ದೀಪಾವಳಿ ದಿನ ಈ ಸ್ಥಳದಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ, ಸದಾ ಇರಲಿದೆ ಲಕ್ಷ್ಮೀ ಕೃಪೆ

ವಾಸ್ತು ಪ್ರಕಾರ, ಮನೆಯಲ್ಲಿ ಬಳಸಿರುವ ನೀರನ್ನು ಹೊರ ಹಾಕಲು ಮಾಡಿರುವ ಡ್ರೈನ್ ಗಳಿಗೂ ಆರ್ಥಿಕ ಸ್ಥಿತಿಗೂ ನೇರವಾದ ಸಂಬಂಧವಿದೆ.

Written by - Ranjitha R K | Last Updated : Nov 3, 2021, 02:57 PM IST
  • ಸಂಪತ್ತಿಗೂ ವರುಣ ದೇವನಿಗೂ ಇದೆ ಸಂಬಂಧ
  • ಮನೆಯಲ್ಲಿ ನೀರಿನ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
  • ಚರಂಡಿಗಳ ಬಳಿ ದೀಪ ಹಚ್ಚಲೇ ಬೇಕು
 ದೀಪಾವಳಿ ದಿನ ಈ ಸ್ಥಳದಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ, ಸದಾ ಇರಲಿದೆ ಲಕ್ಷ್ಮೀ ಕೃಪೆ  title=
ಚರಂಡಿಗಳ ಬಳಿ ದೀಪ ಹಚ್ಚಲೇ ಬೇಕು (file photo)

ನವದೆಹಲಿ : ಬೆಳಕಿನ ಹಬ್ಬ ದೀಪಾವಳಿ (Diwali) ಹಬ್ಬ ಆರಂಭವಾಗಿದೆ. ಇಂದು ನರಕ ಚತುರ್ದಶಿ. ಈ ದಿನ, ಮನೆ ತುಂಬಾ ದೀಪವನ್ನು ಬೆಳಗುತ್ತೇವೆ. ದೀಪ ಬೆಳಗುವ ವೇಳೆ, ಮನೆಯೊಳಗಿನ ಚರಂಡಿಗಳ ಮೇಲೆ ದೀಪವನ್ನು ಬೆಳಗಿಸುವುದನ್ನು ಮರೆಯಬೇಡಿ. ವಾಸ್ತು ಪ್ರಕಾರ (Vastu Shastra) ಹೀಗೆ ಮಾಡುವುದು ಮಂಗಳಕರ ಎಂದು  ಪರಿಗಣಿಸಲಾಗುತ್ತದೆ. 

ಸಂಪತ್ತಿಗೂ ವರುಣ ದೇವನಿಗೂ ಇದೆ ಸಂಬಂಧ : 
ವಾಸ್ತು ಶಾಸ್ತ್ರದ (Vastu Tips) ಪ್ರಕಾರ, ನೀರು ವರುಣ ದೇವನಿಗೆ ಸಂಬಂಧಿಸಿದೆ. ಆದ್ದರಿಂದಲೇ ವರುಣನ ವಾಸ ಅಂದರೆ ಸಾಗರವನ್ನು ರತ್ನಾಕರ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ನೀರಿನ ಹರಿವಿಗಾಗಿ ನಿರ್ಮಿಸಿರುವ ಮನೆಯ ಚರಂಡಿಗಳು (Drain) ಸದಾ ಸ್ವಚ್ಛವಾಗಿರಬೇಕು ಮತ್ತು ಅದರಲ್ಲಿ ಎಂದಿಗೂ ಕಸ ನಿಲ್ಲಬಾರದು. 

ಇದನ್ನೂ ಓದಿ : ದೀಪಾವಳಿಗೆ ಹೊಸ ಪೊರಕೆ ತಂದ ನಂತರ ಈ ತಪ್ಪು ಮಾಡಬೇಡಿ, ಅದೃಷ್ಟ ಲಕ್ಷ್ಮೀ ಮುನಿಸಿಕೊಳ್ಳಬಹುದು

ಮನೆಯಲ್ಲಿ ನೀರಿನ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು :
ವಾಸ್ತು ಪ್ರಕಾರ (Vastu Shastra), ಮನೆಯಲ್ಲಿ ಬಳಸಿರುವ ನೀರನ್ನು ಹೊರ ಹಾಕಲು ಮಾಡಿರುವ ಡ್ರೈನ್ ಗಳಿಗೂ ಆರ್ಥಿಕ ಸ್ಥಿತಿಗೂ ನೇರವಾದ ಸಂಬಂಧವಿದೆ. ಚರಂಡಿಗಳು ಸ್ವಚ್ಚವಾಗಿರದಿದ್ದರೆ, ಆ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.  ಮನೆಯ ಡ್ರೈನ್ ಸ್ವಚ್ಛವಾಗಿರದಿದ್ದರೆ, ಅದು ಕುಟುಂಬದ ಆದಾಯದ (Income) ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.  

ಚರಂಡಿಗಳ ಬಳಿ ದೀಪ ಹಚ್ಚಿ:
ಧಾರ್ಮಿಕ ಗ್ರಂಥಗಳ ಪ್ರಕಾರ ನರಕ ಚತುರ್ದಶಿಯ (Naraka Chaturdashi) ದಿನದಂದು ಮನೆಯ ಚರಂಡಿಯ ಬಳಿ ದೀಪವನ್ನು ಹಚ್ಚಬೇಕು. ಇದರೊಂದಿಗೆ ಮನೆಯ ಸುತ್ತ ಮುತ್ತಲಿನ ಚರಂಡಿಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಚರಂಡಿಗಳು ಮುಚ್ಚಿಹೋಗಿದ್ದರೆ ಅವುಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಮಹಾಲಕ್ಷ್ಮೀ (Godess Lakshmi) ಸಂತೋಷಪಡುತ್ತಾಳೆ ಮತ್ತು ವರ್ಷವಿಡೀ ಕುಟುಂಬವನ್ನು ಹರಸುತ್ತಾಳೆ. 

ಇದನ್ನೂ ಓದಿ : Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News