ಬೆಂಗಳೂರು:  ಹುಟ್ಟಿದ ಮೇಲೆ ಸಾವು ಖಚಿತ. ಆದರೂ ನಮ್ಮ ಕುಟುಂಬದವರಾಗಲಿ, ಸ್ನೇಹಿತರಾಗಲಿ ಅಥವಾ ನಮ್ಮ ಪ್ರೀತಿ ಪಾತ್ರರು ಯಾರೇ ಆದರೂ ನಮ್ಮನ್ನು ಅಗಲಿದಾಗ, ಮೃತ್ಯು ಅವರನ್ನು ನಮ್ಮಿಂದ ಬೇರ್ಪಡಿಸಿದಾಗ ಆ ಆಘಾತವನ್ನು ಸುಲಭವಾಗಿ ಆರಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವರು ತಮ್ಮ ಮೃತ ಪ್ರೀತಿ ಪಾತ್ರರ (Loved Ones Death) ನೆನಪಿನಲ್ಲಿ ಅವರ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಎಂದಿಗೂ ಕೂಡ ಇದನ್ನು ಮಾಡಬಾರದು. ಸತ್ತ ವ್ಯಕ್ತಿಯ ಬಟ್ಟೆಗಳನ್ನು ಧರಿಸುವುದನ್ನು ಸನಾತನ ಧರ್ಮದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದರ ಹಿಂದಿನ ಕಾರಣಗಳನ್ನು ಸಹ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ಮೃತ ಪ್ರೀತಿ ಪಾತ್ರರ ಬಟ್ಟೆಗಳನ್ನು ಧರಿಸಬಾರದು...
ಸತ್ತವರ ಬಟ್ಟೆಗಳನ್ನು ಧರಿಸದಿರಲು ಒಂದು ದೊಡ್ಡ ಮತ್ತು ಪ್ರಮುಖ ಕಾರಣವೆಂದರೆ ಹಾಗೆ ಮಾಡುವುದರಿಂದ ಅದು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಮೃತ ಪ್ರೀತಿ ಪಾತ್ರರ (Loved Ones Death) ಬಟ್ಟೆಗಳನ್ನು ಧರಿಸುವುದು ಅವರ ನೆನಪು ನಿಮ್ಮನ್ನು ಹೆಚ್ಚು ಹೆಚ್ಚು ಕಾಡುತ್ತದೆ ಮತ್ತು ಅದರಿಂದ ಮಾನಸಿಕವಾಗಿ ದುರ್ಬಲಗೊಳ್ಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ಮೃತ ಕುಟುಂಬ ಸದಸ್ಯರನ್ನು ಮರೆತು ವ್ಯಕ್ತಿ ಮುಂದೆ ಸಾಗಲು ಸಾಧ್ಯವಿಲ್ಲ. ಆದ್ದರಿಂದ, ಮೃತರ ಬಟ್ಟೆಗಳನ್ನು ನಿರ್ಗತಿಕರಿಗೆ ದಾನ ಮಾಡುವುದು ಉತ್ತಮ.


ಇದನ್ನೂ ಓದಿ- Shree Lakshmi Chalisa: ಈ ದಿನ ಲಕ್ಷ್ಮೀ ದೇವಿ ಮಂತ್ರ ಜಪಿಸುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಸಿಗುತ್ತೆ ಮುಕ್ತಿ


ಸತ್ತ ಜನರ ಆತ್ಮಗಳು ಸಹ ತಮ್ಮ ಪ್ರೀತಿಪಾತ್ರರ ಬಾಂಧವ್ಯವನ್ನು ಬಿಡಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ಸತ್ತವರ ವಸ್ತುಗಳನ್ನು ಇಟ್ಟುಕೊಳ್ಳುವುದು ಅವರನ್ನು ತಮ್ಮೊಂದಿಗೆ ಕಟ್ಟಿಹಾಕಿದಂತೆ ಎಂದು ಹೇಳಲಾಗುತ್ತದೆ. ಆದರೆ ಆತ್ಮಗಳು (Soul) ಅಲೆದಾಡಬಾರದು, ಆದಷ್ಟು ಬೇಗ ಹೊಸ ದೇಹವನ್ನು ಪ್ರವೇಶಿಸಬೇಕು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಸೆಪ್ಟೆಂಬರ್ ಮೊದಲ ವಾರದಲ್ಲೇ ಎರಡು ಬೃಹತ್ ಗ್ರಹಗಳ ರಾಶಿ ಪರಿವರ್ತನೆ, ಬದಲಾಗಲಿದೆ ಈ ನಾಲ್ಕು ರಾಶಿಗಳ ಭಾಗ್ಯ


ಕುಟುಂಬದ ಸದಸ್ಯನ ಮರಣದ ನಂತರ, ಆತನ ಆತ್ಮಕ್ಕೆ ಶಾಂತಿಗಾಗಿ ದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ, ಸತ್ತವರ ಬಟ್ಟೆ ಮತ್ತು ವಸ್ತುಗಳನ್ನು ಸಹ ದಾನ ಮಾಡಿದರೆ ಉತ್ತಮ, ಇದರಿಂದ ಅಗತ್ಯವಿರುವವರಿಗೆ ಆ ವಸ್ತುಗಳನ್ನು ಬಳಸಲೂ ಕೂಡ ಅವಕಾಶ ಸಿಗಲಿದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. )


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ