Eye, Skin, Hair Care Tips For Holi 2022 - ಹೆಚ್ಚಿನವರಿಗೆ ಹೋಳಿ ಹಬ್ಬದ ಬಣ್ಣಗಳು ಮತ್ತು ಮೋಜುಗಳು ಇಷ್ಟವಾಗುತ್ತವೆ, ಆದರೆ ಕೆಲವೊಮ್ಮೆ ಬಣ್ಣಗಳಿಂದಾಗಿ ಚರ್ಮ ಮತ್ತು ಕೂದಲಿಗೆ ಸಾಕಷ್ಟು ಹಾನಿಯಾಗುತ್ತದೆ. ಈ ಬಾರಿ ಹೋಳಿ ಹಬ್ಬವನ್ನು ಆನಂದಿಸಲು ಈ ಸಲಹೆಗಳನ್ನು ಅನುಸರಿಸಿ ಇದರಿಂದ ನಿಮ್ಮ ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣಗಳಿಂದ ಹಾನಿ ಉಂಟಾಗುವುದಿಲ್ಲ.
1. ಎಣ್ಣೆ ಮತ್ತು ಕೆನೆ ಅನ್ವಯಿಸುವ ಮೂಲಕ ಬಣ್ಣದೋಕುಳಿ ಆಡಿ (Skin Care Tips For Holi)
ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರಾಸಾಯನಿಕ ಬಣ್ಣಗಳ ಜೊತೆಗೆ ನೈಸರ್ಗಿಕ ಬಣ್ಣಗಳು ಮತ್ತು ಗುಲಾಲ್ ದೊರೆಯುತ್ತವೆ. ಆದರೆ, ಕೆಲವೊಮ್ಮೆ ತುಂಬಾ ಸೂಕ್ಷ್ಮ ಚರ್ಮವಿರುವವರಿಗೆ, ಬಣ್ಣಗಳಿಂದಾಗಿ ಸುಡುವಿಕೆ, ನೋವು ಮತ್ತು ದದ್ದುಗಳಂತಹ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹೋಳಿ ಆಡಲು ಹೊರಡುವ ಮುನ್ನ, ಸಾಸಿವೆ ಎಣ್ಣೆ ಅಥವಾ ಯಾವುದೇ ಬಾಡಿ ಲೋಷನ್ ಅನ್ನು ಸಂಪೂರ್ಣ ಮುಖ ಮತ್ತು ಕೈ ಮತ್ತು ಪಾದಗಳಿಗೆ ಅನ್ವಯಿಸಬೇಕು. ಇದರಿಂದಾಗಿ ಬಣ್ಣವು ನೇರವಾಗಿ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಬಣ್ಣಗಳನ್ನು ತೆಗೆದ ನಂತರವೂ ಕೂಡ ಸ್ವಲ್ಪ ಹಾಲಿನಲ್ಲಿ ಅರಿಶಿನ ಮತ್ತು ಬೇಳೆ ಹಿಟ್ಟನ್ನು ಬೆರೆಸಿ ಉಬ್ಟಾನ್ ನಂತಹ ಪೇಸ್ಟ್ ತಯಾರಿಸಬೇಕು ಮತ್ತು ಅದರಿಂದ ಮುಖ ಮತ್ತು ಕೈ ಕಾಲುಗಳನ್ನು ಸ್ವಚ್ಛಗೊಳಿಸಬೇಕು.
2. ನಿಮ್ಮ ಕಣ್ಣುಗಳನ್ನು ಈ ರೀತಿ ರಕ್ಷಿಸಿ (Eye Care During Holi)
ಹೋಳಿ ದಿನದಂದು ಕಣ್ಣುಗಳಲ್ಲಿ ನೀರು ಅಥವಾ ಗುಲಾಲ್ ಬೀಳದಂತೆ ಸನ್ಗ್ಲಾಸ್ ಧರಿಸಿ. ನೀವು ಸನ್ ಗ್ಲಾಸ್ ಧರಿಸಲು ಬಯಸದಿದ್ದರೆ, ಹೋಳಿ ಆಡಿದ ನಂತರ, ತಣ್ಣನೆಯ ರೋಸ್ ವಾಟರ್ ನಲ್ಲಿ ಹತ್ತಿಯನ್ನು ನೆನೆಸಿ, ಆ ಹತ್ತಿಯ ಶೀಟ್ ಗಳನ್ನು ಕಣ್ಣುಗಳ ಮೇಲೆ ಇರಿಸಿ. ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಮಾರುಕಟ್ಟೆಯಲ್ಲಿ ಕನ್ನಡಕಗಳು ಸಿಗುತ್ತವೆ
3. ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ ಹೋಳಿಯನ್ನು ಆಡಿ (Hair Care On Holi)
ಹೋಳಿ ಬಣ್ಣಗಳು ಮತ್ತು ಗುಲಾಲ್ ಕೂದಲಿಗೆ ಹಾನಿಕಾರಕ. ಕೂದಲು ರಕ್ಷಣೆಗೆ ಎಣ್ಣೆ ಹಚ್ಚಿ ಹೋಳಿ ಆಡಲು ಹೋಗಿ. ಸಾಧ್ಯವಾದಷ್ಟು, ಕೂದಲನ್ನು ಜಡೆ ಕಟ್ಟಿ ಅಥವಾ ನೀವು ರೇನ್ ಡಾನ್ಸ್ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದರೆ, ತಲೆಗೆ ಕ್ಯಾಪ್ ಧರಿಸಿ.
ಇದನ್ನೂ ಓದಿ-Joint Pain : ಕೀಲು ನೋವು ಸಮಸ್ಯೆ ನಿವಾರಣೆಗೆ ತಪ್ಪದೆ ಸೇವಿಸಿ ಈ ಹಣ್ಣುಗಳನ್ನು!
4. ಹೋಳಿ ಹಬ್ಬದ ನಂತರ, ಕೆಲವು ದಿನಗಳವರೆಗೆ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಅನ್ನು ಅನ್ವಯಿಸಿ
ಹೋಳಿ ಹಬ್ಬದ ನಂತರ, ಚರ್ಮಕ್ಕೆ ಯಾವುದೇ ರೀತಿಯ ಹಾನಿಯಾಗಬಾರದು ಎಂದರೆ, ಹಬ್ಬದ ಬಳಿಕ ಒಂದು ವಾರದವರೆಗೆ ಚರ್ಮದ ಬಗ್ಗೆ ವಿಶೇಷ ಕಾಳಜಿವಹಿಸುವುದು ಅವಶ್ಯಕ. ಕೆಲವು ದಿನಗಳವರೆಗೆ ದಿನಕ್ಕೆ ಒಮ್ಮೆಯಾದರು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಅನ್ನು ಬಳಸಿ. ನೀವು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ನಲ್ಲಿ ಅರಿಶಿನ ಮತ್ತು ಹಾಲನ್ನು ಬೆರೆಸಬಹುದು. ಬೇಳೆ ಹಿಟ್ಟು, ಅರಿಶಿನ ಮತ್ತು ಹಾಲಿನಲ್ಲಿ ರೋಸ್ ವಾಟರ್ ಬೆರೆಸಿ ಉಬ್ಟಾನ್ ತಯಾರಿಸಬಹುದು. ಇದು ಒಳಗಿನಿಂದ ಚರ್ಮಕ್ಕೆ ಪರಿಹಾರವನ್ನು ನೀಡುತ್ತದೆ. ಕೇಸರಿ ಮತ್ತು ಹಾಲಿನ ಪ್ಯಾಕ್ ಅನ್ನು ಸಹ ನೀವು ಅನ್ವಯಿಸಬಹುದು.
ಇದನ್ನೂ ಓದಿ-Health Tips: ಪುರುಷರ ಈ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ
5. ಮಕ್ಕಳ ಚರ್ಮದ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ
ಮಕ್ಕಳ ತ್ವಚೆಯ ಬಗ್ಗೆ ವಿಶೇಷ ಗಮನ ಹರಿಸುವುದು ತುಂಬಾ ಮುಖ್ಯ ಏಕೆಂದರೆ ಅವರ ಚರ್ಮವು ತುಂಬಾ ಮೃದುವಾಗಿರುತ್ತದೆ. ಹೋಳಿ ಆಡಲು ಮಕ್ಕಳನ್ನು ಕಳುಹಿಸುವ ಮೊದಲು, ಸಾಸಿವೆ ಎಣ್ಣೆಯನ್ನು ಅವರ ಮುಖ ಮತ್ತು ದೇಹಕ್ಕೆ ಹಚ್ಚಬೇಕು ಮತ್ತು ನಂತರ ಸ್ವಲ್ಪ ಬೇಬಿ ಕ್ರೀಮ್ ಅನ್ನು ಅನ್ವಯಿಸಬೇಕು. ಅಲ್ಲದೆ, ಮಕ್ಕಳಿಗೆ ಪೂರ್ಣ ಬಟ್ಟೆಯಲ್ಲಿ ಹೋಳಿ ಆಡಲು ಅವಕಾಶ ನೀಡಿ. ಫುಲ್ ಸ್ಲೀವ್ ಶರ್ಟ್, ಫುಲ್ ಪೈಜಾಮ ಇತ್ಯಾದಿಗಳು ಮಕ್ಕಳನ್ನು ಸಂಭಾವ್ಯ ಬಣ್ಣದ ಹಾನಿಯಿಂದ ರಕ್ಷಿಸುತ್ತವೆ.
ಇದನ್ನೂ ಓದಿ-ಮಧುಮೇಹದಿಂದ ಹಿಡಿದು ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಕೇವಲ ಒಂದು ಎಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.