Deepawali: ದೀಪಾವಳಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಮುಖ್ಯವಾದ ಹಬ್ಬ.  ದೀಪಾವಳಿ, 5 ದಿನಗಳ ಸುದೀರ್ಘ ಹಬ್ಬ, ಈ ಐದು ದಿನಗಳಿಗೂ ವಿಶೇಷ ಮಹತ್ವವಿದೆ. ಈ ಸಂದರ್ಭದಲ್ಲಿ ಧನತ್ರಯೋದಶಿ ಅಥವಾ ಧಂತೇರಾಸ್‌ ದಿನ  ಪಾತ್ರೆಗಳು, ಚಿನ್ನ ಬೆಳ್ಳಿ, ಬಟ್ಟೆ, ಸಂಪತ್ತು ಮತ್ತು ಆಸ್ತಿಯನ್ನು ಖರೀದಿಸುವ ಸಂಪ್ರದಾಯವು ಶತಮಾನಗಳಿಂದ ಆಚರಣೆಯಲ್ಲಿದೆ. ಕಾಲಾನಂತರದಲ್ಲಿ, ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಮುಂತಾದವುಗಳು ಈ ಪಟ್ಟಿಯಲ್ಲಿ ಸೇರಿಕೊಂಡವು. ಆದರೆ ಧಂತೇರಾಸ್‌ನಲ್ಲಿ ವಸ್ತುಗಳನ್ನು ಖರೀದಿಸುವುದರ ಜೊತೆಗೆ, ದಾನ ಮಾಡುವ ಸಂಪ್ರದಾಯವೂ ಇದೆ. ಈ ದಿನ, ಕಷ್ಟದಲ್ಲಿರುವವರಿಗೆ ದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ವರ್ಷವಿಡೀ ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ ಎಂಬ ನಂಬಿಕೆಯೂ ಇದೆ. ಈ ವರ್ಷ, 2 ನವೆಂಬರ್ 2021 ರಂದು, ಮಂಗಳವಾರದ ದಿನ ಧಂತೇರಸ್ ಆಚರಿಸಲಾಗುತ್ತದೆ. ನೀವು ಸಹ ಶ್ರೀಮಂತರಾಗಲು ಬಯಸಿದರೆ, ಈ ದಿನ ಅಗತ್ಯವಿರುವರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ.


COMMERCIAL BREAK
SCROLL TO CONTINUE READING

ಧಂತೇರಾಸ್‌ನಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು:
ಧಂತೇರಾಸ್‌ (Dhanteras) ದಿನದಂದು ಶಾಪಿಂಗ್ ಮಾಡುವುದರ ಜೊತೆಗೆ ದಾನ ಮಾಡುವುದು ಅತ್ಯಂತ ಶುಭಕರ. ಧಂತೇರಾಸ್‌ನಲ್ಲಿ ನೀವು ಸೂರ್ಯಾಸ್ತದ ಮೊದಲು ದಾನ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಅದೇ ಸಮಯದಲ್ಲಿ, ಈ ದಿನ ಹಾಲು, ಮೊಸರು, ಬಿಳಿ ಸಿಹಿತಿಂಡಿಗಳಂತಹ ಬಿಳಿ ವಸ್ತುಗಳನ್ನು ಯಾರಿಗೂ ದಾನ ಮಾಡಬೇಡಿ (Do's Don'ts of Dhanteras). ಹಾಗೆ ಮಾಡುವುದು ಅಶುಭ. ಅದೇ ಸಮಯದಲ್ಲಿ, ಧಂತೇರಸ್ ದಿನದಂದು ಯಾವ ವಸ್ತುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು ಎಂಬುದನ್ನು ತಿಳಿಯೋಣ.


ಇದನ್ನೂ ಓದಿ- Diwali 2021 Money Remedies: ದೀಪಾವಳಿಯಲ್ಲಿ ಈ ಕೆಲಸ ಮಾಡಿ, ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ


ಧಂತೇರಾಸ್‌ನಲ್ಲಿ ಈ ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರ:
ಧಾನ್ಯ:
ಧಂತೇರಾಸ್‌ ದಿನದಂದು ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ, ನಿಮ್ಮ ಮನೆಯಲ್ಲಿ ಎಂದಿಗೂ ಕೂಡ ಆಹಾರ ಧಾನ್ಯಗಳಿಗೆ ಕೊರತೆ ಉಂಟಾಗುವುದಿಲ್ಲ. ಒಂದೊಮ್ಮೆ ನಿಮಗೆ ಆಹಾರ ಧಾನ್ಯಗಳನ್ನು ದಾನ ಮಾಡಲು ಸಾಧ್ಯವಾಗದಿದ್ದರೆ, ಬಡವರಿಗೆ ಆಹಾರವನ್ನು ನೀಡಿ. ಊಟದಲ್ಲಿ ಸಿಹಿಯನ್ನು ತಪ್ಪದೇ ನೀಡಿ. ಇದರ ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಲ್ಪ ಹಣವನ್ನು ನೀಡಿ. 


ಕಬ್ಬಿಣ: ಧನತ್ರಯೋದಶಿ ದಿನದಂದು ಕಬ್ಬಿಣವನ್ನು ದಾನ ಮಾಡುವುದರಿಂದ ಅದೃಷ್ಟ ಬದಲಾಗುತ್ತದೆ. ದುರದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ. ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Astrology: ಈ 5 ರಾಶಿಚಕ್ರದವರು ಅತ್ಯಂತ ಪ್ರಾಮಾಣಿಕರು, ಇವರು ಕನಸಿನಲ್ಲಿಯೂ ಯಾರಿಗೂ ಮೋಸ ಮಾಡುವುದಿಲ್ಲ


ಬಟ್ಟೆ: ಧಂತೇರಾಸ್‌  (Dhanteras) ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಬಟ್ಟೆಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ದಿನ ಬದಲಾಗುತ್ತದೆ. ಕುಬೇರ ದೇವನ ಕೃಪೆಯಿಂದ ಅಪಾರ ಸಂಪತ್ತು ದೊರೆಯುತ್ತದೆ. ಸಾಧ್ಯವಾದರೆ, ಹಳದಿ ಬಟ್ಟೆಗಳನ್ನು ದಾನ ಮಾಡಿದರೆ ಒಳಿತು. 


ಪೊರಕೆ: ಧನತ್ರಯೋದಶಿ ದಿನದಂದು ಹೊಸ ಪೊರಕೆಯನ್ನು ಖರೀದಿಸುವ ಪರಂಪರೆಯೂ ಇದೆ.  ದೇವಸ್ಥಾನದಲ್ಲಿ ಕಸ ಗುಡಿಸುವವರಿಗೆ ಹೊಸ ಪೊರಕೆಯನ್ನು ನೀಡುವುದರಿಂದ ಅಪಾರವಾದ ಸಂಪತ್ತು ದೊರೆಯುತ್ತದೆ ಎಂದು ಹೇಳಲಾಗುತ್ತದೆ.


ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.