ನವದೆಹಲಿ: ಇಂದು ಪ್ರತಿಯೊಬ್ಬರಲ್ಲಿಯೂ ಡ್ಯಾಂಡ್ರಫ್(Dandruff) ಅಂದರೆ ತಲೆಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿದೆ. ಮಹಿಳೆಯರ ಹೊರತಾಗಿ ಪುರುಷರ ತಲೆಯಲ್ಲೂ ಡ್ಯಾಂಡ್ರಫ್ ಸಮಸ್ಯೆ ಇರುತ್ತದೆ. ತಲೆಹೊಟ್ಟು ಸಮಸ್ಯೆಯಿಂದ ಪುರುಷರು ಕೂಡ ಕಿರಿಕಿರಿ ಅನುಭವಿಸುತ್ತಾರೆ. ಅನೇಕ ಸಲಹೆಗಳನ್ನು ಪಾಲಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಅನೇಕರು ವಿವಿಧ ರೀತಿಯ ಸರ್ಕಸ್ ಮಾಡಿದರೂ ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಸಿಕ್ಕಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ತಲೆಹೊಟ್ಟು ಹೋಗಲಾಡಿಸಲು ನಾವು ನಿಮಗಾಗಿ ಕೆಲವು ಮನೆಮದ್ದು(Dandruff Treatment)ಗಳನ್ನು ಪರಿಚಯಿಸುತ್ತಿದ್ದೇವೆ. ಈ ಸಲಹೆ  ಅನುಸರಿಸುವ ಮೂಲಕ ನೀವು ಕೂಡ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು.


ಅಡಿಗೆ ಸೋಡಾದಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ


ಬೇಕಿಂಗ್ ಸೋಡಾ ಕೂಡ ತಲೆಹೊಟ್ಟು ಕಡಿಮೆ ಮಾಡಲು ಉಪಯುಕ್ತವಾಗಿದೆ. ಕೂದಲಿಗೆ ಶಾಂಪೂ(Dandruff Shampoo) ಮಾಡುವಾಗ ಅದಕ್ಕೆ ಒಂದು ಚಮಚ ಬೇಕಿಂಗ್ ಸೋಡಾ ಸೇರಿಸಿ ತಲೆಗೆ ಚೆನ್ನಾಗಿ ಮಸಾಜ್ ಮಾಡಿ ನಂತರ ತಲೆ ತೊಳೆಯಿರಿ. ಇದರಿಂದ ತಲೆಯ ಬುಡಕ್ಕೆ ಅಂಟಿಕೊಂಡಿರುವ ಡ್ಯಾಂಡ್ರಫ್ ಹೊರಬರುತ್ತದೆ.


ಇದನ್ನೂ ಓದಿ: Turmeric and Curd Benefits : ಮೊಸರು - ಅರಿಶಿನದಿಂದ ಆರೋಗ್ಯಕ್ಕಿದೆ ಈ 5 ಪ್ರಯೋಜನಗಳು!


ತಲೆಹೊಟ್ಟು ಸಮಸ್ಯೆಗೆ ಅಲೋವೆರಾ ರಾಮಬಾಣ


ಅಲೋವೆರಾ ಜೆಲ್ ನಿಂದ ಅನೇಕ ಪ್ರಯೋಜನಗಳಿವೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಬಳಸಲಾಗುತ್ತದೆ. ಇದು ತಲೆಹೊಟ್ಟಿಗೆ ಉತ್ತಮ ರಾಮಬಾಣವಾಗಿದೆ. ನಿಮ್ಮ ಕೂದಲನ್ನು ಸ್ವಲ್ಪ ಬಾಚಿಕೊಂಡು ನಂತರ ಅಲೋವೆರಾ ಜೆಲ್ ಅನ್ನು ತಲೆಯ ಮೇಲೆ ಸಂಪೂರ್ಣವಾಗಿ ಹಚ್ಚಿರಿ. 20-25 ನಿಮಿಷಗಳ ಬಳಿಕ ಕೂದಲುಗಳನ್ನು ಚೆನ್ನಾಗಿ ತೊಳೆಯಿರಿ.


ಸೈಡರ್ ವಿನೆಗರ್ ಕೂಡ ಉಪಯುಕ್ತ  


ಆಪಲ್ ಸೈಡರ್ ವಿನೆಗರ್(Apple Cider Vinegar) ಕೂಡ ತಲೆಹೊಟ್ಟು ಹೋಗಲಾಡಿಸಲು ಉಪಯುಕ್ತವಾಗಿದೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ಮತ್ತು ಸಮಾನ ಪ್ರಮಾಣದ ನಿಂಬೆ ರಸವನ್ನು ತೆಗೆದುಕೊಂಡು ಎರಡು ಪಟ್ಟು ಹೆಚ್ಚು ನೀರನ್ನು ಮಿಶ್ರಣ ಮಾಡಿ. ಸಿದ್ಧಪಡಿಸಿದ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ, ಅದನ್ನು ನಿಮ್ಮ ಕೂದಲಿನ ಮೇಲೆ ಸಿಂಪಡಿಸಿ ಮತ್ತು 20 ನಿಮಿಷಗಳ ನಂತರ ನಿಮ್ಮ ತಲೆಯನ್ನು ತೊಳೆಯಿರಿ. ಇದರಿಂದ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ.


ತೆಂಗಿನ ಎಣ್ಣೆ ಪರಿಹಾರ


ತೆಂಗಿನ ಎಣ್ಣೆ ತಲೆಹೊಟ್ಟು ಸಮಸ್ಯೆ(Dandruff)ಗೆ ತುಂಬಾ ಉಪಯುಕ್ತವಾಗಿದೆ. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕೊಂಚ ಬಿಸಿ ಮಾಡಿ. ಈಗ ಎಣ್ಣೆಯಿಂದ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿ ಮತ್ತು ಸುಮಾರು ಅರ್ಧ ಗಂಟೆಯ ನಂತರ ತಲೆ ತೊಳೆಯಿರಿ. ಇದು ಖಂಡಿತವಾಗಿಯೂ ನಿಮ್ಮ ತಲೆಹೊಟ್ಟು ಕಡಿಮೆ ಮಾಡಬಹುದು.


ಇದನ್ನೂ ಓದಿ: Curd Cumin Combination: ಹುರಿದ ಜೀರಿಗೆಯೊಂದಿಗೆ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ


ಮೊಸರು ಕೂಡ ರಾಮಬಾಣ


ಮೊಸರು ತಲೆಹೊಟ್ಟಿನ(Curd For Dandruff) ಸಮಸ್ಯೆಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಒಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ತಲೆಯನ್ನು ಚೆನ್ನಾಗಿ ತೊಳೆಯಿರಿ. ಮೊಸರನ್ನು ಕನಿಷ್ಠ ಅರ್ಧ ಗಂಟೆ ಕೂದಲಿಗೆ ಹಚ್ಚುವುದರಿಂದ ಎಲ್ಲಾ ರೀತಿಯ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.