Foods for Pain Relief: ಯಾವುದೇ ನೋವನ್ನು ಕೆಲವೇ ನಿಮಿಷಗಳಲ್ಲಿ ಮಾಯಮಾಡುತ್ತೆ ಈ 5 ಆಹಾರ

Pain Relief Foods: ಬಹುಕಾಲದಿಂದ ಕಾಡುತ್ತಿರುವ ದೇಹದ ನೋವನ್ನು ಕಡಿಮೆ ಮಾಡಲು ನೀವು ನಿಮ್ಮ ಡಯಟ್ ನಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಳ್ಳಬೇಕು.

Written by - Yashaswini V | Last Updated : Aug 12, 2021, 09:40 AM IST
  • ದೀರ್ಘಕಾಲದ ನೋವಿನ ಹಿಂದೆ ಉರಿಯೂತದ ಸಮಸ್ಯೆ ಕೂಡ ಕಾರಣವಾಗಿರಬಹುದು
  • ಬೆಳ್ಳುಳ್ಳಿ ದೀರ್ಘಕಾಲದ ಉರಿಯೂತದ ನೋವನ್ನು ಕಡಿಮೆ ಮಾಡುತ್ತದೆ
  • ನೋವು ಕಡಿಮೆ ಮಾಡುವ ನೈಸರ್ಗಿಕ ಆಹಾರಗಳಲ್ಲಿ ಶುಂಠಿ ಪ್ರಮುಖವಾಗಿದೆ
Foods for Pain Relief: ಯಾವುದೇ ನೋವನ್ನು ಕೆಲವೇ ನಿಮಿಷಗಳಲ್ಲಿ ಮಾಯಮಾಡುತ್ತೆ ಈ 5 ಆಹಾರ title=
Foods for Pain Relief

ಬೆಂಗಳೂರು: ವಯಸ್ಸಾದಂತೆ ದೇಹದಲ್ಲಿ ಹಲವು ರೀತಿಯ ದೈಹಿಕ ನೋವುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ, ಬೆನ್ನು, ಕಾಲು, ಮೊಣಕಾಲು, ಭುಜ ಮತ್ತು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಹೊರತಾಗಿ, ಯಾವುದೇ ವಯಸ್ಸಿನಲ್ಲಿ ಗಾಯದಿಂದಾಗಿ ನೋವು ಕೂಡ ಸಂಭವಿಸಬಹುದು. ಹಲವು ಸಂದರ್ಭದಲ್ಲಿ ಒತ್ತಡದಿಂದಾಗಿ ನೋವುಗಳು ಸಂಭವಿಸುತ್ತದೆ. ಆದರೆ ಕೆಲವು ನೋವುಗಳು ಆಗಾಗ್ಗೆ ಕಾಡುತ್ತಲೇ ಇರುತ್ತವೆ.

ಸಾಮಾನ್ಯವಾಗಿ ದೀರ್ಘಕಾಲದ ನೋವಿನ ಹಿಂದೆ ಉರಿಯೂತದ ಸಮಸ್ಯೆ ಕೂಡ ಇರುತ್ತದೆ. ಆದರೆ, ಈ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. 5 ಸಾಟಿಯಿಲ್ಲದ ಆಹಾರವನ್ನು ಸೇವಿಸುವುದರಿಂದ ಇದನ್ನು ಕಡಿಮೆ ಮಾಡಬಹುದು. ಉರಿಯೂತವನ್ನು ಕಡಿಮೆ ಮಾಡುವ ಮತ್ತು ನೋವನ್ನು ನಿವಾರಿಸುವ 5 ಆಹಾರಗಳ (5 Foods for Pain Relief) ಬಗ್ಗೆ ತಿಳಿಯೋಣ...

ನೋವು ನಿವಾರಕ ಆಹಾರಗಳು (Foods for Pain Relief):
ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು ಹೇಳುವಂತೆ  ದೀರ್ಘಕಾಲದ ನೋವಿನ ಹಿಂದೆ ಉರಿಯೂತದ ಸಮಸ್ಯೆ ಕೂಡ ಕಾರಣವಾಗಿರಬಹುದು. ಇದನ್ನು ಗುಣಪಡಿಸಲು, ಕೆಲವು ಉರಿಯೂತದ ಆಹಾರಗಳ ಸೇವನೆಯು ಪ್ರಯೋಜನಕಾರಿಯಾಗಬಹುದು. ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವ ಆಹಾರಗಳಿವು-

ಇದನ್ನೂ ಓದಿ- Harmful Fruits Combinations: ಮರೆತೂ ಕೂಡ ಇವುಗಳನ್ನು ಒಟ್ಟಿಗೆ ಎಂದಿಗೂ ಸೇವಿಸಬೇಡಿ

1. ನೋವು ನಿವಾರಣೆಗೆ ಅರಿಶಿನ  (Turmeric for Pain Relief): ಡಾ.ಅಬ್ರಾರ್ ಮುಲ್ತಾನಿ ಹೇಳುವಂತೆ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವ ಆಹಾರಗಳ ಹೇಳುವಾಗ ಅರಿಶಿನದ (Turmeric) ಹೆಸರು ಅಗ್ರ ಸ್ಥಾನದಲ್ಲಿರುತ್ತದೆ. ಏಕೆಂದರೆ ಇದರಲ್ಲಿರುವ ಕರ್ಕ್ಯುಮಿನ್ ಸಂಯುಕ್ತವು ಅತ್ಯುತ್ತಮವಾದ ಉರಿಯೂತ ನಿವಾರಕ ಗುಣವನ್ನು ಹೊಂದಿದೆ, ಇದು ನೋವನ್ನು ಕಡಿಮೆ ಮಾಡಲು ಪರಿಣಾಮಕಾರಿ ಮನೆಮದ್ದು.

2. ಬೆಳ್ಳುಳ್ಳಿ: ಬೆಳ್ಳುಳ್ಳಿ ಕೂಡ ಉರಿಯೂತ ನಿರೋಧಕ ಆಹಾರವಾಗಿದ್ದು, ಇದು ದೀರ್ಘಕಾಲದ ಉರಿಯೂತದ ನೋವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ, ಬೆಳ್ಳುಳ್ಳಿಯಲ್ಲಿ ಜೀವಿರೋಧಿ ಗುಣಗಳು ಸಹ ಇವೆ. ಅದೇ ಸಮಯದಲ್ಲಿ, ಬೆಳ್ಳುಳ್ಳಿಯಲ್ಲಿರುವ ಗಂಧಕವು ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾದ ಟಿ-ಕೋಶಗಳ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ. ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

3. ಶುಂಠಿ: ಶುಂಠಿಯ (Ginger) ಹೆಸರನ್ನು ನೋವು ಕಡಿಮೆ ಮಾಡುವ ನೈಸರ್ಗಿಕ ಆಹಾರಗಳಲ್ಲಿ (Natural Food) ಸೇರಿಸಲಾಗಿದೆ. ಶುಂಠಿಯು ಜಿಂಜರಾಲ್ ಎಂಬ ಉರಿಯೂತದ ಗುಣಗಳನ್ನು ಹೊಂದಿದೆ, ಇದು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಅದರೊಳಗೆ ಇರುವ ಪ್ಯಾರಡಾಲ್‌ಗಳು ಮತ್ತು ಶೂಗಲ್ಸ್ ಅಂಶಗಳು ಸಹ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ- Honey Lemon Water: ನೀವೂ ಕೂಡ ಖಾಲಿ ಹೊಟ್ಟೆಯಲ್ಲಿ ನಿಂಬೆ, ಜೇನಿನ ನೀರು ಸೇವಿಸುತ್ತಿದ್ದರೆ ಅದರ ನೆಗೆಟಿವ್ ಎಫೆಕ್ಟ್ ಕೂಡ ಗೊತ್ತಿರಲಿ

4. ಸಾಲ್ಮನ್ ಮೀನು: ನೀವು ಮೀನು ಸೇವಿಸಿದರೆ, ನೀವು ಸಾಲ್ಮನ್ ಮೀನುಗಳನ್ನು (Salmon fish) ತಿನ್ನಬೇಕು. ಏಕೆಂದರೆ ಇದು ಸಂಧಿವಾತದಂತಹ ನೋವಿನಿಂದ ಪರಿಹಾರ ಪಡೆಯಲು ಬಹಳ ಪ್ರಯೋಜನಕಾರಿ. ಸಾಲ್ಮನ್ ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ನಂತಹ ನೋವು ಕಡಿಮೆ ಮಾಡುವ ಅಂಶಗಳಿವೆ.

5. ಈರುಳ್ಳಿ: ನೀವು ನಿಮ್ಮ ಆಹಾರದಲ್ಲಿ ಸಾಕಷ್ಟು ಈರುಳ್ಳಿಯನ್ನು (Onion) ಬಳಸಿರಬೇಕು. ಆದರೆ ಇದು ನೋವಿನಿಂದ ಪರಿಹಾರ ಪಡೆಯುವಲ್ಲಿಯೂ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ನೋವನ್ನು ಉಂಟುಮಾಡುವ ಕಿಣ್ವಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News