ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣ 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ-ಟ್ರಸ್ಟ್

Last Updated : Aug 20, 2020, 03:36 PM IST
ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣ 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ-ಟ್ರಸ್ಟ್  title=
ಸಾಂದರ್ಭಿಕ ಚಿತ್ರ

ನವದೆಹಲಿ-ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣದ ಕುರಿತು ಚರ್ಚೆ ನಡೆಸಲು ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ಗುರುವಾರ (ಆಗಸ್ಟ್ 20) ನವದೆಹಲಿಯಲ್ಲಿ ಸಭೆ ಸೇರಿದರು.

ಸಭೆಯ ನಂತರ, ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ಶ್ರೀ ರಾಮ್ ಜನ್ಮಭೂಮಿ ಮಂದಿರದ ನಿರ್ಮಾಣ ಪ್ರಾರಂಭವಾಗಿದೆ ಮತ್ತು ಸಿಬಿಆರ್ಐ ರೂರ್ಕಿ, ಐಐಟಿ ಮದ್ರಾಸ್ ಮತ್ತು ಲಾರ್ಸೆನ್ ಮತ್ತು ಟೌಬ್ರೊದ ಎಂಜಿನಿಯರ್‌ಗಳು ಪ್ರಸ್ತುತ ಮಂದಿರ ಸ್ಥಳದಲ್ಲಿ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು. ರಾಮ್ ದೇವಾಲಯದ ಟ್ರಸ್ಟ್ 36-40 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳ ಪ್ರಕಾರ ಅಯೋಧ್ಯೆಯ ರಾಮ ದೇವಾಲಯವನ್ನು ನಿರ್ಮಿಸಲಾಗುವುದು. ಭೂಕಂಪಗಳು, ಬಿರುಗಾಳಿಗಳು ಮತ್ತು ಇತರ ನೈಸರ್ಗಿಕ ವಿಪತ್ತುಗಳನ್ನು ಉಳಿಸಿಕೊಳ್ಳಲು ಈ ದೇವಾಲಯವನ್ನು ನಿರ್ಮಿಸಲಾಗುವುದು ಮತ್ತು ಹಿಸ್ಟೋಟಿಕ್ ದೇವಾಲಯದ ನಿರ್ಮಾಣದಲ್ಲಿ ಯಾವುದೇ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಟ್ರಸ್ಟ್ ಟ್ವೀಟ್ ನಲ್ಲಿ ತಿಳಿಸಿದೆ.

ಇದನ್ನು ಓದಿ: "Ram Mandir ಕುರಿತು ಬಾಯ್ಮುಚ್ಚಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೊರಟು ಹೋಗಿ" ಒವೈಸಿಗೆ ತಿರುಗೇಟು ನೀಡಿದ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ

"ಮಂದಿರ ನಿರ್ಮಾಣಕ್ಕಾಗಿ, ತಾಮ್ರದ ಫಲಕಗಳನ್ನು ಪರಸ್ಪರ ಕಲ್ಲಿನ ಬ್ಲಾಕ್ಗಳನ್ನು ಬೆಸೆಯಲು ಬಳಸಲಾಗುತ್ತದೆ. ಫಲಕಗಳು 18 ಇಂಚು ಉದ್ದ, 30 ಮಿಮೀ ಅಗಲ ಮತ್ತು 3 ಮಿಮೀ ಆಳದಲ್ಲಿರಬೇಕು. ಅಂತಹ ರಚನೆಗಳು ಒಟ್ಟು ರಚನೆಯಲ್ಲಿ ಅಗತ್ಯವಾಗಬಹುದು. ನಾವು ಶ್ರೀ ರಾಮ್ ಭಕ್ತರಿಗೆ ಅಂತಹ ತಾಮ್ರದ ಫಲಕಗಳನ್ನು ಟ್ರಸ್ಟ್‌ಗೆ ದಾನ ಮಾಡಲು ಮನವಿ ಮಾಡಿಕೊಳ್ಳುತ್ತೇವೆ "ಎಂದು ಟ್ರಸ್ಟ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

"ದಾನಿಗಳು ಈ ಫಲಕಗಳಲ್ಲಿ ಕುಟುಂಬದ ಹೆಸರುಗಳು, ಮೂಲದ ಸ್ಥಳ ಅಥವಾ ಅವರ ಸಮುದಾಯ ದೇವಾಲಯಗಳ ಹೆಸರುಗಳನ್ನು ಕೆತ್ತಬಹುದು. ಈ ರೀತಿಯಾಗಿ, ತಾಮ್ರದ ಫಲಕಗಳು ಈ ದೇಶದ ಏಕತೆಯನ್ನು ಸಂಕೇತಿಸುತ್ತದೆ ಮಾತ್ರವಲ್ಲದೆ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆಗೆ ಸಾಕ್ಷಿಯಾಗಿದೆ" ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ್ ದೇವಾಲಯದ 'ಭೂಮಿ ಪೂಜೆನ್' ನಡೆಸಿ ದೇವಾಲಯದ ಅಡಿಪಾಯ ಹಾಕಿದ್ದರು ಎಂದು ನೆನಪಿಸಿಕೊಳ್ಳಬಹುದು.

Trending News