ನಿಮ್ಮ ಕೈಯಲ್ಲಿರುವ ವಾಚ್‌ ಕೂಡಾ ಸಮಸ್ಯೆ ಹೆಚ್ಚಿಸಬಹುದು, ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ವಾಸ್ತು ಪ್ರಕಾರ, ಚಿನ್ನದ ಮತ್ತು ಬೆಳ್ಳಿ ಬಣ್ಣದ ಕೈಗಡಿಯಾರಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.   

Written by - Ranjitha R K | Last Updated : Oct 8, 2021, 03:21 PM IST
  • ಕೈಗಡಿಯಾರದ ಡಯಲ್ ತುಂಬಾ ದೊಡ್ಡದಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
  • ತುಂಬಾ ಚಿಕ್ಕ ಡಯಲ್ ಇರುವ ವಾಚ್ ಕೂಡ ಧರಿಸಬೇಡಿ.
  • ಕೈಗಡಿಯಾರವನ್ನು ದಿಂಬಿನ ಕೆಳಗೆ ಇಡಬೇಡಿ
ನಿಮ್ಮ  ಕೈಯಲ್ಲಿರುವ ವಾಚ್‌ ಕೂಡಾ ಸಮಸ್ಯೆ ಹೆಚ್ಚಿಸಬಹುದು, ಈ ತಪ್ಪುಗಳಾಗದಂತೆ ನೋಡಿಕೊಳ್ಳಿ title=
ಕೈಗಡಿಯಾರದ ಡಯಲ್ ತುಂಬಾ ದೊಡ್ಡದಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. (file photo)

ನವದೆಹಲಿ : ನಿಮ್ಮ ಕೈಯಲ್ಲಿರುವ ಗಡಿಯಾರ ಕೂಡಾ, ನಿಮ್ಮ ಅದೃಷ್ಟವನ್ನೂ ಬದಲಾಯಿಸಬಹುದು. ಆದರೆ ಈ ಅದೃಷ್ಟಗಾಗಿ, ನೀವು ಅದನ್ನು ಸರಿಯಾಗಿ ಧರಿಸುವುದು ಬಹಳ ಮುಖ್ಯ.  ಅದಕ್ಕಾಗಿ ಈ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೈಗಡಿಯಾರವನ್ನು (Wrist watch Vastu) ಧರಿಸುವಾಗ ಈ ವಿಷಯಗಳನ್ನು  ಸದಾ ನೆನಪಿನಲ್ಲಿಟ್ಟುಕೊಳ್ಳಿ.

ಬಣ್ಣದ ಬಗ್ಗೆ ತಿಳಿದಿರಲಿ : 
ವಾಸ್ತು ಪ್ರಕಾರ (Vastu Tips), ಚಿನ್ನದ ಮತ್ತು ಬೆಳ್ಳಿ ಬಣ್ಣದ ಕೈಗಡಿಯಾರಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನೀವು ಉದ್ಯೋಗ ಸಂದರ್ಶನಕ್ಕೆ ಅಥವಾ ಪರೀಕ್ಷೆಗೆ ಹೋಗುವಾಗ ಚಿನ್ನದ (watch colour) ಅಥವಾ ಬೆಳ್ಳಿಯ ಬಣ್ಣದ ಕೈ ಗಡಿಯಾರವನ್ನು ಧರಿಸುವುದು ಒಳ್ಳೆಯದು. 

ಇದನ್ನೂ ಓದಿ : ಈ ಐದು ಸಂಕೇತಗಳು ಎದುರಾದರೆ ಅದು ಧನ ಲಾಭದ ಮುನ್ಸೂಚನೆ

ಕೈಗಡಿಯಾರವನ್ನು ದಿಂಬಿನ ಕೆಳಗೆ ಇಡಬೇಡಿ :
ಕೆಲವರು ರಾತ್ರಿ ಮಲಗುವ ವೇಳೆ, ಕೈಗಡಿಯಾರಗಳನ್ನು (Wrist watch Vastu) ತೆಗೆದು ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸ ಬಹಳಷ್ಟು ಮಂದಿಗೆ ಇದೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಕೈಗಡಿಯಾರವನ್ನು ಎಂದಿಗೂ ದಿಂಬಿನ ಕೆಳಗೆ ಇಡಬೇಡಿ. ಇದು ನಿಮ್ಮ ಮನಸ್ಸಿಗೆ ಋಣಾತ್ಮಕ ಶಕ್ತಿಯನ್ನು ತುಂಬುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. 

ಯಾವಾಗಲೂ ಸೂಕ್ತವಾದ ಗಡಿಯಾರವನ್ನು ಧರಿಸಿ :
ಸಡಿಲವಾದ ಪಟ್ಟಿಯೊಂದಿಗೆ ಕೈಗಡಿಯಾರವನ್ನು ಎಂದಿಗೂ ಧರಿಸಬೇಡಿ. ಈ ರೀತಿಯ ಗಡಿಯಾರವನ್ನು ಧರಿಸುವುದರಿಂದ ನಿಮ್ಮ ಗಮನ ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗುವುದಿಲ್ಲ. ವಾಸ್ತು (Vastu Shastra) ಪ್ರಕಾರ ಕೈಗೆ ಫಿಟ್ ಆಗದೇ ಇರುವ ಅಂದರೆ ಲೂಸ್‌ ಇರುವ ವಾಚ್‌ ಧರಿಸಿದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯುವಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಕೈಗಡಿಯಾರವನ್ನು ಧರಿಸುವಾಗ, ಪಟ್ಟಿಯು ಮಣಿಕಟ್ಟಿನ ಮೂಳೆಯ ಬಳಿ ಇರುವಂತೆ ನೋಡಿಕೊಳ್ಳಿ. 

ಇದನ್ನೂ ಓದಿ : Feng Shui Tips: ನಿಮ್ಮ ಪ್ರತಿ ಆಸೆಯನ್ನೂ ಪೂರೈಸಬಲ್ಲದು ನಿಮ್ಮ ಮನೆ, ಅಂಗಡಿಯಲ್ಲಿರುವ ಈ ರೀತಿಯ ಕುದುರೆ ಪ್ರತಿಮೆ

ಕೈ ಗಡಿಯಾರದ ಡಯಲ್ ಹೀಗಿರಲಿ : 
ಕೈಗಡಿಯಾರವನ್ನು ಧರಿಸುವಾಗ, ಗಡಿಯಾರದ ಡಯಲ್ ತುಂಬಾ ದೊಡ್ಡದಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ದೊಡ್ಡ ಡಯಲ್ ವಾಚ್ ಧರಿಸುವುದರಿಂದ ನಿಮಗೆ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಹಾಗೆಂದು ಅತ್ಯಂತ ಸಣ್ಣ ಡಯಲ್ ಹೊಂದಿರುವ ಗಡಿಯಾರವನ್ನು ಧರಿಸಬೇಡಿ.

ಯಾವ ಕೈಗೆ ವಾಚ್‌ ಕಟ್ಟಬೇಕು : 
ವಾಸ್ತು ಪ್ರಕಾರ, ನೀವು ಯಾವ ಕೈಗೆ ಗಡಿಯಾರ ಧರಿಸಬೇಕೆಂಬ ನಿಯಮವಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಬಲಗೈ ಅಥವಾ ಎಡಗೈಯಲ್ಲಿ ವಾಚ್ ಧರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News