ಮೇಷ ರಾಶಿ: ಕೈ-ಕಾಲು ನೋವಿನ ತೊಂದರೆ ಅನುಭವಿಸಬೇಕಾಗಬಹುದು. ಮನಸಾ ಕುಲದೇವರನ್ನು ಪೂಜಿಸಿ. ಹಿರಿಯರು ಹೇಳಿದ ಬುದ್ದಿಮಾತು ಕೇಳಬೇಕು. ಜೀವನದಲ್ಲಿ ಭ್ರಮೆ ಬೇಡ. ನಿಮ್ಮ ಜೀವನದಲ್ಲಿರುವ ನಕಾರಾತ್ಮಕತೆಗಳನ್ನು ತೆಗೆದುಹಾಕಿ. ಜೀವನ ಯುದ್ಧದಲ್ಲಿ ಜಯ ಸಾಧಿಸುವಿರಿ. ಕೆಲಸದ ಒತ್ತಡವು ನಿಮ್ಮ ಮೇಲೆ ಹೆಚ್ಚಾಗಬಹುದು. ವಿಪರೀತ ಉತ್ಸಾಹ ಅಥವಾ ಅತಿಯಾದ ಆತ್ಮವಿಶ್ವಾಸ ನಿಮಗೇ ಹಾನಿಕರವಾದುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : PitraDosha : ಪಿತೃಗಳ ರಕ್ಷೆ ಯಾಕೆ ಬೇಕು..? ಪಿತೃದೋಷ ನಿವಾರಣೆ ಹೇಗೆ..?


​ವೃಷಭ ರಾಶಿ: ಹಿಡಿದ ಕೆಲಸ ಕಾರ್ಯಗಳು ವಿಫಲಗೊಂಡು ಮಾನಸಿಕ ಅಶಾಂತಿಗೆ ಕಾರಣವಾಗಬಹುದು. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ಕಂಡು ಬರಲಿದೆ. ಹಲವಾರು ಸಮಸ್ಯೆಗಳಿಂದ ಗೊಂದಲಕ್ಕೆ ಒಳಗಾಗುವಿರಿ. ಈ ದಿನ ಆತ್ಮವಾಲೋಕನ ಮಾಡಿಕೊಳ್ಳಲು ಒಳ್ಳೆಯ ದಿನ. ನಿಮ್ಮ ಮೇಲಿರು ಜವಾಬ್ದಾರಿಗಳನ್ನು ಪರಿಗಣಿಸಿ, ಒತ್ತಡಗಳನ್ನು ಬದಿಗಿರಿಸಿ. ವೃತ್ತಿಪರ ಬೆಳವಣಿಗೆಯ ಹಾದಿಯಲ್ಲಿ ವೈಯಕ್ತಿಕ ಜೀವನಕ್ಕಾಗಿ ಮೀಸಲಿಟ್ಟ ಸಮಯವನ್ನು ವ್ಯರ್ಥ ಮಾಡಬೇಡಿ. 


​ಮಿಥುನ ರಾಶಿ: ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ತೊಂದರೆಗಳಿರುತ್ತದೆ. ದೇವತಾರ್ಚನೆಯಿಂದ ಸುಖ ಸಂತಸದ ಸಂತೃಪ್ತ ಜೀವನ ಸಿಗಲಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚಗಳಿದ್ದರೂ ಧನಾಗಮನದಿಂದ ಸುಖ ಸಂತೋಷವಿದೆ. ಆಶಾವಾದದಿಂದ ಮುಂದುವರಿಯಬೇಕಾದ ದಿನವಿದು. ಈ ದಿನ ನಿಮಗೆ ವಿಶೇಷ ಪ್ರಯೋಜನವನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಲು ಅವಕಾಶ ಸಿಗಬಹುದು. ಕುಟುಂಬದ ಜವಾಬ್ದಾರಿಗಳನ್ನು ನಿರ್ಲಕ್ಷ್ಯಿಸಬೇಡಿ. 


ಇದನ್ನೂ ಓದಿ : Mahashivratri 2021 : ಮಹಾ ಶಿವರಾತ್ರಿ ಉಪವಾಸದ ಮಹತ್ವ ಏನು


​ಕಟಕ ರಾಶಿ: ಕಾರ್ಯ ಸಾಧನೆಯಲ್ಲಿ ಯಶಸ್ಸು ತೋರಿ ಬಂದು ಹಂತ ಹಂತವಾಗಿ ಮನೋಕಾಮನೆ ಪೂರ್ಣವಾಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಹೆಚ್ಚಿನ ಪ್ರಯತ್ನ ಅಗತ್ಯ. ದೃಢ ನಿರ್ಧಾರಗಳು ಉಪಯುಕ್ತವಾಗಲಿವೆ. ತಮ್ಮ ಭಾವನೆಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಈ ದಿನ ಸಮಯ ಅನುಕೂಲಕರವಾಗಿರುತ್ತದೆ. ಕೆಲವರಿಗೆ ಈ ದಿನ ಒಳ್ಳೆಯ ಸುದ್ದಿಗಳು ಬರಬಹುದು. ನಿಗದಿತ ಸಮಯದಲ್ಲಿ ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಲಿ ಪ್ರಯತ್ನಿಸಿ, ಅಜಾಗರೂಕತೆಯಿಂದ ಸಮಸ್ಯೆಗಳು ಉಂಟಾಗಬಹುದು. 


ಸಿಂಹ ರಾಶಿ: ಹಿಡಿದ ಕೆಲಸಗಳು ವಿಫಲಗೊಂಡು ಮಾನಸಿಕ ಕಿರಿಕಿರಿ ತಂದಾವು. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ಆರ್ಥಿಕವಾಗಿ ಕೊಟ್ಟ ಹಣ ಮರಳಿಬಾರದು.ನಿರುದ್ಯೋಗಿಗಳಿಗೆ ಕಾಯುವ ಸ್ಥಿತಿ ಇದೆ. ನಿಮ್ಮೊಳಗಿರುವ ಆಂತರಿಕ ಕಲಾವಿದನನ್ನು ಜಾಗೃತಗೊಳಿಸುವ ಅವಕಾಶವನ್ನು ನೀವು ಪಡೆಯಬಹುದು. ಕೆಲವು ನಷ್ಟದ ಸೂಚನೆಗಳಿವೆ, ವಸ್ತುಗಳ ಖರೀದಿಯಲ್ಲಿ ಮಾತುಕತೆ ನಡೆಸಿ. ವ್ಯವಹಾರದ ವಿಷಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಿ. ಕಾಗದ ಪತ್ರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. 


​ಕನ್ಯಾ ರಾಶಿ: ಸಮಯದೊಂದಿಗೆ ನಡೆಯುವುದು ನಿಮಗೆ ಉತ್ತಮ. ಆದರೆ ಇದರೊಂದಿಗೆ ನಿಮ್ಮ ಆಪ್ತರೊಂದಿಗೆ ಸಮಯವನ್ನು ಕಳೆಯುವುದು ಅಗತ್ಯ. ಇದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಈ ದಿನ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲವು ಜನರೊಂದಿಗೆ ಕಠಿಣವಾಗಿ ವ್ಯವಹರಿಸಬೇಕಾಗಬಹುದು. ನಿಮ್ಮ ಕೆಲಸದ ಮೇಲೆ ಗಮನ ಹರಿಸಿ, ಇಂದು ನಡೆಯುವ ಘಟನೆಗಳು ನಾಳೆಯ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು.


​ತುಲಾ ರಾಶಿ: ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಯಾವುದರಲ್ಲೂ ಹೂಡಿಕೆಗಳನ್ನು ಮಾಡದಿರುವುದು ಉತ್ತಮ. ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಯೋಚಿಸಬಹುದು. ನಿಮ್ಮ ಸಂಗಾತಿ ಜತೆ ವಾದಗಳು ಉಂಟಾಗಬಹುದು. ನಿಮ್ಮ ಕೆಲವು ಸ್ವಂತ ಕೆಲಸಗಳಿಗೆ ಈ ದಿನ ಆದ್ಯತೆ ನೀಡಬೇಕಾಗಬಹುದು. ವ್ಯವಹಾರ ವ್ಯಾಪಾರಗಳಿಂದಾಗಿ ಬದಿಗೊತ್ತಿದ್ದ ವೈಯಕ್ತಿಕ ಜೀವನದ ಕಾರ್ಯಗಳನ್ನು ಪೂರ್ಣಗೊಳಿಸುವ ಸಮಯ ಬಂದಿದೆ. 


​ವೃಶ್ಚಿಕ ರಾಶಿ; ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ ಎದುರಾಗಲಿದೆ. ಮಾತಿನಿಂದ ತೊಂದರೆಗೆ ಸಿಲುಕುವಿರಿ. ನಿಮ್ಮ ಕಾರ್ಯದ ವಿವರವನ್ನು ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಿ. ಅವರು ಸಲಹೆ ಸಹಕಾರ ನೀಡುವರು. ಬಾಕಿ ಇರುವ ಕೆಲಸಗಳನ್ನು ನಿಮ್ಮ ಕೆಲಸದ ನಿಧಾನಗತಿಯಿಂದ ಪೂರ್ಣಗೊಳಿಸಲು ಸಾಧ್ಯವಾಗದು. ಆದರೆ ವೃತ್ತಿಪರ ಜೀವನ ಅಥವಾ ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ನಿಮ್ಮ ಅದೃಷ್ಟಗಳು ಬದಲಾಗಬಹುದು. ನಿಮ್ಮನ್ನು ವಿರೋಧಿಸುವವರು ನಿಮ್ಮ ಪರವಾಗಿರಬಹುದು ಅಥವಾ ನಿಮ್ಮ ಮುಂದೆ ಸೋಲಬಹುದು. ಕೆಲವೊಂದು ಅನಿರೀಕ್ಷಿತ ಬದಲಾವಣೆಗಳು ಜೀವನದಲ್ಲಿ ಉಂಟಾಗಬಹುದು.


ಇದನ್ನೂ ಓದಿ : ಇಲ್ಲಿನ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ..!


​ಧನುಸ್ಸು ರಾಶಿ: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ ಕಾಣಿಸಬಹುದು. ಆಹಾರ ಸೇವನೆಯಲ್ಲಿ ತುಸು ಜಾಗರೂಕರಾಗಿರಿ. ಅನವಶ್ಯಕವಾಗಿ ಕೆಲವರನ್ನು ಹೆಗಲಿಗೆ ಏರಿಸಿಕೊಳ್ಳುವ ತಪ್ಪು ಮಾಡಬೇಡಿ. ಹಿರಿಯರ ಸಲಹೆ ಸ್ವೀಕರಿಸಿ. ಉದ್ವಿಗ್ನ ಪರಿಸ್ಥಿತಿಯಲ್ಲಿದ್ದರೂ ಕೆಲವೊಂದು ಉತ್ತಮ ಫಲಿತಾಂಶಗಳ ನ್ನು ತರುವಲ್ಲಿ ನೀವು ಯಶಸ್ವಿಯಾಗಬಹುದು. ಒತ್ತಡ ಮುಕ್ತವಾಗಿರಲು ನಿಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಕೆಲಸ ಮಾಡಿ. ಅತಿಯಾದ ಒತ್ತಡವು ರೋಗಿಯನ್ನಾಗಿ ಮಾಡಬಹುದು.


ಮಕರ ರಾಶಿ: ಯಾರೂ ನಿಮಗೆ ಈ ಕ್ಷಣದಲ್ಲಿ ನೆರವಾಗಲಿಲ್ಲ ಎಂಬ ಬೇಸರ ಬೇಡ. ಯಾರನ್ನೂ ದೂರ ಮಾಡಿಕೊಳ್ಳದಿರಿ. ಅನಿರೀಕ್ಷಿತ ಘಟನೆಗಳಿಂದ ವ್ಯಥೆ ಪಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಸೆ ಈಡೇರುವ ಸಾಧ್ಯತೆ ಇದೆ. ನಿಮ್ಮ ದೃಷ್ಟಿಕೋನದಲ್ಲಿ ಸಕಾರಾತ್ಮಕ ಬದಲಾವಣೆಗಲು ಉಂಟಾಗಲಿವೆ. ಇಲ್ಲಿಯವರೆಗೆ ತಪ್ಪಿಸಲು ಪ್ರಯತ್ನಿಸುತ್ತಿದ್ದ ಕೆಲವೊಂದು ವಿಷಯಗಳನ್ನು ಎದುರಿಸುವ ಯೋಚನೆ ನಿಮ್ಮೊಳಗೆ ಉಂಟಾಗುವುದು. ಇತರರ ಮೇಲೆ ಅತ್ಯಂತ ಬಲವಾದ ಪ್ರಭಾವ ಬೀರುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. 


​ಕುಂಭ ರಾಶಿ: ನೆರೆಹೊರೆಯವರ ಸೌಹಾರ್ದತೆಯಿಂದಾಗಿ ಬಾಕಿ ಇರುವ ಕೆಲಸ ಸಫಲವಾಗಲಿದೆ. ಮಿತ್ರರ ನೆರವು ಲಭ್ಯವಾಗಲಿದೆ. ಅಂತರಂಗದ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಇದರಿಂದ ಉತ್ಕರ್ಷಕ್ಕೆ ಹೊಸ ದಾರಿಯಾಗಲಿದೆ. ಕೆಲವೊಂದು ಸಂದರ್ಭಗಳಲ್ಲಿ ಕೆಲಸದಿಂದ ತಪ್ಪಿಸಿಕೊಳ್ಳದಿರಿ, ನಿಮ್ಮ ಶ್ರಮದಿಂದ ಮಾತ್ರ ಯಶಸ್ಸನ್ನು ಪಡೆಯಬಹುದು. ನಿಮ್ಮ ಕೆಲಸದ ಮೇಲೆ ಗಮನವಿರಿಸಿದರೆ ಮಾತ್ರ ಕೆಲವು ವಿಶೇಷ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. 


ಇದನ್ನೂ ಓದಿ : Vastu Tips: ಮಲಗುವಾಗ ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗಿಡಿ, ಅದೃಷ್ಟ ಬದಲಾಗುತ್ತೆ


​ಮೀನ ರಾಶಿ: ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ಪ್ರಯಾಣ ಅನಿವಾರ್ಯವಾದರೆ ಎಚ್ಚರಿಕೆ ಅಗತ್ಯ. ಕುಲದೇವರನ್ನು ಸ್ಮರಿಸಿ. ಕೆಲಸದ ಸ್ಥಳದಲ್ಲಿ ಸ್ವಲ್ಪ ಬದಲಾವಣೆ ಇದೆ. ಹೊಸ ಕಾರ್ಯ ಯೋಚನೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೀರಿ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಸಮರ್ಥರಾಗಿರುವಿರಿ. ಆದರೂ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸದ ಒತ್ತಡವನ್ನು ತೆಗೆದುಕೊಳ್ಳುವುದು ಉತ್ತಮ. ಹೆಚ್ಚಿನ ಒತ್ತಡವು ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. 


ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.