Hair loss: ಇದೇ ಕಾರಣಕ್ಕೆ ಪುರುಷರ ಕೂದಲು ಉದುರುತ್ತವೆ..!

ಪುರುಷರ ಕೂದಲು ಉದುರುವಿಕೆಗೆ ಅನೇಕ ಕಾರಣಗಳಿವೆ. ಬದಲಾದ ಜೀವನಶೈಲಿಯ ಜೊತೆಗೆ ಆಹಾರ ಪದ್ಧತಿಯೂ ಇದಕ್ಕೆ ಪ್ರಮುಖ ಕಾರಣವೆಂದು ಅನೇಕ ವರದಿಗಳಲ್ಲಿ ತಿಳಿಸಲಾಗಿದೆ.

Written by - Puttaraj K Alur | Last Updated : Mar 14, 2022, 07:27 PM IST
  • ಪುರುಷರಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣವೇನು ಗೊತ್ತಾ..?
  • ಇಂದು ಮಕ್ಕಳು ಸೇರಿ ಪ್ರತಿಯೊಬ್ಬರೂ ಕೂದಲು ಉದುರುವಿಕೆ ಸಮಸ್ಯೆಗೆ ಒಳಗಾಗುತ್ತಾರೆ
  • ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಕೂದಲು ಉದುರುವಿಕೆಗೆ ಕಾರಣ
Hair loss: ಇದೇ ಕಾರಣಕ್ಕೆ ಪುರುಷರ ಕೂದಲು ಉದುರುತ್ತವೆ..! title=
ಕೂದಲು ಉದುರುವಿಕೆ ಸಮಸ್ಯೆಗೆ ಕಾರಣವೇನು..?

ನವದೆಹಲಿ: ಬದಲಾದ ಜೀವನಶೈಲಿಯಿಂದಾಗಿ ಇಂದು ಪುರುಷರು ಮತ್ತು ಮಹಿಳೆಯರಲ್ಲಿ ಕೂದಲು ಉದುರುವಿಕೆ ಸಮಸ್ಯೆ(Hair Falls Problem)ಯು ಕಂಡುಬರುತ್ತದೆ. ಸಣ್ಣಮಕ್ಕಳಲ್ಲಿಯೂ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜೀವನಶೈಲಿ ಜೊತೆಗೆ ನಮ್ಮ ಆಹಾರ ಪದ್ಧತಿಯೂ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ.   

ವರದಿಗಳ ಪ್ರಕಾರ ಕೂದಲು ಉದುರುವಿಕೆ ಸಮಸ್ಯೆಗೆ ಅನೇಕ ಕಾರಣಗಳಿವೆ. ಪುರುಷರು ಹೆಚ್ಚು ಕೂದಲು ಉದುರುವಿಕೆಗೆ(Mens Hair Falls) ಒಳಗಾಗುತ್ತಾರೆ. ಇದಕ್ಕೆ ಮುಖ್ಯವಾಗಿ ಜೀವನಶೈಲಿ(Lifestyle), ಆಹಾರ ಮತ್ತು ಒತ್ತಡಮಯ ಜೀವನ ಪರಿಸ್ಥಿತಿ ಕಾರಣವೆಂದು ಹೇಳಲಾಗಿದೆ. ಪುರುಷರ ಕೂದಲು ಏಕೆ ಉದುರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಇದನ್ನೂ ಓದಿ: ಸ್ಟೀಮ್ ತೆಗೆದುಕೊಳ್ಳುವುದು ಶೀತಕ್ಕೆ ಮಾತ್ರವಲ್ಲ ಅನೇಕ ರೀತಿಯಲ್ಲಿ ಪ್ರಯೋಜನಕಾರಿ

ಪುರುಷರ ಕೂದಲು ಏಕೆ ಉದುರುತ್ತವೆ..?

ವರದಿಗಳ ಪ್ರಕಾರ ಕೂದಲು ಉದುರುವಿಕೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಈಸ್ಟ್ರೊಜೆನಿಕ್ ಅಲೋಪೆಸಿಯಾ (Male Pattern Baldness), ಇದು ಪುರುಷರಲ್ಲಿ ಕಂಡುಬರುವ DTH ಹಾರ್ಮೋನ್ (Dihydrotestosterone) ಅಸಮತೋಲನದಿಂದ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪುರುಷರ ತಲೆಯ ಒಂದು ಭಾಗದಿಂದ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ. ಶೇ.30ರಷ್ಟು ಪುರುಷರಲ್ಲಿ ಈ ಸಮಸ್ಯೆಯು 30ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ.  

ಹಾರ್ಮೋನುಗಳ ಬದಲಾವಣೆಯೂ ಕಾರಣ

ಇದರ ಹೊರತಾಗಿ ತಲೆ ಅಥವಾ ದೇಹದ ಮೇಲೆ ಕೂದಲು ಬೆಳವಣಿಗೆ ಮತ್ತು ನಷ್ಟದ ಹಿಂದೆ ಹಾರ್ಮೋನ್ ಕಾರಣವಿದೆ ಎಂದು ಹೇಳಲಾಗಿದೆ. ಪುರುಷರ ಕೂದಲು ಉದುರುವಿಕೆಗೆ(Hair Loss) ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಮುಖ್ಯ ಕಾರಣವೆಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮಧುಮೇಹದಿಂದ ಹಿಡಿದು ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಕೇವಲ ಒಂದು ಎಲೆ

ಜೆನೆಟಿಕ್ಸ್ ಕೂಡ ಕಾರಣ

ಇದಲ್ಲದೆ ಆನುವಂಶಿಕತೆಯೂ ಇದಕ್ಕೆ ದೊಡ್ಡ ಕಾರಣವಾಗಿದೆ. ನಿಮಗೂ ಯಾವುದೇ ರೀತಿಯ ನೆತ್ತಿಯ ಕೂದಲಿನ ಸಮಸ್ಯೆ ಇದ್ದರೆ ಇದಕ್ಕೆ ಆನುವಂಶಿಕತೆ ಕಾರಣವಾಗಿರಬಹುದು. ಕೂದಲು ಉದುರುವಿಕೆಗೆ(Cause Of Baldness) ಸಮಸ್ಯೆಗೆ ಇಂದು ಪ್ರತಿಯೊಬ್ಬರಲ್ಲಿಯೂ ಸಾಮಾನ್ಯವಾಗಿದೆ. ಇದಕ್ಕೆ ಅನೇಕರು ಮನೆಮದ್ದುಗಳನ್ನು ಉಪಯೋಗಿಸುತ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News