Deep Sleep Foods: ಪ್ರತಿಯೊಬ್ಬರಿಗೂ ಆರೋಗ್ಯದಿಂದಿರಲು ಉತ್ತಮ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ. ದಿನಕ್ಕೆ 8 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದು ನಿಮ್ಮ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನದ ಕೆಲಸದಿಂದ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ನಮ್ಮ ದೇಹಕ್ಕೆ ಕನಿಷ್ಠ 8 ಗಂಟೆಗಳ ನಿದ್ರೆ ಅಗತ್ಯವಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಬಿಡುವಿಲ್ಲದ ಕೆಲಸದ ಹೊರತಾಗಿಯೂ ಕೆಲವರಿಗೆ ನಿದ್ರೆಯೇ ಬರುವುದಿಲ್ಲ. ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಮರುದಿನ ಉಲ್ಲಾಸದಿಂದ ಇರಲೂ ಸಾಧ್ಯವಾಗುವುದಿಲ್ಲ. ನೀವೂ ಕೂಡ ಈ ರೀತಿಯ ನಿದ್ರಾಹೀನತೆಯ ಸಮಸ್ಯೆ ಎದುರಿಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.


COMMERCIAL BREAK
SCROLL TO CONTINUE READING

ಕೆಲವರು ನಿದ್ರೆ ಮಾಡುವ ಸಲುವಾಗಿ ನಿದ್ರೆ ಗುಳಿಗೆಗಳ ಮೊರೆ ಹೋಗುತ್ತಾರೆ. ಆದರೆ ನಿದ್ರಾಹೀನತೆಗೆ ನೀವು ಮನೆಮದ್ದುಗಳನ್ನು (Home Remedies) ಪ್ರಯತ್ನಿಸಬಹುದು ಎಂದು ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಹೇಳುತ್ತಾರೆ. ನಿಮ್ಮ ಡಯಟ್ನಲ್ಲಿ  ಕೆಲವು ಆಹಾರಗಳನ್ನು ಸೇರಿಸುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಬಹುದು. 


ಉತ್ತಮ ನಿದ್ರೆಗಾಗಿ ಈ ಆಹಾರಗಳನ್ನು ಸೇವಿಸಿ (Eat these things for good sleep): 
1. ಬಾದಾಮಿಯನ್ನು ಸೇವಿಸುವುದು:
ಹಾಲಿನಂತೆ ಬಾದಾಮಿಯಲ್ಲಿ ಟ್ರಿಪ್ಟೊಫಾನ್ ಕೂಡ ಇದೆ, ಇದು ಮೆದುಳು ಮತ್ತು ನರಗಳ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಈ ಕಾರಣದಿಂದ ಮಿದುಳಿನ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಬಾದಾಮಿ (Badam) ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದರಲ್ಲಿರುವ ಮೆಗ್ನೀಸಿಯಮ್ ನಿಮ್ಮ ಹೃದಯದ ಲಯವನ್ನು ಸ್ಥಿರವಾಗಿಡಲು ಸಹಕಾರಿಯಾಗಿದೆ. ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ ಸೇವಿಸುವುದರಿಂದ ಚೆನ್ನಾಗಿ ನಿದ್ರೆ ಮಾಡಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-  Harmful Fruits Combinations: ಮರೆತೂ ಕೂಡ ಇವುಗಳನ್ನು ಒಟ್ಟಿಗೆ ಎಂದಿಗೂ ಸೇವಿಸಬೇಡಿ


2. ಡಾರ್ಕ್ ಚಾಕೊಲೇಟ್ ಸೇವನೆ:
ಬಾದಾಮಿಯನ್ನು ಹೊರತುಪಡಿಸಿ, ಡಾರ್ಕ್ ಚಾಕೊಲೇಟ್ ಅತ್ಯುತ್ತಮ ನಿದ್ರೆಯನ್ನು ಉಂಟುಮಾಡುವ ಆಹಾರಗಳಲ್ಲಿ ಒಂದಾಗಿದೆ. ಇದು ಸಿರೊಟೋನಿನ್ ಅನ್ನು ಸಹ ಹೊಂದಿದೆ, ಇದು ನಿಮ್ಮ ಮನಸ್ಸು ಮತ್ತು ನರಗಳ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.


3. ಬಾಳೆಹಣ್ಣು:
ಬಾಳೆಹಣ್ಣು ನಿಮ್ಮ ನೆಮ್ಮದಿಯ ನಿದ್ರೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ (Banana) ಸ್ನಾಯು ಸಡಿಲಗೊಳಿಸುವ ವಸ್ತುಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಬಾಳೆಹಣ್ಣಿನಲ್ಲಿರುವ ಉತ್ತಮ ಕಾರ್ಬ್ ಅಂಶವು ನಿಮಗೆ ಸ್ವಾಭಾವಿಕವಾಗಿ ನಿದ್ದೆ ಬರುವಂತೆ ಮಾಡುತ್ತದೆ.


ಇದನ್ನೂ ಓದಿ- Curd Side Effects: ನಿಮಗೂ ಈ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಮೊಸರು ಸೇವಿಸಬೇಡಿ


4. ಬೆಚ್ಚಗಿನ ಹಾಲಿನ ಬಳಕೆ:
ಒಂದು ಗ್ಲಾಸ್ ಬೆಚ್ಚಗಿನ ಹಾಲು ಉತ್ತಮ ನಿದ್ರೆಗಾಗಿ ಉತ್ತಮ ಪಾನೀಯವಾಗಿದೆ. ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಸಿಡ್ ಇದ್ದು ಅದು ಸಿರೊಟೋನಿನ್ ಆಗಿ ಬದಲಾಗುತ್ತದೆ. ಸಿರೊಟೋನಿನ್ ಮೆದುಳಿನಲ್ಲಿ ಹಿತವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಿಟಿಕೆ ಜಾಯಿಕಾಯಿ, ಒಂದು ಚಿಟಿಕೆ ಏಲಕ್ಕಿ ಮತ್ತು ಬಾದಾಮಿಯನ್ನು ಪುಡಿಮಾಡಿ ಬೆರೆಸಿ. ಇದು ಹಾಲಿನ ರುಚಿಯನ್ನು ಸುಧಾರಿಸುವುದಲ್ಲದೆ ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


5.  ಚೆರ್ರಿ ಸೇವನೆ: 
ಚೆರ್ರಿಗಳು ಪೀನಿಯಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಹೊಂದಿರುತ್ತವೆ. ಇದು ನಮ್ಮ ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುತ್ತದೆ. ಮಾನಸಿಕ ಆಯಾಸ ಮತ್ತು ಒತ್ತಡಕ್ಕೆ ಚೆರ್ರಿಗಳನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 10-12 ಚೆರ್ರಿಗಳನ್ನು ತಿನ್ನುವುದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.


ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ