ಬೆಂಗಳೂರು : ಹೂವುಗಳಿಗೆ ನಮ್ಮ ಜೀವನದಲ್ಲಿ ವಿಭಿನ್ನ ಪ್ರಾಮುಖ್ಯತೆ ಹೊಂದಿದೆ. ಹುಟ್ಟಿನಿಂದ ಸಾಯುವವರೆಗೂ ಹೂವಿಗೆ ವಿಶೇಷ ಮಹತ್ವವಿದೆ. ಯಾವ ಹೂವೇ ಆಗಿರಲಿ ಅದು ಸುಂದರವಾಗಿಯೇ ಇರುತ್ತದೆ. ಕೆಲವು ಹೂವುಗಳ ಬಣ್ಣವಂತೂ ಮನಸೂರೆಗೊಳ್ಳುುತ್ತದೆ. ಆದರೆ, ಇಂಥ ಹೂವು ಸಾವಿಗೂ ಕಾರಣವಾಗಬಹುದು ಎಂದರೆ ನಂಬುವುದು ಕಷ್ಟ. ಆದರೆ ಇದು ಸತ್ಯ. ಈ ಹೂವಿನ ಸುಗಂಧ ಮೂರ್ಛೆ ತರಿಸುತ್ತದೆ. ಅಪ್ಪಿ ತಪ್ಪಿ ಇದನ್ನೂ ಬಾಯಿಗೆ ಹಾಕಿಕೊಂಡರೆ  ಪ್ರಾಣವೇ ಹೋಗುತ್ತದೆ. ಯಾಕೆಂದರೆ ಇದೊಂದು ವಿಷಕಾರಿ ಹೂವು.


COMMERCIAL BREAK
SCROLL TO CONTINUE READING

ಮನೆಗಳ ಅಲಂಕಾರಕ್ಕೆ ಹೂವುಗಳನ್ನು ಬಳಸಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ, ಪೂಜೆ- ಪುನಸ್ಕಾರಗಳಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಹೂವು ಅಪಾಯಕಾರಿಯಲ್ಲ ಎಂದೇ ಹೇಳಲಾಗುತ್ತದೆ. ಅವುಗಳಲ್ಲಿ ಹುಳ ಇರಬಹುದು ಎನ್ನುವ ಕಾರಣಕ್ಕೆ ಹೂವನ್ನು ಮೂಸಿ  ನೋಡಬಾರದು ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಹೂವಿನಲ್ಲಿ ವಿಷದ ಅಂಶ ಇರುತ್ತದೆಯಂತೆ. ಹಾಗಾಗಿ, ಅದರ ಬಳಿಯೂ ಸುಳಿಯಬಾರದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : High Cholesterol: ಕಣ್ಣಿನ ಸುತ್ತಲಿನ ಈ ಬದಲಾವಣೆಗಳು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು


ಈ ಹೂವು ಎಷ್ಟು ಅಪಾಯಕಾರಿ ಎಂದರೆ ಅದರ ಸುತ್ತ  ಹುಲ್ಲು ಕೂಡ ಬೆಳೆಯುವುದಿಲ್ಲ. ಈ ಹೂವಿನ ಹೆಸರು ಅಕೋನೈಟ್. ಇದು ಹಿಮಾಲಯ ಬಯಲು ಪ್ರದೇಶದಲ್ಲಿ ಸುಮಾರು 10,000 ಅಡಿ ಎತ್ತರದಲ್ಲಿ ಕಂಡುಬರುತ್ತದೆ. ಇದು ಹಿಮಾಲಯ ಪರ್ವತಗಳ ಮೇಲೆ ನಾಮಿಕ್ ಮತ್ತು ಹಿರಾಮನಿ ಹಿಮನದಿಗಳ ಸುತ್ತಲೂ ಕಂಡುಬರುತ್ತದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ನೀಲಿ ಬಣ್ಣದ ಹೂವುಗಳು ಇಲ್ಲಿ ಅರಳುತ್ತವೆ. ಇದನ್ನು ವಿಷಕಾರಿ ಹೂವು ಎಂದು ಹೇಳಲಾಗುತ್ತದೆ. ಆದರೆ ಇವುಗಳನ್ನು ಔಷಧ ತಯಾರಿಸಲು ಬಳಸುತ್ತಾರೆ. ಇದೊಂದು ಆಂಜಿಯೋಸ್ಪರ್ಮಿಕ್ ಸಸ್ಯವಾಗಿದೆ. ಅಂದರೆ ಬೇರು, ಕಾಂಡ, ಎಲೆ, ಹಣ್ಣು, ಹೂವು, ಬೀಜಗಳನ್ನು ಹೊಂದಿರುವ ಸಸ್ಯ. 


ಮಧುಮೇಹ, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಔಷಧಿ ತಯಾರಿಕೆಯಲ್ಲಿ ಈ ಹೂವನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.  ಈ ಔಷಧಿ ತಯಾರಿಕೆಗೂ ಒಂದು ವಿಧಾನವಿದೆ. ಆ ವಿಧಾನದ ಮೂಲಕವೇ ಈ ಹೂವನ್ನು ಬಳಸಲಾಗುತ್ತದೆ. ಯಾಕೆಂದರೆ ಈ ಹೂವಿನ ಸಸ್ಯದ ಸುತ್ತಲೂ ಬೇರೆ ಯಾವ ಸಸ್ಯ ಕೂಡಾ ಬೆಳೆಯುವುದಿಲ್ಲ ಎನ್ನುವ ಅಂಶದಿಂದಲೇ ಈ ಹೂವು ಎಷ್ಟು ಅಪಾಯಕಾರಿ ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತೊಂದೆಡೆ, ಯಾವುದೇ ಪ್ರಾಣಿ ಅದರ ಎಲೆಗಳನ್ನು ತಿಂದರೆ, ತಕ್ಷಣವೇ ಸಾಯುತ್ತದೆ ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ :    Healthy Drink : ಚಳಿಗಾಲದ ಶೀತದ ಸಮಸ್ಯೆಗೆ ಸೇವಿಸಿ ಕೇಸರಿ-ಅರಿಶಿನ ಹಾಲು! 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.