Diwali 2021: ದೀಪಾವಳಿಯ ದಿನದಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಈ ಕೆಲಸವನ್ನು ಮಾಡಿ, ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ತಾಯಿ ಲಕ್ಷ್ಮಿ

Diwali 2021: ದೀಪಾವಳಿಯ (Deepawali 2021) ಇಡೀ ದಿನವನ್ನು ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂಚಿಸಿದ ರೀತಿಯಲ್ಲಿ ಕಳೆದರೆ, ತಾಯಿ ಲಕ್ಷ್ಮಿ ಇಡೀ ವರ್ಷ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Nov 4, 2021, 08:15 AM IST
  • ದೀಪಾವಳಿಯಂದು ವಿಶೇಷವಾದದ್ದನ್ನು ಮಾಡಿ
  • ವರ್ಷವಿಡೀ ಮಾತೆ ಲಕ್ಷ್ಮಿಯ ಕೃಪೆ ಇರುತ್ತದೆ

    ಕುಟುಂಬವು ಸಂಪತ್ತಿನಿಂದ ಕೂಡಿರುತ್ತದೆ
Diwali 2021: ದೀಪಾವಳಿಯ ದಿನದಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಈ ಕೆಲಸವನ್ನು ಮಾಡಿ, ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ತಾಯಿ ಲಕ್ಷ್ಮಿ  title=
Deepavali

Diwali 2021:  ದೀಪಾವಳಿಯ ದಿನದಂದು, ತಾಯಿ ಲಕ್ಷೀದೇವಿಯನ್ನು ಪೂಜಿಸುವುದರ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ವರ್ಷಪೂರ್ತಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಇದರಿಂದ ನಿಸ್ಸಂಶಯವಾಗಿ, ಲಕ್ಷ್ಮಿ ವಾಸಿಸುವ ಸ್ಥಳದಲ್ಲಿ ಅಪಾರ ಸಂಪತ್ತು ಕೂಡ ಉಳಿಯಲಿದೆ. ವರ್ಷವಿಡೀತಾಯಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಬೇಕೆಂದು ನೀವು ಬಯಸಿದರೆ, ದೀಪಾವಳಿ 2021 ರಂದು, ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲವು ವಿಶೇಷ ಕೆಲಸಗಳನ್ನು ಮಾಡಿ. ದೀಪಾವಳಿಯ ದಿನವನ್ನು ಈ ರೀತಿ ಕಳೆದರೆ ವರ್ಷವಿಡೀ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.

ದೀಪಾವಳಿಯನ್ನು ಹೀಗೆ ಕಳೆಯಿರಿ:
>> ದೀಪಾವಳಿ  (Deepawali 2021) ದಿನ ಬೆಳಿಗ್ಗೆ ಬೇಗ ಸ್ನಾನ ಮಾಡಿ ಉಪವಾಸ ಮಾಡುವ ಪ್ರತಿಜ್ಞೆ ಮಾಡಿ. 
ಹಿರಿಯರ ಆಶೀರ್ವಾದ ಪಡೆಯಿರಿ.
>> ಮನೆಯನ್ನು ಅಲಂಕರಿಸಿ, ಬಾಗಿಲಿನ ಹೊರಗೆ ರಂಗೋಲಿ ಹಾಕಿ.
>> ದೀಪಾವಳಿಯ ದಿನದಂದು ವಿಶೇಷ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಮಾಡಿ.
>> ಸಾಧ್ಯವಾದರೆ, ಸ್ವಲ್ಪ ಹೆಚ್ಚಾಗಿ ಅಡುಗೆ ಮಾಡಿ ಮತ್ತು ಅವುಗಳನ್ನು ಬಡವರಿಗೆ ವಿತರಿಸಿ.
>> ಸಂಜೆ ಮತ್ತೆ ಸ್ನಾನ ಮಾಡಿ ತಾಯಿ ಲಕ್ಷ್ಮೀಯನ್ನು ಸ್ವಾಗತಿಸಲು ಪೂಜೆಯನ್ನು ಮಾಡಿ.

ಇದನ್ನೂ ಓದಿ- ದೀಪಾವಳಿ ದಿನ ಈ ಸ್ಥಳದಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ, ಸದಾ ಇರಲಿದೆ ಲಕ್ಷ್ಮೀ ಕೃಪೆ

>> ಪೂಜೆ ಮಾಡಲು ಗೋಡೆಯ ಮೇಲೆ ಲಕ್ಷ್ಮೀ  (Maa Lakshmi) ವಿಗ್ರಹವನ್ನು ಬರೆಯಿರಿ. ನೀವು ಬಯಸಿದರೆ ವಿಗ್ರಹವನ್ನು ಸಹ ಸ್ಥಾಪಿಸಬಹುದು.
>> ಪೂಜೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸಿ.
>> ತಾಯಿ ಲಕ್ಷ್ಮಿಗೆ ಕಂಕಣವನ್ನು ಅರ್ಪಿಸಿ.
>> ಪೂಜೆಯ ವೇಳೆ 6 ಚತುರ್ಮುಖ ದಿಯಾಗಳು ಮತ್ತು 26 ಸಣ್ಣ ದಿಯಾಗಳನ್ನು ಬೆಳಗಿಸಿ.

ಇದನ್ನೂ ಓದಿ- Diwali 2021: ದೀಪಾವಳಿಯ ನಂತರ ಈ ದಿನಾಂಕವನ್ನು ನೆನಪಿಡಿ, ಈ ರಾಶಿಯವರ ಮೇಲೆ ವಿಶೇಷ ಪರಿಣಾಮ

>> ಪೂಜೆಯ ನಂತರ ಮನೆಯ ಮೂಲೆಗಳಲ್ಲಿ, ಮುಖ್ಯ ಬಾಗಿಲು ಮತ್ತು ಛಾವಣಿಯ ಮೇಲೆ ದೀಪಗಳನ್ನು ಇರಿಸಿ. 
>> ಆದರೆ ಪೂಜೆ ಮಾಡುವ ಸ್ಥಳದಲ್ಲಿ ನಾಲ್ಕು ಮುಖದ ದೀಪವನ್ನು ಇರಿಸಿ.
>> ನೀರು ತುಂಬಿದ ಕಲಶ, ಅಕ್ಕಿ, ಹಣ್ಣುಗಳು, ಬೆಲ್ಲ, ಧೂಪ ಇತ್ಯಾದಿಗಳಿಂದ ಪೂಜೆ ಮಾಡಿ. ಸಿಹಿತಿಂಡಿಗಳನ್ನು ಅರ್ಪಿಸಿ. (ನಿಮ್ಮ ಮನೆಯಲ್ಲಿ ನಡೆದುಕೊಂಡು ಬಂದಿರುವ ಪದ್ದತಿಯನ್ನು ಅನುಸರಿಸಿ)
>> ಮನೆಯ ಸೊಸೆಯಂದಿರಿಗೆ ಮತ್ತು ಮಕ್ಕಳಿಗೆ ಉಡುಗೊರೆಯನ್ನು ನೀಡಿ ಆಶೀರ್ವದಿಸಿ. 

ದೀಪಾವಳಿ ಹಬ್ಬದಂದು ಈ ರೀತಿ ಲಕ್ಷ್ಮೀ ದೇವಿಯನ್ನು ಆರಾಧಿಸಿ ಪೂಜಿಸುವುದರಿಂದ ತಾಯಿ ಲಕ್ಷ್ಮೀ ಮನೆ ಪ್ರವೇಶಿಸಿ ಅಂತಹ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News