾರಿಸಿ ಸೇವಿಸಬಹುದು.
ತೂಕ ನಿಯಂತ್ರಣಕ್ಕೆ ಕರಿಬೇವಿನ ಎಲೆ :
ಕರಿಬೇವಿನ ಎಲೆಗಳು ತುಂಬಾ ಪರಿಮಳಯುಕ್ತವಾಗಿವೆ.ಇದು ಅಡುಗೆಯ ಘಮವನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆ ಯನ್ನು ಬಳಸಿ ನಾನಾ ವಿಧದ ಖಾದ್ಯಗಳನ್ನು ತಯಾರಿಸಬಹುದು. ಈ ಎಲೆ ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಕರಗಿಸುವುದು.
ಇದನ್ನೂ ಓದಿ :ಫಿಶ್ ಪೆಡಿಕ್ಯೂರ್ ಮಾಡುವುದು ಸುರಕ್ಷಿತ ಮತ್ತು ಪ್ರಯೋಜನಕಾರಿಯೇ? ಇದರ ಬಗ್ಗೆ ತಿಳಿಯಿರಿ..
ಕರಿಬೇವಿನ ಸೊಪ್ಪಿನಲ್ಲಿರುವ ಪೋಷಕಾಂಶಗಳು:
ಕರಿಬೇವಿನ ಎಲೆಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಸಿ ಮುಂತಾದ ಹಲವು ಪ್ರಮುಖ ಪೋಷಕಾಂಶಗಳು ಕಂಡು ಬರುತ್ತವೆ. ಇವು ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
ಬೊಜ್ಜು ಕಡಿಮೆ ಮಾಡುವಲ್ಲಿ ಸಹಕಾರಿ :
ಸಾಮಾನ್ಯವಾಗಿ ದೇಹ ತೂಕ ಹೆಚ್ಚಾಗುವಾಗ ಕೊಬ್ಬು ಅಥವಾ ಬೊಜ್ಜು ಸಂಗ್ರಹವಾಗುವುದೇ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ. ಈ ಸಂದರ್ಭದಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸಿದರೆ ಲಿಪಿಡ್‌ಗಳು ಮತ್ತು ಕೊಬ್ಬನ್ನು ಕಡಿಮೆ ಮಾಡಬಹುದು. ಇದರ ಜ್ಯೂಸ್ ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ.
ಇದನ್ನೂ ಓದಿ : ಚಹಾ ಅಥವಾ ಕಾಫಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿಯೇ? 99% ಜನರಿಗೆ ಇದರ ಬಗ್ಗೆ ತಿಳಿದಿಲ್ಲ
ಕರಿಬೇವಿನ ರಸವನ್ನು ತಯಾರಿಸುವುದು ಹೇಗೆ? :
ಕರಿಬೇವಿನ ರಸವನ್ನು ತಯಾರಿಸಲು, ಮೊದಲು ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಸಮಯದ ನಂತರ ಈ ನೀರನ್ನು ಫಿಲ್ಟರ್ ಸಹಾಯದಿಂದ ಫಿಲ್ಟರ್ ಮಾಡಿ ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ. ಇನ್ನೊಂದು ವಿಧಾನದ ಪ್ರಕಾರ ಇದರ ಎಲೆಗಳನ್ನು ಅರೆದು ನಿಂಬೆ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಕರಿಬೇವಿನ ಎಲೆಯ ರಸವನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕು ಎನ್ನುವುದು ನೆನಪಿರಲಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ