492 ವರ್ಷಗಳ ಬಳಿಕ ರಾಮ ಮಂದಿರ ಆವರಣದಲ್ಲಿ ಭವ್ಯ ದೀಪಾವಳಿ, ಈ ಬಾರಿಯ ವಿಶೇಷತೆ ಇದು
492 ವರ್ಷಗಳ ನಂತರ ಮೊದಲ ಬಾರಿಗೆ ರಾಮ ಜನ್ಮಭೂಮಿ ಕ್ಯಾಂಪಸ್ನಲ್ಲಿ ದೀಪಾವಳಿ ಆಚರಣೆ ನಡೆಯಲಿದ್ದು, ರಾಮ್‌ಲಾಲ ತಾತ್ಕಾಲಿಕ ದೇವಾಲಯದಲ್ಲಿ ಭವ್ಯ ಉತ್ಸವ ನಡೆಯಲಿದೆ.
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರದ (Ram Mandir) ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿದ್ದು, ಸುಮಾರು ಮೂರೂವರೆ ವರ್ಷಗಳಲ್ಲಿ ದೇವಾಲಯ ಸಿದ್ಧವಾಗಲಿದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ ಅಯೋಧ್ಯೆಯಲ್ಲಿ ದೀಪಾವಳಿ (Diwali)ಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ರಾಮ್‌ಲಾಲ ತಾತ್ಕಾಲಿಕ ದೇವಾಲಯದಲ್ಲಿ ಭವ್ಯ ಉತ್ಸವಕ್ಕೆ ತಯಾರಿ ಜರುಗಿದ್ದು ಅಯೋಧ್ಯೆಯಾದ್ಯಂತ ಸುಮಾರು 5.51 ಲಕ್ಷ ದಿಯಾಗಳನ್ನು ಬೆಳಗಿಸಲು ಯೋಜಿಸಲಾಗಿದೆ.
ದೀಪಗಳಿಂದ ಜಗಮಗಿಸಲಿರುವ ರಾಮ್‌ಲಾಲಾ:
492 ವರ್ಷಗಳ ನಂತರ ಮೊದಲ ಬಾರಿಗೆ ದಿವ್ಯ ದೀಪಾವಳಿಯನ್ನು ರಾಮ ಜನ್ಮಭೂಮಿ (Ram Janmabhoomi) ಸಂಕೀರ್ಣದಲ್ಲಿ ಆಯೋಜಿಸಲಾಗುವುದು. ಇದರೊಂದಿಗೆ ತಾತ್ಕಾಲಿಕ ದೇವಾಲಯದಲ್ಲಿರುವ ರಾಮಲಾಲ ಆಸ್ಥಾನವು ಅಸಂಖ್ಯಾತ ದೀಪಗಳಿಂದ ಬೆಳಗಲಿದೆ. ಈ ಮೊದಲು ಈ ಆವರಣದಲ್ಲಿ ಬಹಳ ಸೀಮಿತ ವ್ಯಾಪ್ತಿಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿತ್ತು ಮತ್ತು ಅರ್ಚಕರು ಮಾತ್ರ ದೀಪವನ್ನು ಬೆಳಗಿಸುತ್ತಿದ್ದರು.
ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣ 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ-ಟ್ರಸ್ಟ್
ತಾತ್ಕಾಲಿಕ ದೇವಾಲಯದಲ್ಲಿ ವಿಶೇಷ ಪೂಜೆ:
ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ರಾಮ್‌ಲಾಲ ತಾತ್ಕಾಲಿಕ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ಬಾರಿ ಅಯೋಧ್ಯೆಯು (Ayodhya) ಹೊಸ ದಾಖಲೆ ನಿರ್ಮಿಸಲು ಸಿದ್ಧವಾಗುತ್ತಿದ್ದು ಅಯೋಧ್ಯೆಯಾದ್ಯಂತ 5 ಲಕ್ಷ 51 ಸಾವಿರ ದಿಯಾಗಳನ್ನು ಬೆಳಗಿಸಲು ಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವೆಂಬರ್ 13 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಯೋಧ್ಯೆಯ ರಾಮ್ ಮಂದಿರ ಟ್ರಸ್ಟ್ ಖಾತೆಯಿಂದ 6 ಲಕ್ಷ ರೂ. ವಂಚನೆ
ತ್ರೇತಾ ಯುಗದ ದೀಪಾವಳಿ:
ರಾಮ್‌ಲಾಲಾದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, 'ಈ ಬಾರಿ ರಾಮ್‌ಲಾಲಾ ಆವರಣದಲ್ಲಿ ದೀಪಾವಳಿ ಆಚರಿಸಲಾಗುವುದು, ಇದು ವಿಶಿಷ್ಟ ಮತ್ತು ಅದ್ಭುತವಾಗಿರಲಿದೆ. ಈ ಬಾರಿ, ತ್ರೇತಾ ಯುಗದಲ್ಲಿ ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿದ್ದ ದೀಪಾವಳಿಯ ದರ್ಶನವನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು ಎಂದು ಹೇಳಿದರು.