Mangal Rashi Parivartan: ಧೈರ್ಯ, ಶೌರ್ಯ, ಭೂಮಿ-ಆಸ್ತಿ ಮತ್ತು ವೈವಾಹಿಕ ಜೀವನದ ಕಾರಕ ಗ್ರಹವಾದ ಮಂಗಳ (Mars) ಇಂದು (ಅಕ್ಟೋಬರ್ 22, 2021) ತುಲಾ ರಾಶಿಗೆ ಪ್ರವೇಶಿಸಿದೆ. ಮಂಗಳನ ರಾಶಿಚಕ್ರದ ಬದಲಾವಣೆಯು (Mangal Rashi Parivartan) ಎಲ್ಲಾ 12 ರಾಶಿಗಳ ಮೇಲೆ ಮಹತ್ವದ ಪ್ರಭಾವ ಬೀರಲಿದೆ. 5 ನೇ ಡಿಸೆಂಬರ್ 2021 ರವರೆಗೆ ಮಂಗಳ ತುಲಾ ರಾಶಿಯಲ್ಲಿಯೇ ಇರುತ್ತಾನೆ. ಈ ಸಂದರ್ಭದಲ್ಲಿ ಮಂಗಳ ಗ್ರಹವು ಕೆಲವು ರಾಶಿಚಕ್ರದ (Zodiac Signs) ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಿಶೇಷವಾಗಿ ಇದು ತುಲಾ ರಾಶಿಯವರ ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತಿದೆ.
ಈ ರಾಶಿಯವರ ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ :
ತುಲಾ ರಾಶಿಯ ಅಧಿಪತಿ ಶುಕ್ರ. ತುಲಾ ರಾಶಿಯಲ್ಲಿ ಮಂಗಳನ ಪ್ರವೇಶವು (Mangal Rashi Parivartan) ಶುಕ್ರ ಗ್ರಹಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ, ಜನರು ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆ ಇದೆ. ಪ್ರೇಮಿಯೊಂದಿಗಿನ ಸಂಬಂಧದಲ್ಲಿ ದೂರವಿರಬಹುದು. ಆದ್ದರಿಂದ ನಿಮ್ಮ ಸಂಗಾತಿಯನ್ನು ಬುದ್ಧಿವಂತಿಕೆಯಿಂದ ನಡೆಸಿಕೊಳ್ಳಿ.
ಇದನ್ನೂ ಓದಿ- Gangajal At Home: ನಿಮ್ಮ ಮನೆಯಲ್ಲಿಯೂ ಗಂಗಾಜಲ ಇದೆಯೇ? ಇಲ್ಲಿದೆ ಅದನ್ನಿಡುವ ಸರಿಯಾದ ಮಾರ್ಗ
ಈ ಸಮಯದಲ್ಲಿ ಈ ರಾಶಿಯ ಜನರು ಜಾಗರೂಕರಾಗಿರಿ:
ಈ ಸಮಯದಲ್ಲಿ, ತುಲಾ ರಾಶಿಚಕ್ರದ (Zodiac Signs) ಜನರು ಅತ್ಯಂತ ಜಾಗರೂಕರಾಗಿರಬೇಕು. ಇದರ ಹೊರತಾಗಿ, ವೃಷಭ, ವೃಶ್ಚಿಕ ಮತ್ತು ಮೀನ ರಾಶಿಯ ಜನರಿಗೆ ಈ ಸಮಯವು ಸವಾಲಿನದ್ದಾಗಿರುತ್ತದೆ. ಕನ್ಯಾ ರಾಶಿಯ ಜನರು ವಿವಾದಗಳನ್ನು ತಪ್ಪಿಸಬೇಕು.
ಇದನ್ನೂ ಓದಿ- Dhanteras 2021: ದೀಪಾವಳಿಯ ಹಿಂದಿನ ದಿನ ಈ ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಲಕ್ಷ್ಮೀಯ ಆಶೀರ್ವಾದ
ಈ ರಾಶಿಯವರಿಗೆ ಪ್ರಯೋಜನ ಸಿಗಲಿದೆ:
ಆದಾಗ್ಯೂ, ತುಲಾ ರಾಶಿಯಲ್ಲಿರುವ ಮಂಗಳ ಗ್ರಹವು ಮೇಷ, ಮಿಥುನ, ಕರ್ಕಾಟಕ ಮತ್ತು ಸಿಂಹ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿದೆ. ಈ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ಲಾಭ ಪಡೆಯುತ್ತಾರೆ. ಪೂರ್ಣ ಉತ್ಸಾಹದಿಂದ ಕೆಲಸ ಮಾಡುವಿರಿ. ಮತ್ತೊಂದೆಡೆ, ಕುಂಭ ರಾಶಿಯ ಜನರು ಪ್ರಯಾಣಕ್ಕೆ ಹೋಗಬಹುದು, ಇದು ಪ್ರಯೋಜನಕಾರಿಯಾಗಿದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ