Deepawali 2021: ಲಕ್ಷ್ಮೀಯ ಕೃಪೆಗೆ ಪಾತ್ರರಾಗಲು ಹೀಗಿರಲಿ ಇಂದಿನ ಪೂಜೆಯ ನಿಯಮ, ಈ ಮುಹೂರ್ತದಲ್ಲಿ ಪೂಜಿಸಿದರೆ ಸಿಗಲಿದೆ ಸಂಪೂರ್ಣ ಪೂಜಾ ಫಲ
ಇಂದು ಲಕ್ಷ್ಮೀ ಪೂಜೆ ಮಾಡುವ ಮುನ್ನ ಇಡೀ ಮನೆಯನ್ನು ಶುಚಿಗೊಳಿಸಲಾಗಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಈ ದಿನ ಲಕ್ಷ್ಮೀ ಭೂಮಿ ಮೇಲೆ ಬಂದು ಸಂಚಾರ ಮಾಡುತ್ತಾಳೆ ಎನ್ನುವುದು ನಂಬಿಕೆ.
ನವದೆಹಲಿ : ದೀಪಾವಳಿಯ ಸಂದರ್ಭದಲ್ಲಿ, ಮನೆಯಿಂದ ಮಾರುಕಟ್ಟೆಯವರೆಗೆ ಎಲ್ಲೆಡೆ ಅಲಂಕಾರಗಳನ್ನು ಮಾಡಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆಯನ್ನು (Diwali Lakshmi pooja) ಮಾಡಲಾಗುತ್ತದೆ. ವಿಶೇಷ ಅನುಗ್ರಹ ನೀಡುವಂತೆ ಮಾತೆ ಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ಇಂದು (ನವೆಂಬರ್ 4, 2021, ಗುರುವಾರ) ಲಕ್ಷ್ಮೀ ಪೂಜೆ. ಲಕ್ಷ್ಮೀಯನ್ನು ಶುಭ ಮುಹೂರ್ತದಲ್ಲಿ (Lakshmi pooja muhurta) ಪೂಜಿಸಿದರೆ ಪೂಜೆಯ ಫಲವೂ ಹೆಚ್ಚು ಎನ್ನುವುದು ಆಸ್ತಿಕರ ನಂಬಿಕೆ. ಲಕ್‌ಮೀ
ದೀಪಾವಳಿ ಲಕ್ಷ್ಮೀ ಪೂಜೆಯ ಶುಭ ಮುಹೂರ್ತ :
ಇಂದು ಲಕ್ಷ್ಮೀ ಪೂಜೆ (Lakshmi pooje) ಮಾಡುವ ಮುನ್ನ ಇಡೀ ಮನೆಯನ್ನು ಶುಚಿಗೊಳಿಸಲಾಗಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಈ ದಿನ ಲಕ್ಷ್ಮೀ ಭೂಮಿ ಮೇಲೆ ಬಂದು ಸಂಚಾರ ಮಾಡುತ್ತಾಳೆ ಎನ್ನುವುದು ನಂಬಿಕೆ. ಲಕ್ಷ್ಮೀ (Godess Lakshmi) ಸಂಚಾರದ ವೇಳೆ ಶುಚಿತ್ವ ಕಾಪಾಡಿರುವ ಮನೆಗಳಿಗೂ ಅವಳ ಪ್ರವೇಶವಾಗುತ್ತದೆಯಂತೆ. ಶುಚಿತ್ವ ಇದ್ದ ಕಡೆ ಲಕ್ಷ್ಮೀ ನೆಲೆಸುತ್ತಾಳೆ. ಲಕ್ಷ್ಮೀ ಯಾವ ಮನೆಯಲ್ಲಿ ನೆಲೆಯಾಗಿರುತ್ತಾಳೋ ಅಲ್ಲಿ ಸುಖ ಶಾಂತಿ ಸಮೃದ್ಧಿಗೆ ಕೊರತೆ ಇರುವುದಿಲ್ಲ.
ಇಂದು ಅಂದರೆ ಲಕ್ಷ್ಮೀ ಪೂಜೆಯ (Diwali Lakshmi pooja) ದಿನ ಇಡೀ ಕುಟುಂಬ ಸೇರಿ ಲಕ್ಷ್ಮೀಯನ್ನು ಪೂಜಿಸುವುದು ವಾಡಿಕೆ. ಮೊದಲೇ ಹೇಳಿದ ಹಾಗೆ ಶುಭ ಮುಹೂರ್ತದಲ್ಲಿ ಮಾಡಿದ ಪೂಜೆಯ ಫಲವೂ ಹೆಚ್ಚು. ಈ ವರ್ಷ, ಲಕ್ಷ್ಮೀ ಪೂಜೆಯ ಶುಭ ಮುಹೂರ್ತ ಸಂಜೆ 06:09 ರಿಂದ ರಾತ್ರಿ 08:04 ರವರೆಗೆ ಇರಲಿದೆ.
ದೀಪಾವಳಿ ಪೂಜಾ ವಿಧಾನ :
೧. ಮನೆಯನ್ನು ಸ್ವಚ್ಛಗೊಳಿಸಿದ ನಂತರ, ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಿ. ಮನೆಯ ಮುಖ್ಯ ಬಾಗಿಲನ್ನು ಸರಿಯಾಗಿ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ.
೨. ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿದ ನಂತರ ಅಲ್ಲಿಯೂ ಗಂಗಾಜಲವನ್ನು ಸಿಂಪಡಿಸಿ. ನಂತರ ಕೆಂಪು ಬಟ್ಟೆಯನ್ನು ಹರಡಿ ಅದರ ಮೇಲೆ ಲಕ್ಷ್ಮಿ ದೇವಿಯ, ಗಣೇಶ (Lord Ganesha) ಮತ್ತು ತಾಯಿ ಸರಸ್ವತಿಯ ಫೋಟೋ ಅಥವಾ ವಿಗ್ರಹವನ್ನು ಇರಿಸಿ.
೩. ದೇವರ ಬಳಿ ನೀರು ತುಂಬಿದ ಪಾತ್ರೆಯನ್ನು ಇರಿಸಿ. ಅಕ್ಕಿ ಅಥವಾ ಗೋಧಿಯ ಸಣ್ಣ ರಾಶಿಯನ್ನು ಮಾಡಿ ಅದರ ಮೇಲೆ ತುಪ್ಪದ (Ghee) ದೀಪವನ್ನು ಹಚ್ಚಿ.
೪. ಲಕ್ಷ್ಮೀ ದೇವಿಗೆ ಮತ್ತು ಗಣೇಶ, ಸರಸ್ವತಿಗೆ ಕುಂಕುಮ ಹಾಕಿ. ದೀಪಗಳನ್ನು ಬೆಳಗಿಸಿ.
೫. ಬೆಲ್ಲ, ಅರಿಶಿನ, ಅಕ್ಷತೆ, ಸಿಹಿತಿಂಡಿ, ಹಣ್ಣುಗಳನ್ನು ಅರ್ಪಿಸಿ.
೫. ಶ್ರೀಸ್ತ್ರೋತ್ರವನ್ನು 3 ಬಾರಿ ಪಠಿಸಿ. ಕೊನೆಯಲ್ಲಿ, ಆರತಿ ಬೆಳಗಿ, ಎಲ್ಲರಿಗೂ ಪ್ರಸಾದವನ್ನು ವಿತರಿಸಿ.
ಇದನ್ನೂ ಓದಿ: Diwali 2021: ದೀಪಾವಳಿಯ ನಂತರ ಈ ದಿನಾಂಕವನ್ನು ನೆನಪಿಡಿ, ಈ ರಾಶಿಯವರ ಮೇಲೆ ವಿಶೇಷ ಪರಿಣಾಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ