ನವದೆಹಲಿ : ದೀಪಾವಳಿ ಹಬ್ಬಕ್ಕೆ (Diwali ) ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ದೀಪಾವಳಿಗೂ ಮುನ್ನ ಜನರು ತಮ್ಮ ಮನೆಗಳನ್ನು ಸ್ವಚಗೊಳಿಸುವುದು, ಸುಣ್ಣ ಬಣ್ಣ ಬಳಿಯುವುದು ವಾಡಿಕೆ.  ದೀಪಾವಳಿಯ (Diwali 2021) ದಿನದಂದು ಹೊಸ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ದೇವಿಯನ್ನು (Lakshmi pooja) ಪೂಜಿಸಲಾಗುತ್ತದೆ. ಆದರೆ ಅನೇಕ ಸಲ ಮನೆಯನ್ನು ಶುಚಿಗೊಳಿಸುವಾಗ ಕೆಲವು ವಸ್ತುಗಳು ಹಾಗೆಯೇ ಉಳಿದುಬಿಡುತ್ತವೆ. ಇದು ನಮ್ಮ ಜೀವನದ ಮೇಲೆ ಭಾರೀ ಪ್ರಭಾವ ಬೀರಬಹುದು. ಈ ವಸ್ತುಗಳು ಮನೆಯೊಳಗಿದ್ದರೆ, ಆ ಮನೆಯಲ್ಲಿ ಲಕ್ಷ್ಮೀ ನೆಲೆಸುವುದೇ (Godess lakshmi) ಇಲ್ಲವಂತೆ. ಈ ಮನೆಯಲ್ಲಿ ಸದಾ ಹಣದ ಕೊರತೆ ಕಾದುತ್ತಿರುತ್ತದೆಯಂತೆ.  


COMMERCIAL BREAK
SCROLL TO CONTINUE READING

ಮನೆಯಲ್ಲಿ ಇಡಲೇಬಾರದು ಈ ವಸ್ತುಗಳನ್ನು :
ನಿಂತು ಹೋದ ಗಡಿಯಾರ :
ಅದು ಮನೆಯ ಗೋಡೆಯಾಗಲಿ (Wall clock) ಅಥವಾ ವಾಚ್ ಆಗಿರಲಿ, ಕೆಟ್ಟು ನಿಂತ ಗಡಿಯಾರವನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ಗಡಿಯಾರವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ನಿಮ್ಮ ಮನೆಯಲ್ಲಿ ಕೆಟ್ಟು ನಿಂತ ಗಡಿಯಾರವಿದ್ದರೆ,   ದೀಪಾವಳಿಗೆ (Diwali) ಮುಂಚಿತವಾಗಿ ಅದನ್ನು ಎಸೆಯಿರಿ. 


ಇದನ್ನೂ ಓದಿ: Mars Transit 2021: ಶೀಘ್ರದಲ್ಲಿಯೇ ತುಲಾ ರಾಶಿಗೆ ಮಂಗಳನ ಪ್ರವೇಶ, ಯಾವ ರಾಶಿಗಳ ಮೇಲೆ ಏನು ಪ್ರಭಾವ?


ಮುರಿದ ವಿಗ್ರಹಗಳು : 
ಮುರಿದ ದೇವರ ವಿಗ್ರಹವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಅಂತಹ ವಿಗ್ರಹಗಳು ಮನೆಯಲ್ಲಿ ದುರದೃಷ್ಟವನ್ನು ತಂದೊಡ್ಡುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಮನೆಯನ್ನು ಶುಚಿಮಾಡುವಾಗ ಇಂಥಹ ವಿಗ್ರಹಗಲು ಕಂಡು ಬಂದಲ್ಲಿ ಅದನ್ನು   ದೇವಸ್ಥಾನಕ್ಕೆ ಕೊಟ್ಟು, ಅದರ ಜಾಗಕ್ಕೆ ಹೊಸ ವಿಗ್ರಹವನ್ನು ತನ್ನಿ. 


ಮುರಿದ ಪೀಠೋಪಕರಣಗಳು  : 
ಈ ದೀಪಾವಳಿ ಶುಚಿಗೊಳಿಸುವ (diwali cleaning) ಸಮಯದಲ್ಲಿ, ಮನೆಯಲ್ಲಿ ಯಾವುದೇ ಮುರಿದ ಪೀಠೋಪಕರಣಗಳು ಇದ್ದರೆ, ಅದನ್ನು ಮನೆಯಿಂದ ಹೊರಹಾಕಿ. ಮುರಿದ ಮೇಜು, ಕುರ್ಚಿ ಅಥವಾ ಮಂಚದಂಥಹ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಯಾವಾಗಲೂ ಮನೆಯಲ್ಲಿ ಸರಿಯಾದ ಪೀಠೋಪಕರಣಗಳನ್ನು ಇಟ್ಟುಕೊಳ್ಳಿ. ವಾಸ್ತು ಪ್ರಕಾರ (vastu shastra) , ಮುರಿದ ಪೀಠೋಪಕರಣಗಳು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.


ಇದನ್ನೂ ಓದಿ:  Know Your Rejections: ನಿರಾಕರಣೆ ಎದುರಾದಾಗ ಯಾವ ರಾಶಿಯ ಜನರ ವರ್ತನೆ ಹೇಗಿರುತ್ತೆ


ಮುರಿದ ಅಥವಾ ಒಡೆದ ಗಾಜು :
 ಕಿಟಕಿ, ಬಲ್ಬ್ ಅಥವಾ ಕನ್ನಡಿ ಒಡೆದಿದ್ದರೆ ಅಥವಾ ಬಿರುಕು ಬಿಟ್ಟಿದ್ದರೆ, ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಒಡೆದ ಗಾಜಿನ ವಸ್ತುಗಳು ಮನೆಯೊಳಗೆ ನಕಾರಾತ್ಮಕ ಭಾವನೆಗಳನ್ನು (negetive energy) ತರುತ್ತವೆ ಎಂದು ನಂಬಲಾಗಿದೆ.


ಮುರಿದ ಪಾತ್ರೆಗಳು : 
ಮುರಿದ ಪಾತ್ರೆಗಳನ್ನು ಎಂದಿಗೂ ಮನೆಯ ಅಡುಗೆಮನೆಯಲ್ಲಿ ಇಡಬಾರದು. ಈ ದೀಪಾವಳಿ ಶುಚಿಗೊಳಿಸುವ ಸಮಯದಲ್ಲಿ, ನಿಮ್ಮ ಮನೆಯಿಂದ ಮುರಿದ ಅಥವಾ ಬಿರುಕುಗೊಂಡ ಪಾತ್ರೆಗಳನ್ನು ಹೊರತೆಗೆಯಿರಿ. ಮುರಿದ ಪಾತ್ರೆಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. 


ಇದನ್ನೂ ಓದಿ:  Chandra Grahan 2021: ಈ ದಿನ ಸಂಭವಿಸಲಿದೆ ಈ ವರ್ಷದ ಕೊನೆಯ ಚಂದ್ರಗ್ರಹಣ, ಈ ರಾಶಿಗಳ ಮೇಲೆ ಹೆಚ್ಚು ಪ್ರಭಾವ


ಹಾಳಾದ ಚಪ್ಪಲಿ  ಬೂಟುಗಳು : 
ನಿಮ್ಮ ಮನೆಯಲ್ಲಿ ಹಳೆಯ ಪಾದರಕ್ಷೆಗಳು ಮತ್ತು ಚಪ್ಪಲಿಗಳು ಹರಿದಿದ್ದರೆ, ಅವುಗಳಿಗೆ ಮನೆಯಲ್ಲಿ ಜಾಗ ನೀಡಬೇಡಿ. ಹರಿದ ಬೂಟುಗಳು ಮತ್ತು ಚಪ್ಪಲಿಗಳು ಮನೆಯೊಳಗೆ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ತರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ