Gas geyser: ಗ್ಯಾಸ್ ಗೀಜರ್ ಬಳಸಿ ಸ್ನಾನ ಮಾಡುವ ಮುನ್ನ ಎಚ್ಚರ! ಹೆಚ್ಚಾಗುತ್ತೆ ಈ ಆರೋಗ್ಯ ಸಮಸ್ಯೆ
Gas geyser: ಬೆಳಗ್ಗೆ ಹೊತ್ತು ಎದ್ದ ತಕ್ಷಣ ಬಿಸಿ ಬಿಸಿ ನೀರನ್ನು ಎಲ್ಲರೂ ಸ್ನಾನ ಮಾಡುತ್ತಾರೆ. ಆದರೆ ಇತ್ತಿಚಿನ ಜೀವನ ಶೈಲಿಗೆ ಒಗ್ಗಿಕೊಂಡ ಸಿಟಿ ಜನರು ಹೆಚ್ಚಾಗಿ ಗೀಜರ್ ಬಳಸಿ ನೀರು ಕಾಯಿಸುತ್ತಾರೆ.
Gas geyser: ಬೆಳಗ್ಗೆ ಹೊತ್ತು ಎದ್ದ ತಕ್ಷಣ ಬಿಸಿ ಬಿಸಿ ನೀರನ್ನು ಎಲ್ಲರೂ ಸ್ನಾನ ಮಾಡುತ್ತಾರೆ. ಆದರೆ ಇತ್ತಿಚಿನ ಜೀವನ ಶೈಲಿಗೆ ಒಗ್ಗಿಕೊಂಡ ಸಿಟಿ ಜನರು ಹೆಚ್ಚಾಗಿ ಗೀಜರ್ ಬಳಸಿ ನೀರು ಕಾಯಿಸುತ್ತಾರೆ. ಇದರಿಂದ ಸಮಯ ಉಳಿಯುವುದು ಎಷ್ಟು ಸತ್ಯವೋ ಆರೋಗ್ಯದ ಮೇಲೂ ಅಷ್ಟೇ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Mangal Gochar 2022 in Aries: 45 ದಿನ ಎಚ್ಚರಿಕೆಯಿಂದ ಇರಬೇಕು ಈ ರಾಶಿಯವರು. ! ಅಂಗಾರಕ ಯೋಗ ಹೆಚ್ಚಿಸಲಿದೆ ಸಮಸ್ಯೆ
ಎರಡು ವರ್ಷಗಳ ಕಾಲ 26 ಜನರ ಮೇಲೆ ನಡೆದ ಸಂಶೋಧನೆಯ ಪ್ರಕಾರ, ಗ್ಯಾಸ್ ಗೀಜರ್ ಬಳಸಿ ಸ್ನಾನ ಮಾಡುವವರ ಆರೋಗ್ಯದಲ್ಲಿ ಅನೇಕ ಏರುಪೇರುಗಳು ಕಂಡುಬರುತ್ತವೆ.
ಕೆಲವರ ಮನೆಗಳಲ್ಲಿ ತಾರಸಿಗೆ ಚಿಮಣಿ ಹಾಕದೆ ಗ್ಯಾಸ್ ಗೀಜರ್ ಇನ್ಸ್ಟಾಲ್ ಮಾಡಿರುತ್ತಾರೆ. ಇದರಿಂದ ಕಾರ್ಬನ್ ಮಾನಾಕ್ಸೈಡ್ ಅಲ್ಲೇ ಉಳಿದು ಜನರ ದೇಹ ಸೇರುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಕೆಲವು ಜನರಿಗೆ ಪಾರ್ಕಿನ್ಸನ್ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಸಿಲಿಂಡರ್ ನಿಂದ ಬಿಡುಗಡೆಯಾದ ಗ್ಯಾಸ್ ಬಾತ್ ರೂಮ್ ನಲ್ಲಿ ಇರುವಂತಹ ಗಾಳಿಯನ್ನು ತೆಗೆದುಕೊಂಡು ನಂತರ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆ ಮಾಡುತ್ತದೆ, ಅಲ್ಲಿಂದ ಮನುಷ್ಯರಿಗೆ ಕಾಯಿಲೆಗಳು ಆರಂಭವಾಗಬಹುದು.
ಜನರಿಗೆ ಇಂದು ಇದ್ದಕ್ಕಿದ್ದಂತೆ ತಲೆಸುತ್ತು ಬರುವುದು, ಪಾರ್ಶ್ವವಾಯು ಸಮಸ್ಯೆ ಎದುರಾಗುವುದು, ಕಾರ್ಡಿಯೋ ವ್ಯಾಸ್ಕುಲರ್ ಸಮಸ್ಯೆ ಕಂಡು ಬರುವುದು ಇವೆಲ್ಲವೂ ಗ್ಯಾಸ್ ಗೀಜರ್‌ನಿಂದಲೂ ಬರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.
ಗ್ಯಾಸ್ ಗೀಜರ್‌ಗಳಿಂದ ಉಂಟಾಗುವ ಸಮಸ್ಯೆಗಳು:
ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ದೇಹದಲ್ಲಿ ಸೇರುವುದು
ತಲೆನೋವು, ತಲೆಸುತ್ತು ಮತ್ತು ಮರೆವು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ
ಕೆಲವರು ಇದರಿಂದ ಕೋಮಾಗೆ ಸಹ ಹೋಗಬಹುದು
ಇದನ್ನೂ ಓದಿ: ಮುಂದಿನ ಒಂದು ವರ್ಷಗಳವರೆಗೆ ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ರಾಹು ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.